ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದ ವೆಸ್ಟ್ ಇಂಡೀಸ್ ತಂಡದ ಶ್ರೇಷ್ಠ ಕ್ರಿಕೆಟರ್ ಲೆಂಡ್ಲ್ ಸಿಮನ್ಸ್(Lendl Simmons) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಕೆರೆಬಿಯನ್ ತಂಡದ ಪರ ODI ಮತ್ತು T20 ಕ್ರಿಕೆಟ್ನಲ್ಲಿ ಅಬ್ಬರಿಸಿದ್ದ ಲೆಂಡ್ಲ್ ಸಿಮನ್ಸ್, ಹಲವು ಶ್ರೇಷ್ಠ ಇನ್ನಿಂಗ್ಸ್ಗಳ ಮೂಲಕ ವಿಶ್ವ ಕ್ರಿಕೆಟ್ನ ಗಮನ ಸೆಳೆದಿದ್ದರು. ಆದರೆ ಇತ್ತೀಚಿನ ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಸ್ಪೋಟಕ ಬ್ಯಾಟ್ಸ್ಮನ್, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಲೆಂಡ್ಲ್ ಸಿಮನ್ಸ್ ಅಂತಾರಾಷ್ಟ್ರಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದುವ ವಿಷಯವನ್ನು ಟ್ರಿನ್ಬಾಗೊ ನೈಟ್ ರೈಡರ್ಸ್(Trinbago Knight Riders) ಟ್ವಿಟರ್ ಮೂಲಕ ಘೋಷಣೆ ಮಾಡಲಾಗಿದೆ. ಪಾಕಿಸ್ತಾನದ ವಿರುದ್ಧ 2006ರಲ್ಲಿ ODI ಕ್ರಿಕೆಟ್ ಪಾದಾರ್ಪಣೆ ಮಾಡಿದ್ದ ಸಿಮನ್ಸ್, ODI ಹಾಗೂ T20 ಕ್ರಿಕೆಟ್ನಲ್ಲಿ ಯಶಸ್ಸು ಕಂಡಿದ್ದ ಸಿಮನ್ಸ್, ಏಕದಿನ ಕ್ರಿಕೆಟ್ನಲ್ಲಿ 68 ಪಂದ್ಯಗಳಲ್ಲಿ 2 ಶತಕ ಹಾಗೂ 16 ಅರ್ಧಶತಕದ ನೆರವಿನಿಂದ 1958 ರನ್ಗಳಿಸಿದ್ದರು.
2007ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಎಂಟ್ರಿಕೊಟ್ಟಿದ್ದ ಲೆಂಡ್ಲ್ ಸಿಮನ್ಸ್, ಟಿ20 ಕ್ರಿಕೆಟ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. 68 ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 1527 ರನ್ಗಳಿಸಿದ್ದ ಸಿಮನ್ಸ್, 9 ಅರ್ಧಶತಕ ಸಿಡಿಸಿದ್ದರು. ODI ಮತ್ತು T20 ಕ್ರಿಕೆಟ್ ಜೊತೆಗೆ 8 ಟೆಸ್ಟ್ ಪಂದ್ಯಗಳಲ್ಲಿ ಸಹ ಸಿಮನ್ಸ್ ಕಾಣಿಸಿಕೊಂಡಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಜೊತೆಗೆ ಫ್ರಾಂಚೈಸಿ ಕ್ರಿಕೆಟ್ನಲ್ಲೂ ಸಿಮನ್ಸ್ ಯಶಸ್ಸು ಕಂಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್(IPL)ನಲ್ಲಿ ಸಹ ಮಿಂಚಿದ್ದ ಕೆರೆಬಿಯನ್ ಆಟಗಾರ, ಮುಂಬೈ ಇಂಡಿಯನ್ಸ್ ತಂಡದ ಪರ 29 ಪಂದ್ಯಗಳಲ್ಲಿ 1079 ರನ್ಗಳಿಸಿದ್ದು, ಇದರಲ್ಲಿ 1 ಶತಕ ಹಾಗೂ 11 ಅರ್ಧಶತಕ ಒಳಗೊಂಡಿದೆ.