ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಫೈಟ್ ಆರಂಭವಾಗಿದೆ. ಸೂಪರ್ ಸಂಡೇಯ 2ನೇ ಫೈಟ್ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿ ಆಗುತ್ತಿವೆ. ವಾಂಖೆಡೆಯ ಈ ಸಮರ ಅಂಕ ಪಟ್ಟಿಯ ಬದಲಾವಣೆಗೆ ಕಾರಣವಾಗುವುದು ಖಚಿತ.
ರಾಯಲ್ ಅವಕಾಶ:
ರಾಜಸ್ಥಾನ ರಾಯಲ್ಸ್ ಆಲ್ಮೋಸ್ಟ್ ಸೆಟಲ್ ಆಗಿರುವ ತಂಡದ ಹಾಗೇ ಕಾಣುತ್ತಿದೆ. ಆದರೆ ಯಶಸ್ವಿ ಜೈಸ್ವಾಲ್ ರನ್ನುತಂಡದಿಂದ ಹೊರಗಿಟ್ಟು ದೇವದತ್ ಪಡಿಕಲ್ಗೆ ಜೋಸ್ ಬಟ್ಲರ್ ಜೊತೆ ಇನ್ನಿಂಗ್ಸ್ ಆರಂಭಿಸಲು ಅವಕಾಶ ಕೊಟ್ಟರೆ ಉತ್ತಮ. ಜೈಸ್ವಾಲ್ ಜಾಗದಲ್ಲಿಆಲ್ ರೌಂಡರ್ ಡೆರೆಲ್ ಮಿಚೆಲ್ ಅಥವಾ ಜೇಮ್ಸ್ ನಿಶಾಮ್ಗೆ ಅವಕಾಶ ಕೊಟ್ಟರೆ ಬೌಲಿಂಗ್ ಆಯ್ಕೆ ಉತ್ತಮವಾಗಿ ಕಾಣುತ್ತದೆ. ಸಂಜು ಸ್ಯಾಮ್ಸನ್, ಶಿಮ್ರನ್ ಹೆಟ್ಮಯರ್ ಎಲ್ಲಾ ಅವಕಾಶಗಳನ್ನು ಬಳಸಿಕೊಂಡಿದ್ದಾರೆ. ವಿದೇಶಿ ಕೋಟಾದಲ್ಲಿ ಆಲ್ರೌಂಡರ್ ರನ್ನು ಆಡಿಸಿದರೆ ರಿಯಾನ್ ಪರಾಗ್ ಹೊರಗೆ ಇದ್ದು ಜೈಸ್ವಾಲ್ಗೆ ಅವಕಾಶ ಕೊಟ್ರೂ ಅಚ್ಚರಿ ಇಲ್ಲ. ಬೌಲಿಂಗ್ನಲ್ಲಿ ಟ್ರೆಂಟ್ ಬೋಲ್ಟ್ ಮತ್ತು ಪ್ರಸಿಧ್ ಕೃಷ್ಣ ಬಗ್ಗೆ ತೊಂದರೆ ಇಲ್ಲ. ಚಹಲ್ ಮತ್ತು ಅಶ್ವಿನ್ ಜೋಡಿಯೂ ತುಂಬಾ ಪ್ರಮುಖ. ಆದರೆ ನವ್ ದೀಪ್ ಸೈನಿ ಬದಲು ಹೊಸ ಬೌಲರ್ ಆಯ್ಕೆ ಮಾಡಿದರೆ ಎದುರಾಳಿಗೆ ಅಚ್ಚರಿ ನೀಡಬಹುದು.
ಲಕಲಕ ಲಖನೌ:
ಲಖನೌ ತಂಡದಲ್ಲಿ ಬದಲಾವಣೆ ಕಷ್ಟ. ಕೆ.ಎಲ್. ರಾಹುಲ್, ಕ್ವಿಂಟಾನ್ ಡಿಕಾಕ್ ಆಯ್ಕೆ ನೇರವಾಗಿದೆ. ಎವಿನ್ ಲೆವಿಸ್ ಕೈಲ್ ಮೇಯರ್ಸ್ ಕಡೆ ಯೋಚನೆ ಮಾಡಬಹುದು. ದೀಪಕ್ ಹೂಡ, ಆಯುಷ್ ಬಡೋನಿ ಜಾಗ ಫಿಕ್ಸ್. ಕೃನಾಲ್ ಪಾಂಡ್ಯ ಮತ್ತು ಕೃಷ್ಣಪ್ಪ ಗೌತಮ್ ಆಲ್ರೌಂಡರ್ ಕೋಟಾದಲ್ಲಿ ಆಡೋದು ಖಚಿತ. ಆವೇಶ್ ಖಾನ್, ಜೇಸನ್ ಹೋಲ್ಡರ್ ರವಿ ಬಿಷ್ಣೋಯಿ ಆಯ್ಕೆ ಬಗ್ಗೆ ನೋ ಪ್ರಾಬ್ಲಂ. ಆ್ಯಂಡ್ರ್ಯೂ ಟೈ ಬದಲು ಮನೀಷ್ ಪಾಂಡೆಗೆ ಅವಕಾಶ ನೀಡಿ, ಮೇಯರ್ಸ್ ಅವರನ್ನು ಆಲ್ರೌಂಡರ್ ಆಗಿ ಬಳಸಿಕೊಳ್ಳುವ ಬಗ್ಗೆ ಯೋಚನೆ ಮಾಡಬೇಕಿದೆ.
ಪಿಚ್ ಕಂಡೀಷನ್:
ವಾಂಖೆಡೆ ಪಿಚ್ ಸೀಮ್ ಬೌಲರ್ಗಳಿಗೆ ನೆರವು ನೀಡಿದೆ. ಜೊತೆಗೆ ಡ್ಯೂ ಫ್ಯಾಕ್ಟರ್ ಕೂಡ ಗಣನೆಗೆ ಬರುತ್ತಿದೆ. ಹೀಗಾಗಿ ಟಾಸ್ ಮೇಲೆ ಕಣ್ಣಿದೆ.