Lalit Modi ತಾಯಿಯ ಸ್ನೇಹಿತೆಯನ್ನೇ ಮದುವೆಯಾಗಿದ್ದ ಲಲಿತ್ ಮೋದಿ.
![Lalit Modi ತಾಯಿಯ ಸ್ನೇಹಿತೆಯನ್ನೇ ಮದುವೆಯಾಗಿದ್ದ ಲಲಿತ್ ಮೋದಿ. 3 lalit modi sports karnataka](http://sportskarnataka.com/wp-content/uploads/2022/07/lalit-modi-300x170.jpg)
ಲಲಿತ್ ಮೋದಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಮಾಜಿ ವಿಶ್ವ ಸುಂದರಿಯನ್ನೇ ಬುಟ್ಟಿಗೆ ಹಾಕಿಕೊಂಡಿರುವ ಲಲಿತ್ ಮೋದಿ ಖತರ್ನಾಕ್ ಕಿಲಾಡಿ.
ಹಾಗೇ ನೋಡಿದ್ರೆ ಲಲಿತ್ ಮೋದಿ ಪ್ರಚಂಡ ಬುದ್ಧಿವಂತ. ಆಡಳಿತ ಮತ್ತು ಉದ್ಯಮದಲ್ಲಿ ಚಾಣಕ್ಯನ ತಂತ್ರಗಾರಿಕೆ ಇದ್ರೂ ಪಾಲಿಸಿಕೊಂಡು ಬಂದಿರುವುದು ಮಾತ್ರ ಶಕುನಿ ನೀತಿಯನ್ನೇ.
ಅಂದ ಹಾಗೇ ಲಲಿತ್ ಮೋದಿಯ ಕುಟುಂಬಕ್ಕೆ ಸುಮಾರು ಒಂದುವರೆ ಶತಮಾನಗಳ ಇತಿಹಾಸವಿದೆ. ಬ್ರಿಟಿಷರ ಆಡಳಿತದ ವೇಳೆ ಬಟ್ಟೆ ವ್ಯಾಪಾರದ ಜೊತೆಗೆ ಬ್ರಿಟಿಷರಿಗೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರು. ಬಳಿಕ ಸಕ್ಕರೆ ಕಾರ್ಖಾನೆಯ ಮೂಲಕ ಉದ್ಯಮ ಆರಂಭಿಸಿದ್ದ ಮೋದಿ ಪೂರ್ವಜರು ಆಗಾಧವಾಗಿ ಬೆಳೆದುಬಿಟ್ಟಿದ್ದರು. ಅಷ್ಟೇ ಅಲ್ಲ, ಎರಡನೇ ಮಹಾಯುದ್ದದ ವೇಳೆ, ಬ್ರಿಟಿಷ್ ಕಂಪೆನಿಗಳಿಗೆ ಆಹಾರ ಸರಬರಾಜು ಕೂಡ ಮಾಡುತ್ತಿದ್ದರು. ಈ ವೇಳೆ ಬ್ರಿಟಿಷ್ ಸರ್ಕಾರದ ನೀಡಿದ್ದ ಪ್ರಶಸ್ತಿಯನ್ನು ನಿರಾಕರಿಸಿದ್ದ ಕುಟುಂಬ ಲಲಿತ್ ಮೋದಿಯವರದ್ದು.
![Lalit Modi ತಾಯಿಯ ಸ್ನೇಹಿತೆಯನ್ನೇ ಮದುವೆಯಾಗಿದ್ದ ಲಲಿತ್ ಮೋದಿ. 4 lalit modi sports karnataka](http://sportskarnataka.com/wp-content/uploads/2022/07/lalith-modi-300x203.jpg)
೨೫ ಶಿಕ್ಷಣ ಸಂಸ್ಥೆಗಳು, ನಾನಾ ಕಾರ್ಖಾನೆಗಳು, ಮೆಡಿಕಲ್, ಆಯಿಲ್, ತಂಬಾಕ್ ಉತ್ಪನ್ನ, ಆಹಾರ ಉತ್ಪನ್ನ, ಜವಳಿ ಹೀಗೆ ಮೋದಿ ಎಂಟರ್ ಪ್ರೆöÊಸಸ್ ಮೂಲಕ ತನ್ನ ಸಾಮ್ರಾಜ್ಯವನ್ನು ಕಟ್ಟಿದ್ದ ಫ್ಯಾಮಿಲಿ
೧೯೯೨ರಲ್ಲಿ ಲಲಿತ್ ಮೋದಿ ತನ್ನ ಕುಟುಂಬದ ಉದ್ಯಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಉದ್ಯಮದ ಜೊತೆಗೆ ಲಲಿತ್ ಮೋದಿ ಭಾರತೀಯ ಕ್ರಿಕೆಟ್ ನ ಆಡಳಿತದಲ್ಲೂ ಕಾಣಿಸಿಕೊಂಡ್ರು. ಆಗ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಗನ್ ಮೋಹನ್ ದಾಲ್ಮಿಯ ಪರಿಚಯ ಮಾಡಿಕೊಂಡ ಲಲಿತ್ ಮೋದಿ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ್ರು. ಬಳಿಕ ರಾಜಸ್ತಾನ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮತ್ತು ಪಂಜಾಬ್ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಹೀಗೆ ಬಿಸಿಸಿಐ ಚಾವಡಿಯೊಳಗೆ ಎಂಟ್ರಿಯಾಗಿದ್ದ ಲಲಿತ್ ಮೋದಿ ದಾಲ್ಮಿಯಾ ಅವರಿಗೆ ತಿರುಗೇಟು ನೀಡಿದ್ದಲ್ಲದೇ, ಶ್ರೀನಿವಾಸನ್ ಬಳಗವನ್ನು ಸೇರಿಕೊಂಡ್ರು.
ಅಂದ ಹಾಗೇ ೧೯೯೬ರಲ್ಲೇ ಲಲಿತ್ ಮೋದಿ ಚುಟುಕು ಕ್ರಿಕೆಟ್ ನ ಪ್ಲಾನ್ ಮಾಡಿಕೊಂಡಿದ್ದರು. ಆದ್ರೆ ಅದು ಈಡೇರಿದ್ದು ೨೦೦೭ರಲ್ಲಿ. ಇಂಡಿಯನ್ ಪ್ರೀಮಿಯರ್ ಲೀಗ್ ಟಿ-೨೦ ಕ್ರಿಕೆಟ್ ಅನ್ನು ಪರಿಚಯಿಸಿದ್ದ ಖ್ಯಾತಿ ಮಾತ್ರ ಲಲಿತ್ ಮೋದಿಗೆ ಸಲ್ಲಬೇಕು.
ಆನಂತರ ನಡೆದಿರುವುದು ಬರೀ ಗೋಲ್ ಮಾಲ್. ಕೊನೆಗೆ ದೇಶವನ್ನೇ ಬಿಟ್ಟು ಹೋದ ಲಲಿತ್ ಮೋದಿ ವಿದೇಶದಲ್ಲಿ ಹಾಯಾಗಿ ಜೀವನ ಸಾಗಿಸುತ್ತಿದ್ದಾರೆ.
![Lalit Modi ತಾಯಿಯ ಸ್ನೇಹಿತೆಯನ್ನೇ ಮದುವೆಯಾಗಿದ್ದ ಲಲಿತ್ ಮೋದಿ. 5 Lalit Modi and Sushmitha Sen sports karnataka](http://sportskarnataka.com/wp-content/uploads/2022/07/Lalit1-300x195.jpg)
ಇದೀಗ ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ತನ್ನ ಪತ್ನಿ ಮೀನಾಲ್ ನಾಲ್ಕು ವರ್ಷದ ಹಿಂದೆ ನಿಧನರಾಗಿದ್ದರು.
ಅಂದ ಹಾಗೇ ಮೊದಲ ಪತ್ನಿ ಮೀನಾಲ್ ಅವರು ಲಲಿತ್ ಮೋದಿಗಿಂತ ಹತ್ತು ವರ್ಷ ದೊಡ್ಡವರು. ಇವರಿಬ್ಬರ ಮದುವೆಗೆ ಲಲಿತ್ ಮೋದಿಯವರ ಹೆತ್ತವರೇ ವಿರೋಧ ವ್ಯಕ್ತಪಡಿಸಿದ್ದರು.
ಇದಕ್ಕೆ ಕಾರಣವೂ ಇದೆ. ಮೀನಾಲ್ ಅವರಿಗೆ ಮೊದಲೇ ಮದುವೆಯೂ ಆಗಿತ್ತು. ಒಂದು ಮಗು ಕೂಡ ಇತ್ತು. ಮೀನಾಲ್ ಅವರ ಮೊದಲ ಪತಿ ಜಾಕ್ ಸಗಾರಾನಿ. ನೈಜಿರಿಯಾದಿಂದ ಲಂಡನ್, ನಂತರ ಸೌದಿ ಅರೆಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಜಾಕ್ ಸಗರಾನಿ ಅವರು ಸೌದಿ ಅರೆಬಿಯಾದಲ್ಲಿ ಯಾವುದೋ ಕೇಸ್ ನಲ್ಲಿ ಸಿಲುಕಿ ಕೈದಿಯಾಗಿದ್ದರು. ಆಗ ಮಿನಾಲ್ ಅವರು ದೆಹಲಿಗೆ ಬಂದು ವಾಸವಾಗಿದ್ದರು. ಆಗಲೇ ಅವರಿಗೆ ಒಬ್ಬಳು ಮಗಳಿದ್ದಳು.
![Lalit Modi ತಾಯಿಯ ಸ್ನೇಹಿತೆಯನ್ನೇ ಮದುವೆಯಾಗಿದ್ದ ಲಲಿತ್ ಮೋದಿ. 6 lalit modi sports karnataka](http://sportskarnataka.com/wp-content/uploads/2022/07/lalit-modi4-300x200.jpg)
ಆಗ ಮಿನಾಲ್ ಅವರು ಲಲಿತ್ ಮೋದಿಗೆ ತಾಯಿ ಬೀನಾ ಅವರಿಗೆ ಪರಿಚಯವಾಗಿದ್ದರು. ಹೀಗೆ ಮೋದಿ ಕುಟುಂಬದ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿದ್ದ ಬೀನಾ ಅವರನ್ನೇ ಲಲಿತ್ ಮೋದಿ ವಿವಾಹವಾಗಿದ್ದರು. ಆದ್ರೆ ಲಲಿತ್ ಮೋದಿ ಕುಟುಂಬಕ್ಕೆ ಈ ಮದುವೆ ಇಷ್ಟವಾಗಿರಲಿಲ್ಲ.
ಅಂದ ಹಾಗೇ ಲಲಿತ್ ಮೋದಿ ಪತ್ನಿ ಮಿನಾಲ್ ಮತ್ತು ಸುಸ್ಮಿತಾ ಸೇನ್ ಕೂಡ ಪರಿಚಿತರು ಹಾಗೂ ಸ್ನೇಹಿತರು. ಇವರಿಬ್ಬರ ಸ್ನೇಹಕ್ಕೆ ಕಾರಣವಾಗಿದ್ದು ಕೂಡ ಐಪಿಎಲ್. ೨೦೦೮ರಿಂದ ಸುಸ್ಮಿತಾ ಸೇನ್ ಮತ್ತು ಮೀನಾಲ್ ಪಾರ್ಟಿಯಲ್ಲಿ ಎಲ್ಲಾ ಕಾಣಿಸಿಕೊಳ್ಳುತ್ತಿದ್ದರು.
ಒಟ್ಟಿನಲ್ಲಿ ಲಲಿತ್ ಮೋದಿ ಭಾರತದಲ್ಲಿ ಪಂಗನಾಮ ಹಾಕಿದ್ರೂ ತನ್ನ ಬಿಸಿನೆಸ್ ಅನ್ನು ಮಾತ್ರ ಮುನ್ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಐಷಾರಾಮಿ ಜೀವನವನ್ನು ವಿದೇಶದಲ್ಲಿ ನಡೆಸುತ್ತಿದ್ಸಾರೆ.