ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ಐಪಿಎಲ್ 2022 ರಲ್ಲಿ ಪುನರಾಗಮನ ಮಾಡಿದ್ದಾರೆ. ಈ ಬಾರಿ ಅವರು ಈ ಲೀಗ್ನಲ್ಲಿ ಆಟಗಾರನಾಗಿ ಅಲ್ಲ ಆದರೆ ಬೌಲಿಂಗ್ ಕೋಚ್ ಆಗಿ ರಾಜಸ್ಥಾನ್ ರಾಯಲ್ಸ್ನೊಂದಿಗೆ ಕೆಲಸ ಮಾಡಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಮಾಲಿಂಗ ಅವರನ್ನು ನೇಮಕ ಮಾಡಿದೆ. ಲಸಿತ್ ಮಾಲಿಂಗ 2019 ರಿಂದ ಐಪಿಎಲ್ನಲ್ಲಿ ಆಡಿಲ್ಲ, ಆದರೆ ಇದರ ಹೊರತಾಗಿಯೂ ಅವರು ಈ ಲೀಗ್ನ ಅತ್ಯಂತ ಯಶಸ್ವಿ ಬೌಲರ್. ಈಗ ಈ ಋತುವಿನಲ್ಲಿ ಅವರು ರಾಜಸ್ಥಾನದ ಬೌಲರ್ಗಳಿಗೆ ಹೇಗೆ ಬೌಲಿಂಗ್ ಮಾಡಬೇಕೆಂದು ಕಲಿಸುತ್ತಾರೆ. ಇದೇ ಮೊದಲ ಬಾರಿಗೆ ಲಸಿತ್ ಮುಂಬೈ ತಂಡವನ್ನು ಬಿಟ್ಟು ಬೇರೆ ತಂಡದ ಪರ ಶ್ರೀಮಂತ ಲೀಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಲಸಿತ್ ಮಾಲಿಂಗ ಐಪಿಎಲ್ ಕ್ರಿಕೆಟ್ ವೃತ್ತಿಜೀವನ
ಲಸಿತ್ ಮಾಲಿಂಗ 2009 ರಲ್ಲಿ IPL ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2019 ರವರೆಗೆ ಈ ಲೀಗ್ನಲ್ಲಿ ಆಡುವುದನ್ನು ಮುಂದುವರೆಸಿದರು. ಈ ಸಮಯದಲ್ಲಿ ಅವರು 2016 ರ ಋತುವಿನಲ್ಲಿ ಆಡಲಿಲ್ಲ. ಐಪಿಎಲ್ನಲ್ಲಿ ಆಡಿದ 9 ಸೀಸನ್ಗಳಲ್ಲಿ ಅವರು ಒಟ್ಟು 122 ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಒಟ್ಟು 170 ವಿಕೆಟ್ಗಳನ್ನು ಕಬಳಿಸಿದ್ದಾರೆ. ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದವರಲ್ಲಿ ಮಾಲಿಂಗ ಇನ್ನೂ ಮೊದಲ ಸ್ಥಾನದಲ್ಲಿದ್ದಾರೆ. ಈ ಸಮಯದಲ್ಲಿ, ಅವರ ಅತ್ಯುತ್ತಮ ಪ್ರದರ್ಶನವೆಂದರೆ 13 ರನ್ಗಳಿಗೆ 5 ವಿಕೆಟ್ ಆಗಿದೆ. ಇವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ಗೆ 2009ರಲ್ಲಿ ಪದಾರ್ಪಣೆ ಮಾಡಿದರು. 10 ವರ್ಷ ಮುಂಬೈ ಪರ ಆಡಿದ ಯಾರ್ಕರ್ ಸ್ಪೇಷಲಿಸ್ಟ್ ನಾಲ್ಕು ಬಾರಿ ಚಾಂಪಿಯನ್ ತಂಡದ ಸದಸ್ಯ.