ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಭಾರತದ ಮಾಜಿ ನಾಯಕ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನುಭವಿ ವಿರಾಟ್ ಕೊಹ್ಲಿಯನ್ನು ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ಕ್ರಿಸ್ಟಿಯಾನೋ ರೊನಾಲ್ಡೊಗೆ ಹೋಲಿಸಿದ್ದಾರೆ.
ಇಬ್ಬರೂ ತಮ್ಮ ಆಟದಲ್ಲಿ ಪರಿಣಿತರು ಎಂದು ಕೆವಿನ್ ಹೇಳಿದ್ದಾರೆ. ಐಪಿಎಲ್ 2022 ರಲ್ಲಿ RCB ಪರ ಆಡುತ್ತಿರುವ ವಿರಾಟ್ ಲಯ ಕಂಡುಕೊಂಡಿದ್ದಾರೆ. ಕೊಹ್ಲಿ ಏಪ್ರಿಲ್ 30 ರಂದು ಬ್ರೆಬೋರ್ನ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಅರ್ಧಶತಕದೊಂದಿಗೆ ಫಾರ್ಮ್‌ಗೆ ಮರಳಿದ್ದಾರೆ. ಆದರೆ, ಈ ಪಂದ್ಯದಲ್ಲಿ ಆರ್‌ಸಿಬಿ ಆರು ವಿಕೆಟ್‌ಗಳಿಂದ ಸೋತಿತ್ತು.

ವಿರಾಟ್ ಕೊಹ್ಲಿಯ ಬ್ಯಾಟ್‌ನೊಂದಿಗಿನ ಹೋರಾಟವನ್ನು ಗಮನಿಸಿದರೆ, ಈ ಅರ್ಧಶತಕವು ಅವರ ವೃತ್ತಿಜೀವನದಲ್ಲಿ ಪ್ರಮುಖ ಇನ್ನಿಂಗ್ಸ್ ಎಂದು ಸಾಬೀತುಪಡಿಸಬಹುದು ಎಂದು ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ. ವಿರಾಟ್ ಕೊಹ್ಲಿ, ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ನೋಡಬೇಕಾಗಿದೆ. ಅವರು ತಮ್ಮ ಕ್ರೀಡೆಗಳಲ್ಲಿ ವಿಭಿನ್ನ ತಂಡಗಳು ಮತ್ತು ಎರಡು ರೀತಿಯ ಬ್ರ್ಯಾಂಡ್‌ಗಳನ್ನು ಹೊಂದಿದ್ದಾರೆ. ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡರೆ, ಕ್ರಿಸ್ಟಿಯಾನೋ ರೊನಾಲ್ಡೊ ಫುಟ್‌ಬಾಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಒಬ್ಬರು ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುತ್ತಾರೆ ಮತ್ತು ಒಬ್ಬರು RCB ಪರ ಆಡುತ್ತಾರೆ. ಅವರಿಬ್ಬರೂ ದೊಡ್ಡ ಬ್ರ್ಯಾಂಡ್‌ಗಳು. ಇವರು ಉತ್ತಮ ಪ್ರದರ್ಶನ ನೀಡಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಬಯಸುತ್ತಾರೆ” ಎಂದಿದ್ದಾರೆ.

ವಿರಾಟ್ ಕೊಹ್ಲಿಯ ದೊಡ್ಡ ವೈಶಿಷ್ಟ್ಯವೆಂದರೆ ಅವರನ್ನು ಅಭಿಮಾನಿಗಳು ಚೇಸಿಂಗ್ ಸ್ಟಾರ್ ಎಂದು ಕರೆಯುತ್ತಾರೆ. ಇವರು ಭಾರತದ ಪರ ಚೇಸ್ ಮಾಡುವಾಗ ಹೆಚ್ಚು ದಾಖಲೆ ಹೊಂದಿದ್ದಾರೆ.
ವಿರಾಟ್ ಒಬ್ಬ ಚಾಂಪಿಯನ್ ಮತ್ತು ಮ್ಯಾಚ್ ವಿನ್ನರ್ ಎಂದು ನನಗೆ ತಿಳಿದಿದೆ. ಆದರೆ, ಪಂದ್ಯ ಗೆಲ್ಲಲು ಅವರ ಇನ್ನಿಂಗ್ಸ್ ಸಾಕಾಗಲಿಲ್ಲ” ಎಂದು ಕೆವಿನ್ ತಿಳಿಸಿದ್ದಾರೆ.