ಟೀಮ್ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಮತ್ತು ಬಾಲಿವುಡ್ ನಟಿ ಅತಿಯಾಶ ಶೆಟ್ಟಿ ನಡುವಿನ ಲವ್ವಿಡವ್ವಿ ಗುಟ್ಟಾಗಿ ಉಳಿದಿಲ್ಲ. ಪಾರ್ಟಿಗಳಲ್ಲಿ ಸೈಲೆಂಟ್ ಆಗಿ ಕಾಣಿಸಿಕೊಳ್ಳುವ ಈ ಜೋಡಿ, ಸಮಯ ಸಿಕ್ಕಾಗಲೆಲ್ಲಾ ಒಂದಾಗಿ ಕಾಣಿಸಿಕೊಂಡಿದ್ದು ಉಂಟು. ಕೆಲ ವರ್ಷಗಳಿಂದ ಡೇಟಿಂಗ್ನಲ್ಲಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಈಗ ರಾಹುಲ್ ಮತ್ತು ಅತಿಯಾ ಮದುವೆ ಬಗ್ಗೆ ಮಾತುಗಳು ಜೋರಾಗಿವೆ.

ಆತಿಯಾ ಶೆಟ್ಟಿ ಹಾಗೂ ಕೆ ಎಲ್ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗಾಳಿಸುದ್ದಿಯು ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಕ್ರಿಕೆಟಿಗ ರಾಹುಲ್ ಜತೆ ಆತಿಯಾ ಕಾಲ ಕಳೆದದ್ದು ಹೆಚ್ಚು ಸುದ್ದಿಯಾಗಿತ್ತು. ಇದಾದ ಬಳಿಕ ಆತಿಯಾ ಶೆಟ್ಟಿ ಸಹೋದರ ಆಹಾನ್ ಶೆಟ್ಟಿ ಚೊಚ್ಚಲ ಅಭಿನಯದ ಚಿತ್ರ ‘ತಡಪ್’ ಪ್ರೀಮಿಯರ್ ಶೋನಲ್ಲಿ ಆತಿಯಾ ಶೆಟ್ಟಿ ಹಾಗೂ ರಾಹುಲ್ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಈ ವಿಚಾರವಾಗಿ, ಖ್ಯಾತ ಬಾಲಿವುಡ್ ನಟ ಹಾಗೂ ಆತಿಯಾ ಶೆಟ್ಟಿ ತಂದೆ ಸುನಿಲ್ ಶೆಟ್ಟಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಈಗ ಸಾಕಷ್ಟು ಸಮಯ ಕಳೆದಿದ್ದು, ಅವರು ಏನು ಮಾಡಬೇಕು ಎನ್ನುವುದು ಅವರಿಗೆ ತಿಳಿದಿದೆ. ನನ್ನ ಮಗಳು ಹಾಗೂ ಮಗ ಈಗಾಗಲೇ ಸಾಕಷ್ಟು ಜವಾಬ್ದಾರಿಯನ್ನು ಹೊಂದಿದ್ದಾರೆ. ಅವರು ಸ್ವತಂತ್ರವಾದ ನಿರ್ಧಾರ ತೆಗೆದುಕೊಳ್ಳಲು ನಾನು ಇಷ್ಟಪಡುತ್ತೇನೆ. ನನ್ನ ಆಶೀರ್ವಾದ ಅವರಿಬ್ಬರ ಮೇಲಿರಲಿದೆ ಎಂದು ಎಕಾನಮಿಕ್ ಟೈಮ್ಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಡಲು ಮುಂಬೈಗೆ ಬಂದಿಳಿದ ಕೆ.ಎಲ್. ರಾಹುಲ್ ಅವರನ್ನು ಪಿಕ್ ಮಾಡಲು ಆತಿಯಾ ಶೆಟ್ಟಿ ಏರ್ಪೋರ್ಟ್‌ಗೆ ಬಂದಿದ್ದರು. ಇದೀಗ ಬಾಲಿವುಡ್ ಹಾಗೂ ಕ್ರಿಕೆಟ್ ಅಭಿಮಾನಿಗಳು ಈ ತಾರಾ ಜೋಡಿಯನ್ನು ಒಂದಾಗಿ ಕಂಡು ಖುಷಿ ಪಟ್ಟಿದ್ದಾರೆ. ಮುಂಬೈನಲ್ಲಿ ಈ ಜೋಡಿ ಮನೆ ಕೂಡ ಖರೀದಿ ಮಾಡಿರುವ ಬಗ್ಗೆ ವರದಿಗಳಿವೆ. ಒಟ್ಟಿನಲ್ಲಿ ಏನೇ ಆಗಲಿ ಟೀಮ್ ಇಂಡಿಯಾದ ಮೋಸ್ಟ್ ಎಲಿಜಬಲ್ ಬ್ಯಾಚಲರ್ ಕೆ.ಎಲ್. ರಾಹುಲ್ ಮದುವೆ ಆಗುವ ಸಮಯದ ಬಂದ ಹಾಗಿದೆ.