ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ಕೀರಾನ್ ಪೊಲಾರ್ಡ್, ಐಪಿಎಲ್‌ನಿಂದ ನಿವೃತ್ತಿ ಹೊಂದಿದ್ದಾರೆ. ಕಲರ್ ಫುಲ್ ಟೂರ್ನಿಯಲ್ಲಿ ಅಭಿಮಾನಿಗಳನ್ನು ರಂಜಿಸಿದ ಇದು ಟಾಪ್ ಇನ್ನಿಂಗ್ಸ್ ಇಲ್ಲಿವೆ.
5) ರಾಜಸ್ಥಾನ್ ರಾಯಲ್ಸ್ ವಿರುದ್ಧ 64 (33 ಎಸೆತ)
2012ರ ಏಪ್ರಿಲ್ 11 ರಂದು ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ 68ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಎಂಟ್ರಿಕೊಟ್ಟ ವಿಂಡೀಸ್ ಬಾಹುಬಲಿ ಪೊಲಾರ್ಡ್, 93.94 ಸ್ಟ್ರೈಕ್ ರೇಟ್‌ನಲ್ಲಿ 64 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳಿಂದ ಕೂಡಿತ್ತು. ಪೊಲಾರ್ಡ್ ಆರ್ಭಟದಿಂದ ಮುಂಬೈ 20 ಓವರ್‌ಗಳಲ್ಲಿ 197/6 ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಿಟ್ಟು. ಈ ಪಂದ್ಯದಲ್ಲಿ ರಾಯಲ್ಸ್ 27 ರನ್ ಸೋಲುಕಂಡಿತ್ತು. ಪೊಲಾರ್ಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
4) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 70 (47 ಎಸೆತ)
143 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ (MI) 33/5 ಕ್ಕೆ ತತ್ತರಿಸಿತ್ತು. ಮುಂಬೈ ಗೆಲ್ಲೋದೇ ಅನುಮಾನ ಎಂದು ಹೇಳಲಾಗಿತ್ತು. ಆದರೆ ಕೈರಾನ್ ಪೊಲಾರ್ಡ್, RCB ಬೌಲರ್ಸ್ ಮೇಲೆ ಭರ್ಜರಿ ಸವಾರಿ ಮಾಡುವ ಮೂಲಕ, ಪಂದ್ಯದ ಗತಿಯನ್ನೇ ಬದಲಾಯಿಸಿದ್ದರು. ವೆಸ್ಟ್ ಇಂಡೀಸ್ ದೈತ್ಯ ಕೇವಲ 47 ಎಸೆತಗಳಲ್ಲಿ 70 ರನ್ ಗಳಿಸಿ, ಮುಂಬೈ ತಂಡವು 4 ವಿಕೆಟ್‌ಗಳ ಗೆಲುವು ತಂದುಕೊಟ್ಟಿದ್ದರು.
3) ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 66* (27 ಎಸೆತ)
2013 ಮೇ 13ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೀರನ್ ಪೊಲಾರ್ಡ್ ರೌದ್ರಾವತಾರ ತಾಳಿದ್ದರು. ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡಗೆ ಜಯ ತಂದುಕೊಟ್ಟಿದ್ದರು. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 178/3 ರನ್ ಗಳಿಸಿತ್ತು. ಪೊಲಾರ್ಡ್ 244.44 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 66 ರನ್ ಬಾರಿಸಿದ್ದರು.
2) ಪಂಜಾಬ್ ಕಿಂಗ್ಸ್ ವಿರುದ್ಧ 83 (31 ಎಸೆತ)
2019ರ ಏಪ್ರಿಲ್ 10 ರಂದು ಪಂಜಾಬ್ ಕಿಂಗ್ಸ್ ತಂಡವು ನೀಡಿದ್ದ 198 ರನ್ ಗುರಿಯನ್ನು ಮುಂಬೈ ಇಂಡಿಯನ್ಸ್ ಬೆನ್ನಟ್ಟಿತು. ಪಂಜಾಬ್ ಪರ ನಾಯಕ ಕೆಎಲ್ ರಾಹುಲ್ 64 ಎಸೆತಗಳಲ್ಲಿ 100 ರನ್ ಗಳಿಸಿದ್ದರು. ಪ್ರತ್ಯುತ್ತರವಾಗಿ, ಪೊಲಾರ್ಡ್ ಪಂಜಾಬ್ ಬೌಲಿಂಗ್ ದಾಳಿಯನ್ನು ಸಂಪೂರ್ಣವಾಗಿ ಪುಡಿಗಟ್ಟಿದ್ದರು. ಕೇವಲ 31 ಎಸೆತಗಳಲ್ಲಿ 83 ರನ್ ಬಾರಿಸಿ, ಮುಂಬೈ ತಂಡಕ್ಕೆ ದಿಗ್ವಿಜಯ ತಂದುಕೊಟ್ಟಿದ್ದರು. ತನ್ನ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
1) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 87* (34 ಎಸೆತ)
ಕೀರನ್ ಪೊಲಾರ್ಡ್ ಅವರ ಐಪಿಎಲ್ ವೃತ್ತಿಜೀವನದಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಇದು. 2021ರ ಮೇ 1 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪೊಲಾರ್ಡ್, ತಾನೊಬ್ಬ ಸ್ಫೋಟಕ ಬ್ಯಾಟರ್ ಎನ್ನುವುದನ್ನು ಕ್ರಿಕೆಟ್ ಜಗತ್ತಿಗೆ ಮತ್ತೊಮ್ಮೆ ಪರಿಚಯಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಧೋನಿ ನೇತೃತ್ವದ ತಂಡ 218/4 ಬೃಹತ್ ಮೊತ್ತವನ್ನು ದಾಖಲಿಸಿತು. ಚೆನ್ನೈ ಪರ ಅಂಬಟಿ ರಾಯುಡು ಕೇವಲ 27 ಎಸೆತಗಳಲ್ಲಿ 72 ರನ್ ಗಳಿಸಿದರು. ನಂತರ, ಕೀರನ್ ಪೊಲಾರ್ಡ್ ಸಿಎಸ್‌ಕೆ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿ, ಬೌಂಡರಿ ಸಿಕ್ಸರ್ ಸುರಿಮಳೆ ಹರಿಸಿದ್ದರು. 34 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 8 ಬೃಹತ್ ಸಿಕ್ಸರ್‌ಗಳ ನೆರವಿನಿಂದ 87* ರನ್ ಗಳಿಸಿದರು, ಅಲ್ಲದೆ, ಮುಂಬೈಗೆ ಅಸಾಧ್ಯವಾದ ಗೆಲುವು ತಂದುಕೊಟ್ಟಿದ್ದರು.