ಈ ಋತುವಿನ ಮೊದಲ ಪ್ರಶಸ್ತಿ ಹುಡುಕಾಟದಲ್ಲಿರುವ ಭಾರತದ ತಾರಾ ಶಟ್ಲರ್ಗಳಾದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಇಂದಿನಿಂದ ಆರಂಭವಾಗಲಿರುವ ಕೊರಿಯಾ ಓಪನ್ ಟೂರ್ನಿಯಲ್ಲಿ ಸೆಣಸಲಿದ್ದಾರೆ.
ಈ ಟೂರ್ನಿಯಲ್ಲಿ ಲಕ್ಷ್ಯಸೇನ್ ಸೇರಿದಂತೆ ಹಲವಾರು ಆಟಗಾರರು ಹಿಂದೆ ಸರಿದಿದ್ದಾರೆ . ಅಗ್ರ ಆಟಗಾರ್ತಿ ಈ ವರ್ಷ ಪದಕ ಗೆಲ್ಲದೇ ನಿರಾಸೆ ಮೂಡಿಸಿದ್ದಾರೆ. ಗಾಯದ ಸಮಸ್ಯೆ ನಂತರ ಸಿಂಧು ಅವರಿಂದ ನಿರೀಕ್ಷಿತಾ ಪ್ರದರ್ಶನ ಬಂದಿಲ್ಲ.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ನಲ್ಲಿ ಫೈನಲ್ ತಲುಪಿದ್ದು ಈ ಋತುವಿನ ಅತ್ಯುತ್ತಮ ಪ್ರದರ್ಶನವಾಗಿದೆ. ಕೆನಡಾ ಓಪನ್ ಟೂರ್ನಿಯಲ್ಲೂ ಸೆಮಿಫೈನಲ್ ಪ್ರವೇಶಿಸಿ ಭರವಸೆ ಮೂಡಿಸಿದ್ದರು. ಆದರೆ ಯುಎಸ್ ಓಪನ್ನಲ್ಲಿ ಕ್ವಾರ್ಟರ್ ಹಂತದಲ್ಲೆ ಎಡವಿದರು.
ಹೊಸ ಕೋಚ್ ಮೊಹ್ಮದ್ ಹಫೀಜ್ ಹಾಶೀಂ ಅವರು ಸಿಂ`Àು ಜತೆ ಪ್ರಯಾಣ ಬೆಳೆಸಿದ್ದಾರೆ. ಸಿಂಧು ಸೋಲಿನಿಂದ ಹೊರಬರಬೇಕಿದ್ದು ಒಲಿಂಪಿಕ್ಸ್ಗೆ ಅರ್ಹತೆ ಪಡೆಯಬೇಕಿದೆ.
ಪುರುಷರ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್ ಸ್ಪೇನ್, ಮಲೇಷ್ಯಾ ಮತ್ತು ಇಂಡೋನೇಷ್ಯಾ ಮಾಸ್ಟರ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಮೊದಲ ಪಂದ್ಯದಲ್ಲಿ ಜಪಾನ್ನ ಕೆಂಟೊ ಮೊಮೊಟೊ ವಿರುದ್ಧ ಸೆಣಸಲಿದ್ದಾರೆ.
ಸಿಂಧು, ಶ್ರೀಕಾಂತ್, ಪ್ರಣಾಯ್ಗೆ ಕೆನಡಾ ಮತ್ತು ಮಲೇಷ್ಯಾದಲ್ಲಿ ಸೂಪರ್ 500 ಟೂರ್ನಿಯಲ್ಲಿ ಪ್ರಶಸ್ತಿ ಕೈತಪ್ಪಿ ಹೋಗಿವೆ.
ಪ್ರಣಯ್ ಮೊದಲ ಪಂದ್ಯದಲ್ಲಿ ಬೆಲ್ಜಿಯಂನ ಜೂಲಿಯನ್ ಕಾರ್ರಾಗ್ಗಿ ಅವರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಇಂಡೋನೇಷ್ಯಾ ಚಾಂಪಿಯನ್ಗಳಾದ ಸಾತ್ವಿಕ್ಸಾಯಿರಾಜ್ ರಣಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಥಾಯ್ಲೆಂಡ್ ಜೋಡಿ ವಿರುದ್ಧ ಸೆಣಸಲಿದ್ದಾರೆ. ಮತ್ತೊಂದು ಜೋಡಿ ಅರ್ಜುನ್ , ಧ್ರುವ ಜೋಡಿ ಕಣದಲ್ಲಿದ್ದಾರೆ.
ಮಹಿಳಾ ಸಿಂಗಲ್ಸ್ನಲ್ಲಿ ಆಕಾರ್ಷಿ ಕಶ್ಯಪ್ ಮತ್ತು ಮಾಳ್ವಿಕಾ ಬಾನಸೂದ್ ಚೀನಾ ಜೋಡಿ ವಿರುದ್ಧ ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ.
ತ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಮೊದಲ ಸುತತಿನಲ್ಲಿ ಬಲ್ಗೆರಿಯಾ ಜೋಡಿಯನ್ನು ಎದುರಿಸಲಿದ್ದಾರೆ. ಮಿಶ್ರ ಡಬಲ್ಸ್ನಲ್ಲಿ ಸಿಕ್ಕಿ ರೆಡ್ಡಿ ಮತ್ತು ಅಶ್ವಿನಿ ಜೋಡಿಯಾಗಿ ಆಡಲಿದ್ದಾರೆ.