ಐಪಿಎಲ್ (IPL) ಪಿತಾಮಹ ಲಲಿತ್ ಮೋದಿ (Lalit Modi) ಎಲ್ಲಿದ್ದಾರೆ ಅನ್ನುವುದು ಮರೆತೇ ಹೋಗಿತ್ತು. ಜನ ಮರೆತು ಬಿಡ್ತಾರೆ ಅನ್ನುವುದು ಬಹುಶಃ ಲಲಿತ್ ಮೋದಿಗೆ ಗೊತ್ತಾಗಿರಬೇಕು. ದಿಢೀರ್ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡೇ ಬಿಟ್ರು. ಆದರೆ ಈ ಬಾರಿ ಕ್ರಿಕೆಟ್ ಬಗ್ಗೆ ಮಾಡಿಲ್ಲ. ವೈಯಕ್ತಿಕ ಬದುಕಿನ ಬಗ್ಗೆ ಮಾಡಿದರು. ಮಾಜಿ ವಿಶ್ವ ಸುಂದರಿಯನ್ನೇ ಬಲೆಗೆ ಬೀಳಿಸಿಕೊಂಡ ಸಂಭ್ರಮ ಅವರಲ್ಲಿತ್ತು. ಅಷ್ಟೇ ಅಲ್ಲ ವಿಶ್ವ ಸುಂದರಿಯನ್ನು ಮದುವೆಯಾಗುವ ಖಷಿ ಅವರಲ್ಲಿತ್ತು.
ಅಂದಹಾಗೇ ಲಲಿತ್ ಮೋದಿಗೆ ಈಗ 56 ವರ್ಷ ವಯಸ್ಸು. ಸುಶ್ಮಿತಾ ಸೇನ್‌ಗೆ (Sushmitha Sen) 46 ವರ್ಷ. ಇಬ್ಬರಿಗೂ ಮದುವೆಯಾಗುವ ವಯಸ್ಸಲ್ಲ. ಮಕ್ಕಳ ಜೊತೆ ಆರಾಮವಾಗಿರುವ ವಯಸ್ಸಿದು. ಆದರೆ ವಿಧಿಯಾಟ ಬೇರೆಯೇ ಇದೆ. ಇವರಿಬ್ಬರು ಈ ವಯಸ್ಸಿನಲ್ಲ ಒಂದಾಗುತ್ತಿದ್ದಾರೆ. ಕೆಲ ದಿನಗಳಲ್ಲಿ ಲೈಫ್ ಪಾರ್ಟ್ನರ್‌ಗಳಾಗಲಿದ್ದಾರೆ.
ಅಂದಹಾಗೇ ಭಾರತಕ್ಕೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿರುವ ಲಲಿತ್ ಮೋದಿ ಜೊತೆ ಮದುವೆಯಾಗಲು ಈ ಸುಂದರಿಗೇನು ಕೇಡು ಅಂತಿರಾ. ಅಲ್ಲೂ ಇದೆ ಟ್ವಿಸ್ಟ್. ಇಂಗ್ಲೆಂಡ್‌ನಲ್ಲಿರುವ (England) ಲಲಿತ್ ಮೋದಿ ಕೋಟ್ಯಾಂತರ ರೂಪಾಯಿಗಳ ಒಡೆಯ. ಮೋದಿ ಎಂಟರ್‌ಪ್ರೈಸಸ್ ಅನ್ನುವುದಕ್ಕೆ ಲಲಿತ್ ಮೋದಿ ಮಾಲೀಕ. ಈ ಕಂಪನಿಯು ಗ್ರಾಹಕ ಉತ್ಪನ್ನಗಳು, ನೆಟ್‌ವರ್ಕ್ ಮಾರ್ಕೆಟಿಂಗ್, ಶಿಕ್ಷಣ, ಮನರಂಜನೆ, ಚಹಾ ಮತ್ತು ಇತರ ಪಾನೀಯಗಳು, ಆರೋಗ್ಯ, ಫ್ಯಾಷನ್, ಆಹಾರ ಮತ್ತು ಆಸ್ಪತ್ರೆಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಭಾರತವಲ್ಲದೆ ಮಧ್ಯಪ್ರಾಚ್ಯ ಆಫ್ರಿಕಾ, ಪಶ್ಚಿಮ ಆಫ್ರಿಕಾ, ಆಗ್ನೇಯ ಆಫ್ರಿಕಾದಂತಹ ಹಲವು ದೇಶಗಳಲ್ಲಿ ಮೋದಿ ಗ್ರೂಪ್‌ನ ವ್ಯವಹಾರವಿದೆ. ಅಂದಾಜಿನ ಪ್ರಕಾರ, ಲಲಿತ್ ಮೋದಿ ಅವರ ಆಸ್ತಿ ಸುಮಾರು 57 ಮಿಲಿಯನ್ ಡಾಲರ್ ಅಥವಾ 4,555 ಕೋಟಿ ರೂಪಾಯಿ. (Net Asset Value) ಅವರು ಲಂಡನ್‌ನ ಐಕಾನಿಕ್ 117, ಸ್ಲೋನ್ ಸ್ಟ್ರೀಟ್‌ನಲ್ಲಿ ಐದು ಅಂತಸ್ತಿನ ಮನೆ ಹೊಂದಿದ್ದಾರೆ. ಇದು 7000 ಚದರ ಅಡಿಗಳಷ್ಟು ವಿಸ್ತಾರವಾಗಿದೆ.

ಅಂದಹಾಗೇ ಲಲಿತ್ ಮೋದಿಗೆ ಇದು 2ನೇ ಮದುವೆ. ಈ ಹಿಂದೆ ಮಿನಲ್ ಅನ್ನುವವರನ್ನು ಕುಟುಂಬದ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದರು. ಮಿನಲ್ 2018ರಲ್ಲಿ ಕ್ಯಾನ್ಸರ್‌ನಿಂದ ಮದುವೆಯಾಗಿದ್ದರು. ಸುಶ್ಮಿತಾ ಸೇನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿಲ್ಲ. ಒಟ್ಟಿನಲ್ಲಿ ಲಲಿತ್ ಮೋದಿ ಮತ್ತು ಸುಶ್ಮಿತಾ ವಿವಾಹ ಕೋಟ್ಯಾಂತರ ರೂಪಾಯಿಗಳ ವ್ಯವಹಾರದಲ್ಲೂ ಅಡಗಿದೆ ಅನ್ನುವುದು ಸುಳ್ಳಲ್ಲ.