ಉತ್ತಮ ಆಟದ ಪ್ರದರ್ಶನ ನೀಡಿದ ಗುಜರಾತ್ ಜೈಂಟ್ಸ್, ಪ್ರೋ ಕಬಡ್ಡಿ ಪಂದ್ಯಾವಳಿಯ 84 ನೇ ಲೀಗ್ ಪಂದ್ಯದಲ್ಲಿ ಹರಿಯಾಣಾ ಸ್ಟೀಲರ್ಸ್ ತಂಡದ ವಿರುದ್ಧ ಆರು ಅಂಕಗಳ ಜಯ ದಾಖಲಿಸಿತು.
ವಿಜೇತ ಗುಜರಾತ್ ಜೈಂಟ್ಸ್ ತಂಡದ ಆಟಗಾರರು 32 ಅಂಕ ಗಳಿಸಿದರೆ, ಪರಾಜಿತ ಹರಿಯಾಣಾ ಸ್ಟೀಲರ್ಸ್ ತಂಡದ ಆಟಗಾರರು 26 ಅಂಕ ಗಳಿಸಿದರು. ವಿರಾಮದ ವೇಳೆಗೆ ಗುಜರಾತ್ ಜೈಂಟ್ಸ್ 19-12 ರಿಂದ ಮುನ್ನಡೆ ಸಾಧಿಸಿತ್ತು.
ಗುಜರಾತ್ ಜೈಂಟ್ಸ್ ತಂಡ ಈ ವರೆಗೆ ಆಡಿರುವ ಹದಿಮೂರು ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳಲ್ಲಿ ಜಯ, ಆರು ಪಂದ್ಯಗಳಲ್ಲಿ ಸೋಲು ಕಂಡಿದ್ದು ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡು ಒಟ್ಟು 33 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಸಧ್ಯ ಹನ್ನೊಂದನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಹರಿಯಾಣಾ ಸ್ಟೀಲರ್ಸ್ ತಂಡ ಆಡಿದ 15 ಪಂದ್ಯಗಳ ಪೈಕಿ ಆರು ಪಂದ್ಯಗಳಲ್ಲಿ ಜಯ, ಆರು ಪಂದ್ಯಗಳಲ್ಲಿ ಸೋಲು ಹಾಗೂ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು, ಒಟ್ಟು 43 ಅಂಕಗಳೊಂದಿಗೆ ಸದ್ಯ ನಾಲ್ಕನೇ ಸ್ಥಾನದಲಿದೆ.
ಗುಜರಾತ್ ಜೈಂಟ್ಸ್ ತಂಡದ ಪರ ರೈಡರ್ ಅಜಯ್ ಕುಮಾರ್ ಹನ್ನೊಂದು, ಪ್ರದೀಪ್ ಕುಮಾರ್ ಹತ್ತು, ಡಿಫೆಂಡರ್ ಸುನೀಲ್ ಕುಮಾರ್ ಮೂರು, ಗಿರೀಶ್ ಮಾರುತಿ ಮೂರು, ರವಿಂದ್ರ ಪಾಹಲ್ ಒಂದು ಹಾಗೂ ಆಲ್‌ರೌಂಡರ್ ಹಾಡಿ ಒಂದು ಅಂಕ ಸೇರಿಸಿದರು.
ಪರಾಜಿತ ಹರಿಯಾಣಾ ಸ್ಟೀಲರ್ಸ್ ತಂಡದ ಪರ ರೈಡರ್ ಮಿತು ಎಂಟು, ವಿಕಾಸ್ ಕಂಡೋಲಾ ಏಳು, ಆಲ್‌ರೌಂಡರ್ ರೋಹಿತ್ ಗುಲ್ಲಾ ನಾಲ್ಕು, ಡಿಫೆಂಡರ್ ಜೈದೀಪ್ ಎರಡು, ಮೋಹಿತ್ ಒಂದು, ಅಂಕಿತ್ ಒಂದು ಹಾಗೂ ರೈಡರ್ ವಿನಯ್ ಒಂದು ಅಂಕ ಗಳಿಸಿದರು.