ಇಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಪಂದ್ಯ ನಡೆಯಲಿದ್ದು, ಲಕ್ನೋ 12 ಪಂದ್ಯಗಳಲ್ಲಿ 8ರಲ್ಲಿ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನ ತಂಡವು 12 ಪಂದ್ಯಗಳಲ್ಲಿ 7 ರಲ್ಲಿ ಗೆದ್ದಿದೆ. ಎರಡೂ ತಂಡಗಳು ಪ್ಲೇ ಆಫ್ ರೇಸ್ ನಲ್ಲಿವೆ.
ಲಕ್ನೋಗೆ ಈ ಋತು ಅತ್ಯುತ್ತಮವಾಗಿದೆ. ತಂಡದಲ್ಲಿ ಅತ್ಯುತ್ತಮ ಆಟಗಾರರನ್ನು ಹೊಂದಿದೆ. ಅವರು ಯಾವುದೇ ಸಮಯದಲ್ಲಿ ಪಂದ್ಯದ ಗತಿಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಲೀಗ್ ಪಂದ್ಯಗಳನ್ನು ಗೆದ್ದು, ಮೊದಲೆರಡು ಸ್ಥಾನಗಳಲ್ಲಿ ಉಳಿಯುವ ಇರಾದೆ ಲಕ್ನೋ ತಂಡದ್ದಾಗಿದೆ. ತಂಡ ಅಗ್ರ 2ರಲ್ಲಿ ಸ್ಥಾನ ಪಡೆದರೆ ಫೈನಲ್‌ಗೆ ಎರಡು ಅವಕಾಶ ಸಿಗಲಿದೆ. ರಾಜಸ್ಥಾನ ವಿರುದ್ಧ ಬ್ಯಾಟ್ಸ್‌ಮನ್‌ಗಳು ತಮ್ಮ ಸಾಮರ್ಥ್ಯ ತೋರಬೇಕಿದೆ. ಅವರು ಎದುರಾಳಿ ಬೌಲರ್ ಗಳ ವಿರುದ್ಧ ರನ್ ಮಳೆ ಹರಿಸಬೇಕಿದೆ.
ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಗೇಮ್ ಪ್ಲಾನ್ ಗಳಿಂದ ಪಂದ್ಯಗಳನ್ನು ಕಳೆದುಕೊಳ್ಳುತ್ತದೆ. ಪ್ಲೇಆಫ್ ತಲುಪುವುದು ಅತ್ಯಂತ ಮುಖ್ಯವಾದ ಸಮಯದಲ್ಲಿ, ತಂಡವು ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದೆ. ಆರ್ ಅಶ್ವಿನ್ ಅವರನ್ನು ಮೊದಲು ಬ್ಯಾಟ್ ಮಾಡಲು ಕಳುಹಿಸುವುದು ತಂಡಕ್ಕೆ ಪೆಟ್ಟು ನೀಡಿದೆ. ಮಹತ್ವದ ಪಂದ್ಯದಲ್ಲಿ ತಂಡ ಎಚ್ಚರಿಕೆಯ ಆಟವನ್ನು ಆಡಬೇಕಿದೆ. ಬೌಲರ್ ಗಳು ಲಕ್ನೋ ತಂಡದ ಬ್ಯಾಟ್ಸ್ ಮನ್ ಗಳ ರಣ ತಂತ್ರವನ್ನು ಮೆಟ್ಟಿ ನಿಂತು ದಾಳಿ ಸಂಘಟಿಸ ಬೇಕಿದೆ.