M.S.Dhoni – ಬೆನ್ನಟ್ಟಿದ್ದ ಅಭಿಮಾನಿಗಳು.. ತಪ್ಪಿಸಿಕೊಂಡಿದ್ದು ಹೇಗೆ ?

ಮಹೇಂದ್ರ ಸಿಂಗ್ ಧೋನಿ.. ಟೀಮ್ ಇಂಡಿಯಾದ ಮಾಜಿ ನಾಯಕ. ವಿಶ್ವ ಕ್ರಿಕೆಟ್ ನ ಗ್ರೇಟ್ ಲೀಡರ್.
ಹೌದು, ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಎರಡು ವರ್ಷಗಳಾಗಿವೆ. ಕೇವಲ ಐಪಿಎಲ್ ನಲ್ಲಿ ಮಾತ್ರ ಆಡುತ್ತಿದ್ದಾರೆ.
ಆದ್ರೂ ಮಹೇಂದ್ರ ಸಿಂಗ್ ಧೋನಿಯವರನ್ನು ಆರಾಧಿಸುವ ಅಭಿಮಾನಿಗಳ ಸಂಖ್ಯೆ ಮಾತ್ರ ಒಂಚೂರು ಕಮ್ಮಿಯಾಗಿಲ್ಲ.
ಭಾರತದಲ್ಲಂತೂ ಧೋನಿ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಹಾಗೇ ವಿಶ್ವ ಮಟ್ಟದಲ್ಲೂ ಧೋನಿಯವರಿಗೆ ಅಪಾರ ಸಂಖ್ಯೆಯ ಅಭಿಮಾನಳಿದ್ದಾರೆ.
ಎಲ್ಲರಿಗೂ ಗೊತ್ತಿರುವ ಹಾಗೇ ಸದ್ಯ ಮಹೇಂದ್ರ ಸಿಂಗ್ ಧೋನಿ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. 12ನೇ ವರ್ಷದ ಮದುವೆ ವಾರ್ಷಿಕೋತ್ಸವ, 41ನೇ ಹುಟ್ಟು ಹಬ್ಬವನ್ನು ಲಂಡನ್ ನಲ್ಲಿ ಧೋನಿ ಆಚರಿಸಿಕೊಂಡಿದ್ದರು.
ಈ ನಡುವೆ, ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಟಿ-20 ಪಂದ್ಯವನ್ನು ವೀಕ್ಷಣೆ ಮಾಡಿದ್ದರು. ಅಲ್ಲದೆ ಟೀಮ್ ಇಂಡಿಯಾ ಆಟಗಾರರ ಜೊತೆಗೂ ಕಾಣಿಸಿಕೊಂಡಿದ್ದರು. ಇನ್ನೊಂದೆಡೆ ಮಾಜಿ ದೊಸ್ತಿಗಳಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಜೊತೆಗೂ ಕಾಣಿಸಿಕೊಂಡಿದ್ದರು.
ಈ ನಡುವೆ, ಧೋನಿ ಇಂಗ್ಲೆಂಡ್ ನಲ್ಲಿ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಭಾರತದ ಗಲ್ಲಿ ಗಲ್ಲಿ ಗಳಲ್ಲಿ ಓಡಾಡುವುದು ಕಷ್ಟ ಎಂಬುದು ಧೋನಿಗೂ ಗೊತ್ತಿದೆ. ಯಾಕಂದ್ರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಅಭಿಮಾನ ಎಂಥಹುದ್ದು ಎಂಬುದು ಅವರಿಗೂ ಗೊತ್ತಿದೆ.

ಆದ್ರೆ ಇಂಗ್ಲೆಂಡ್ ನಲ್ಲಿ ಆ ರೀತಿಯ ಅಭಿಮಾನಿಗಳು ಇರಲ್ಲ ಅಂದುಕೊಂಡು ಲಂಡನ್ ನ ಸ್ಟ್ರೀಟ್ ನಲ್ಲಿ ಓಡಾಡಿದ್ದಾರೆ.
ಆದ್ರೆ ಧೋನಿಯವರನ್ನು ಕಂಡ ತಕ್ಷಣ ಅಲ್ಲಿದ್ದ ಭಾರತೀಯ ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬಿದ್ದಿದ್ದರು. ಧೋನಿಯವರನ್ನು ಬೆನ್ನಟ್ಟಿಕೊಂಡು ಬಂದಿರುವ ಅಭಿಮಾನಿಗಳಲ್ಲಿ ಕೆಲವರು ವಿಡಿಯೋ ಮಾಡಿಕೊಂಡ್ರೆ, ಮತ್ತೆ ಕೆಲವರು ಧೋನಿಯ ಮುಂದೆ ಹೋಗಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಕೊನೆಗೆ ಸೆಕ್ಯರಿಟಿ ಗಾರ್ಡ್ ಬಂದು ಧೋನಿಯವರನ್ನು ಕಾರಿಗೆ ಹತ್ತಿಸಬೇಕಾಯ್ತು.
ಅಷ್ಟರ ಮಟ್ಟಿಗೆ ಧೋನಿ ಹವಾ ಇನ್ನೂ ಇದೆ ಎಂಬಂತಾಯ್ತು. ಅದು ಭಾರತದಲ್ಲಿಲ್ಲ. ಇಂಗ್ಲೆಂಡ್ ನಲ್ಲಿ.
https://twitter.com/DhoniArmyTN/status/1548167926145896449?ref_src=twsrc%5Etfw%7Ctwcamp%5Etweetembed%7Ctwterm%5E1548167926145896449%7Ctwgr%5E%7Ctwcon%5Es1_&ref_url=https%3A%2F%2Fzeenews.india.com%2Fcricket%2Fwatch-ms-dhoni-rushes-to-his-car-as-fans-chase-him-for-selfie-in-london-2486210.html
ಒಟ್ಟಿನಲ್ಲಿ ಧೋನಿ ಜನಪ್ರಿಯತೆ ಮಾತ್ರ ಇನ್ನೂ ಕುಗ್ಗಿಲ್ಲ. ಇನ್ನೊಂದೆಡೆ ಲಂಡನ್ ನಲ್ಲಿ ಧೋನಿ ಸೆಲ್ಫಿಗಾಗಿ ಮುಗಿಬಿದ್ದಿರುವ ಅಭಿಮಾನಿಗಳ ವಿಡಿಯೋವನ್ನು ಅಭಿಮಾನಿಯೊಬ್ಬ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.