ಇಂಗ್ಲಿಷ್ ಫುಟ್ಬಾಲ್ ಕ್ಲಬ್ ಲಿವರ್‌ಪೂಲ್ 5-2 ಗೋಲುಗಳಿಂದ ವಿಲ್ಲಾರ್ರಿಯಲ್ ತಂಡವನ್ನು UEFA ಚಾಂಪಿಯನ್ಸ್ ಲೀಗ್ ಫೈನಲ್ ಗೆ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಂಡಿದೆ.
ಬುಧವಾರ ನಡೆದ ಸೆಮಿಫೈನಲ್‌ನ ಎರಡನೇ ಲೆಗ್‌ನಲ್ಲಿ ಲಿವರ್‌ಪೂಲ್ 3-2 ಗೋಲುಗಳಿಂದ ವಿಲ್ಲಾರ್ರಿಯಲ್ ತಂಡವನ್ನು ಸೋಲಿಸಿತು. ಇದಕ್ಕೂ ಮುನ್ನ ಸೆಮಿಫೈನಲ್‌ನ ಮೊದಲ ಲೆಗ್‌ನಲ್ಲಿ ಲಿವರ್‌ಪೂಲ್ 2-0 ಅಂತರದಲ್ಲಿ ಜಯಗಳಿಸಿತ್ತು.

ಮಂಗಳವಾರ ನಡೆದ ಸೆಮಿ-ಫೈನಲ್‌ನ ಎರಡನೇ ಲೆಗ್‌ನಲ್ಲಿ ಅರ್ಧ-ಸಮಯದಲ್ಲಿ 2-0 ಹಿನ್ನಡೆಯಲ್ಲಿದ್ದ ಲಿವರ್‌ಪೂಲ್, 12 ನಿಮಿಷಗಳಲ್ಲಿ ಮೂರು ಗೋಲುಗಳೊಂದಿಗೆ ಐದು ವರ್ಷಗಳಲ್ಲಿ ಮೂರನೇ ಬಾರಿಗೆ ಫೈನಲ್‌ಗೆ ತಲುಪಿತು. ಫೈನಲ್‌ನಲ್ಲಿ ಲಿವರ್‌ಪೂಲ್ ರಿಯಲ್ ಮ್ಯಾಡ್ರಿಡ್ ಮತ್ತು ಮ್ಯಾಂಚೆಸ್ಟರ್ ಸಿಟಿ ನಡುವಿನ ಎರಡನೇ ಸೆಮಿಫೈನಲ್‌ನ ವಿಜೇತ ತಂಡವನ್ನು ಎದುರಿಸಲಿದ್ದಾರೆ.

ಆರಂಭದಲ್ಲೇ ವಿಲ್ಲಾರ್‌ರಿಯಲ್ ಮುನ್ನಡೆ ಸಾಧಿಸಿತು. ವಿಲ್ಲಾರ್ರಿಯಲ್ ಮೊದಲ ಲೆಗ್‌ನಲ್ಲಿ 2-0 ಸೋಲಿಗೆ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿಕೊಡಿತ್ತು. ಪಂದ್ಯದ ಮೂರನೇ ನಿಮಿಷದಲ್ಲಿ ದಿಯಾ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಪಂದ್ಯದ 41ನೇ ನಿಮಿಷದಲ್ಲಿ ಕೊಕ್ವೆಲಿನ್ ಗೋಲು ಬಾರಿಸಿ ತಂಡದ ಮುನ್ನಡೆಯನ್ನು 2–0ಗೆ ಹಿಗ್ಗಿಸಿದರು.
ವಿರಾಮದ ನಂತರ 12 ನಿಮಿಷಗಳಲ್ಲಿ ಪಂದ್ಯ ತನ್ನ ಗತಿಯನ್ನೇ ಲಿವರ್‌ಪೂಲ್ ಬದಲಿಸಿತು. ಪಂದ್ಯದ 62ನೇ ನಿಮಿಷದಲ್ಲಿ ಲಿವರ್‌ಪೂಲ್ ಪರ ಫ್ಯಾಬಿನ್ಹೊ ಗೋಲು ಬಾರಿಸಿ ಅಂತರವನ್ನು ತಗ್ಗಿಸಿದರು. ಕೇವಲ 5 ನಿಮಿಷಗಳ ನಂತರ ಲೂಯಿಸ್ ಡಯಾಜ್ ಗೋಲು ಗಳಿಸಿ 2-2 ಸಮಬಲ ಸಾಧಿಸಿದರು. ನಂತರ ಮಾನೆ 74 ನಿಮಿಷಗಳಲ್ಲಿ ಗೋಲು ಗಳಿಸಿ ತಂಡಕ್ಕೆ 3-2 ಅಂತರದ ಜಯ ತಂದುಕೊಟ್ಟರು.
ಲಿವರ್‌ಪೂಲ್ UEFA ಚಾಂಪಿಯನ್ಸ್ ಲೀಗ್‌ನ ಚಾಂಪಿಯನ್ ಪಟ್ಟವನ್ನು 6 ಬಾರಿ ಅಲಂಕರಿಸಿದೆ.