ಹಿಮಾಂಶು ಮಂತ್ರಿ ಸಿಡಿಸಿದ ಅಜೇಯ ಶತಕದ (134) ನೆರವಿನಿಂದ ಮಧ್ಯಪ್ರದೇಶ, ಮಂಗಳವಾರ ಆಲೂರಿನ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಬೆಂಗಾಲ್ ವಿರುದ್ಧ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ಸ್ ನಲ್ಲಿ ಪಂದ್ಯದಲ್ಲಿ ಚೇತರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮಧ್ಯಪ್ರದೇಶ, ಮೊದಲ ದಿನದ ಅಂತ್ಯದಲ್ಲಿ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 86 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 271 ರನ್ ಮಾಡಿತ್ತು. ದಿನದ ಅಂತ್ಯದಲ್ಲಿ ಹಿಮಾಂಶು ಮಂತ್ರಿ ಅಜೇಯ 134 ಹಾಗೂ ಪುನೀತ್ ಡೇಟಿ 9 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದರು.
ಮಧ್ಯಪ್ರದೇಶ 97 ರನ್ ಸೇರಿಸುವಷ್ಟರಲ್ಲಿ ನಾಲ್ಕು ಪ್ರಮುಖ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.

ಐದನೇ ವಿಕೆಟ್ ಜೊತೆಯಾಟದಲ್ಲಿ ಹಿಮಾಂಶು ಮಂತ್ರಿ ಹಾಗೂ ಅಕ್ಷತ ರಘುವಂಶಿ 123 ರನ್ ಸೇರಿಸಿ ತಂಡದ ಮೊತ್ತವನ್ನು 220 ಕ್ಕೆ ಹೆಚ್ಚಿಸುವ ಮೂಲಕ ಕುಸಿದ ತಂಡಕ್ಕೆ ಚೇತರಿಕೆ ನೀಡಿದರು.
ಅಕ್ಷತ ರಘುವಂಶಿ 81 ಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 63 ರನ್ ಸಿಡಿಸಿ ಆಕಾಶ್‌ದೀಪ್ ಬೌಲಿಂಗ್‌ನಲ್ಲಿ ಎಲ್‌ಬಿ ಆಗಿ ಹೊರಬಿದ್ದರು.
ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಸರನ್ಶ್ ಜೈನ್ 17 ರನ್ ಮಾಡಿ ಆಕಾಶ್‌ದೀಪ್‌ಗೆ ಎರಡನೇ ಬಲಿಯಾದರು.
ಬೆಂಗಾಲ್ ಪರ ಮುಕೇಶ್ ಕುಮಾರ್, ಆಕಾಶ್ ತಲಾ ಎರಡು ವಿಕೆಟ್ ಉರುಳಿಸಿದರು.