M.S.Dhoni- Suresh Raina -ಲಾಡ್ರ್ಸ್ ಅಂಗಣದಲ್ಲಿ ಆಪ್ತಮಿತ್ರರು..!

ಹೆಚ್ಚಿನವರು ಅಂದುಕೊಂಡಿದ್ದರು. ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಮತ್ತು ಸುರೇಶ್ ರೈನಾ ನಡುವಿನ ಗೆಳೆತನದಲ್ಲಿ ಬಿರುಕು ಬಿಟ್ಟಿದೆ ಎಂದು.
ಆದ್ರೆ ಇದು ನಿಜವಲ್ಲ. ಸುಳ್ಳು. ಯಾರೇ ಏನೇ ಅಂದ್ರೂ ನಾವಿಬ್ಬರು ಆಪ್ತ ಮಿತ್ರರು. ವೃತ್ತಿ ಬದುಕಿನಲ್ಲಿ ಏನು ಬೇಕಾದ್ರೂ ಆಗಲಿ, ವೈಯಕ್ತಿಕ ಬದುಕಿನಲ್ಲಿ ನಮ್ಮಿಬ್ಬರ ಸ್ನೇಹದಲ್ಲಿ ಯಾವುದು ಒಡಕು ಇಲ್ಲ. ಬಿರುಕು ಇಲ್ಲ.
ಇದಕ್ಕೆ ಸಾಕ್ಷಿ ಕ್ರಿಕೆಟ್ ಕಾಶಿ ಲಾಡ್ರ್ಸ್ ಅಂಗಣ. ಲಾಡ್ಸ್ ಅಂಗಣದಲ್ಲಿ ಜೊತೆಯಾಗಿ ನಿಂತುಕೊಂಡ ಫೋಟೋ.
ಹೌದು, ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ

ಟೀಮ್ ಇಂಡಿಯಾದ ಮಾಜಿ ಆಟಗಾರರ ಸಮಾಗಮ ಆಗಿದೆ.
ಕಳೆದ ಐಪಿಎಲ್ ವೇಳೆ ಸುರೇಶ್ ರೈನಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಮೆಗಾ ಹರಾಜಿನಲ್ಲಿ ಖರೀದಿ ಮಾಡಿರಲಿಲ್ಲ. ಅದೇ ಸೋಲ್ಡ್ ಔಟ್ ಆಗಿದ್ದ ಸುರೇಶ್ ರೈನಾ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಸಿಕ್ಕಿದ್ರೂ, ರೈನಾ ಅವರನ್ನು ಕಡೆಗಣಿಸಿತ್ತು.
ಈ ಬಗ್ಗೆ ಸಿಎಸ್ ಕೆ ತಂಡದ ಕಿಂಗ್ ಮೇಕರ್ ಮಹೇಂದ್ರ ಸಿಂಗ್ ಧೋನಿ ಕೂಡ ಮೌನಕ್ಕೆ ಶರಣಾಗಿದ್ದರು. ಸುರೇಶ್ ರೈನಾ ಅವರನ್ನು ಯಾಕೆ ಖರೀದಿ ಮಾಡಿಲ್ಲ ಎಂಬುದಕ್ಕೆ ಒಂದು ಮಾತನ್ನು ಕೂಡ ಧೋನಿ ಹೇಳಿರಲಿಲ್ಲ.
ಈ ನಡುವೆ, ಸುರೇಶ್ ರೈನಾ ಆರ್ ಸಿಬಿಗೆ ಬೆಂಬಲ ಸೂಚಿಸುತ್ತಾ ಟ್ವಿಟ್ ಕೂಡ ಮಾಡಿದ್ದರು.
ಆಗ ಬಹುತೇಕ ಮಂದಿ ಧೋನಿ ಮತ್ತು ಸುರೇಶ್ ರೈನಾ ನಡುವೆ ಮನಸ್ತಾಪವಾಗಿದೆ ಎಂದು ಅಂದುಕೊಂಡಿದ್ದರು.
ಆದ್ರೆ ಅವರಿಬ್ಬರ ನಡುವೆ ಏನು ಆಗಿಲ್ಲ. ಕಳೆದ ವಾರ ಅಂದ್ರೆ ಜುಲೈ 7ರಂದು ಧೋನಿ 41ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಸುರೇಶ್ ರೈನಾ ಶುಭ ಹಾರೈಸಿದ್ದರು. ಆದ್ರೆ ರವೀಂದ್ರ ಜಡೇಜಾ ಮತ್ತು ಯುವರಾಜ್ ಸಿಂಗ್ ಧೋನಿಗೆ ವಿಶ್ ಮಾಡಿರಲಿಲ್ಲ.
ಇನ್ನೊಂದೆಡೆ ಧೋನಿ, ರೈನಾ ಜೊತೆ ಹರ್ಭಜನ್ ಸಿಂಗ್ ಕೂಡ ಲಾಡ್ರ್ಸ ನಲ್ಲಿ ಅಂಗಣದ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದರು. ಸಿಎಸ್ ಕೆ ತಂಡದ ನಾಯಕನ ಜೊತೆ ಮಾಜಿ ಸಿಎಸ್ ಕೆ ತಂಡದ ಮಾಜಿ ಆಟಗಾರರು ಕಾಣಿಸಿಕೊಂಡಿರುವುದು ಸಿಎಸ್ ಕೆ ಅಭಿಮಾನಿಗಳಿಗಂತೂ ಖುಷಿಯನ್ನುಂಟು ಮಾಡಿದೆ.
ಇನ್ನೊಂದೆಡೆ ಬಿಸಿಸಿಐ ಬಿಗ್ ಬಾಸ್ ಮತ್ತು ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಕಳೆದ ಎರಡು ವಾರಗಳಿಂದ ಇಂಗ್ಲೆಂಡ್ ನಲ್ಲಿದ್ದಾರೆ.
ಸೌರವ್ ಗಂಗೂಲಿ ಕೂಡ ತನ್ನ ಆಪ್ತ ಗೆಳೆಯ ಸಚಿನ್ ತೆಂಡುಲ್ಕರ್ ಜೊತೆ ಸೇರಿಕೊಂಡು 50ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು.