India Vs South Africa – ಲಕ್ನೋ ಪಂದ್ಯಕ್ಕೆ ಮಳೆರಾಯನ ಅಡ್ಡಿ..!
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟು ಮಾಡಿದೆ.
ಲಕ್ನೋದಲ್ಲಿ ಇಂದು ನಡೆಯಲಿರುವ ಈ ಪಂದ್ಯ ಮಳೆಗೆ ಅಹುತಿಯಾಗುವುದು ಬಹುತೇಕ ಖಚಿತವಾಗಿದೆ. ಕಳೆದ ಕೆಲವು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ. ಹೀಗಾಗಿ ಟಾಸ್ ಇನ್ನೂ ಕೂಡ ಆಗಿಲ್ಲ. ಈಗಾಗಲೇ ಎರಡು ಮೂರು ಬಾರಿ ಟಾಸ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.
ಅಲ್ಲದೆ ಉಭಯ ತಂಡಗಳ ನೆಟ್ಸ್ ಅಭ್ಯಾಸಕ್ಕೂ ಮಳೆ ಅಡ್ಡಿಯನ್ನುಂಟು ಮಾಡಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ತಂಡವನ್ನು ಶಿಖರ್ ಧವನ್ ಮುನ್ನಡೆಸುತ್ತಿದ್ದಾರೆ. ಶುಬ್ಮನ್ ಗಿಲ್ ಉಪನಾಯಕನಾಗಿದ್ದಾರೆ.
ಈ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್, ರಜತ್ ಪಟೀದಾರ್, ಶಹಬಾಝ್ ಅಹಮ್ಮದ್, ರವಿ ಬಿಷ್ಣೋಯ್ ಮತ್ತು ಮುಕೇಶ್ ಕುಮಾರ್ ಅವರು ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಲಿದ್ದಾರೆ.
ಇನ್ನೊಂದೆಡೆ ರೋಹಿತ್ ಬಳಗ ಟಿ-20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದೆ.
ಈಗಾಗಲೇ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ. ಇದೀಗ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಇನ್ನುಳಿದ ಪಂದ್ಯಗಳು ಅಕ್ಟೋಬರ್ 8 ಮತ್ತು 11ರಂದು ನಡೆಯಲಿದೆ.