IPL 2022- ಮುಂದಿನ ವರ್ಷವೂ ಧೋನಿ ಐಪಿಎಲ್ ನಲ್ಲಿರುತ್ತಾರೆ..! ನಾಯಕನೋ.. ಆಟಗಾರನೋ.. ಮೆಂಟರೋ..?

ಮಹೇಂದ್ರ ಸಿಂಗ್ ಧೋನಿ… ಈ ಹೆಸರಿನಲ್ಲಿದೆ ಒಂಥರಾ ಮಾಂತ್ರಿಕ ಶಕ್ತಿ. ಬಹುಶಃ ಭಾರತದಲ್ಲಿ ಸುನೀಲ್ ಗವಾಸ್ಕರ್, ಕಪಿಲ್ ದೇವ್, ಸಚಿನ್ ತೆಂಡುಲ್ಕರ್ ಅವರನ್ನು ಹೊರತುಪಡಿಸಿ ಅತ್ಯಂತ ಪ್ರೀತಿಯಿಂದ ಆರಾಧಿಸುವ ಕ್ರಿಕೆಟಿಗ ಅಂದ್ರೆ ಅದು ಮಹೇಂದ್ರ ಸಿಂಗ್ ಧೋನಿ.
ಹೊಡಿಬಡಿ ಆಟ.. ಉದ್ದ ಕೂದಲು.. ವಿಕೆಟ್ ಕೀಪಿಂಗ್ ಜವಾಬ್ದಾರಿಯೊಂದಿಗೆ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟಾಗ ಧೋನಿಯ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿದ್ದವು. 2007ರ ಟಿ-20 ವಿಶ್ವಕಪ್ ಗೆದ್ದ ನಂತರ ಧೋನಿ ವಿಶ್ವ ಕ್ರಿಕೆಟ್ ನಲ್ಲಿ ರಾರಾಜಿಸುವ ಸೂಚನೆ ನೀಡಿದ್ದರು. ಬಳಿಕ 2011ರ ವಿಶ್ವಕಪ್ ಗೆದ್ದ ನಂತರವಂತೂ ಧೋನಿಯ ಹವಾನೇ ಬದಲಾಗಿ ಹೋಯ್ತು. ನಾಯಕನಾಗಿ ಧೋನಿ ಟೀಮ್ ಇಂಡಿಯವನ್ನು ಯಶಸ್ಸಿನ ಎತ್ತರಕ್ಕೇರಿಸಿದ್ರು. ಅದೆಲ್ಲಾ ಈಗ ಇತಿಹಾಸ.
ಇನ್ನು ಐಪಿಎಲ್ ನಲ್ಲಿ ಧೋನಿಯ ಖದರ್ ಹೇಳುವುದೇ ಬೇಡ. ಸಿಎಸ್ ಕೆ ತಂಡದ ಐಕಾನ್ ಆಟಗಾರನಾಗಿದ್ದ ಧೋನಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ನಾಲ್ಕು ಬಾರಿ ಚಾಂಪಿಯನ್, ಐದು ಬಾರಿ ರನ್ನರ್ ಅಪ್ ಪ್ರಶಸ್ತಿ ಗೆದ್ದಿರುವ ಧೋನಿಯವರನ್ನು ಸಿಎಸ್ ಕೆ ಅಭಿಮಾನಿಗಳು ಹೃದಯದಿಂದ ಪ್ರೀತಿಸುತ್ತಾರೆ.
ಜಾರ್ಖಂಡ್ ನಲ್ಲಿ ಹುಟ್ಟಿ ಬೆಳೆದ್ರೂ ಚೆನ್ನೈ ನ ಕ್ರಿಕೆಟ್ ಅಭಿಮಾನಿಗಳು ಪ್ರೀತಿಯಿಂದ ತಲೈವಾ ಅಂತ ಕರೆಯುತ್ತಾರೆ. IPL 2022- CSK games are played, Thala has his fans everywhere

ಚೆನ್ನೈ ನಲ್ಲಿ ಧೋನಿಯವರನ್ನು ಆರಾಧಿಸುವಂತಹ ಕ್ರಿಕೆಟ್ ಅಭಿಮಾನಿಗಳು ಇದ್ದಾರೆ. ಒಬ್ಬ ಅಭಿಮಾನಿಯಂತೂ ತನ್ನ ಮನೆಯನ್ನು ಪೂರ್ತಿಯಾಗಿ ಧೋನಿಮಯವಾಗಿಸಿದ್ದ. ಅಷ್ಟರ ಮಟ್ಟಿಗೆ ಚೆನ್ನೈ ನಲ್ಲಿ ಧೋನಿಯವರನ್ನು ಆರಾಧಿಸುತ್ತಾರೆ.
ಅದೇ ರೀತಿ ಧೋನಿಗೂ ಸಿಎಸ್ ಕೆ ತಂಡದ ಮೇಲೆ ಅಪಾರವಾದ ಪ್ರೀತಿ ಬದ್ಧತೆ ಇದೆ. 12 ವರ್ಷಗಳ ಕಾಲ ಸಿಎಸ್ ಕೆ ತಂಡದ ನಾಯಕನಾಗಿದ್ದ ಧೋನಿ, 2022ರ ಐಪಿಎಲ್ ನಲ್ಲಿ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಬಿಟ್ಟುಕೊಟ್ಟಿದ್ದರು. ಆದ್ರೆ ಸಿಎಸ್ ಕೆ ಸಾಲು ಸಾಲು ಪಂದ್ಯಗಳನ್ನು ಸೋತ ನಂತರ ಮತ್ತೆ ನಾಯಕತ್ವ ಧೋನಿಯ ಹೆಗಲಿಗೆ ಬಿತ್ತು.
ಸೋಲಿನಿಂದ ಕಂಗೆಟ್ಟಿದ್ದ ತಂಡಕ್ಕೆ ಧೋನಿ ಈಗ ಬೂಸ್ಟರ್ ನೀಡಿದ್ದಾರೆ. ಮೈದಾನದಲ್ಲಿ ಧೋನಿ ನಾಯಕನಾಗಿ ಟಾಸ್‍ಗೆ ಆಗಮಿಸುವಾಗ ಸಿಎಸ್ ಕೆ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ. ಧೋನಿಯ ಭಾವಚಿತ್ರ ಮತ್ತು ಬ್ಯಾನರ್ ಗಳು ಮೈದಾನವನ್ನೇ ಆವರಿಸಿದ್ದವು.
ಈ ನಡುವೆ, ಮಹೇಂದ್ರ ಸಿಂಗ್ ಧೋನಿ ಮುಂದಿನ ವರ್ಷವೂ ಐಪಿಎಲ್ ನಲ್ಲಿ ಆಡುತ್ತಾರೆ. ಈಗಾಗಲೇ ಧೋನಿ ಮುಂದಿನ ವರ್ಷ ಹಳದಿ ಬಣ್ಣದ ಜೆರ್ಸಿಯಲ್ಲಿರುತ್ತೇನೆ. ಆದ್ರೆ ಅದು ಯಾವ ರೀತಿ ಎಂದು ಹೇಳಿಲ್ಲ.

ಆದ್ರೆ ಧೋನಿ ಹಾಗೇ ಸುಮ್ಮನೆ ವಿದಾಯ ಹೇಳುವ ವ್ಯಕ್ತಿಯಲ್ಲ. ತನ್ನ ಕ್ರಿಕೆಟ್ ಬದುಕಿನ ವಿದಾಯವನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು ಎಂಬ ಆಸೆಯೂ ಅವರಲ್ಲಿದೆ.
41ರ ಹರೆಯದ ಧೋನಿ ಫಿಟ್ ಆಂಡ್ ಫೈನ್ ಆಗಿದ್ದಾರೆ. ಆಟದಲ್ಲಿನ ಖದರ್ ಕಮ್ಮಿಯಾಗಿದ್ರೂ ಸಮಯೋಚಿತವಾಗಿ ಆಡುವುದು ಗೊತ್ತಿದೆ. ಹೀಗಾಗಿ ಧೋನಿ ಅವರಿಗೆ ಈ ಬಾರಿಯ ಐಪಿಎಲ್ ಟೂರ್ನಿಯ ಕೊನೆಯ ಐಪಿಎಲ್ ಅಲ್ಲ. ಯಾಕಂದ್ರೆ ಧೋನಿ ಈ ಹಿಂದೆಯೇ ಹೇಳಿದ್ದರು. ಸಿಎಸ್ ಕೆ ಅಭಿಮಾನಿಗಳ ಮುಂದೆ ಚೆನ್ನೈ ನಲ್ಲೇ ತನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುತ್ತೇನೆ ಎಂದು ಹೇಳಿದ್ದರು. ಧೋನಿಯ ಈ ಆಸೆ ಈಡೇರಬೇಕಾದ್ರೆ ಮುಂದಿನ ವರ್ಷದ ತನಕ ಕಾಯಲೇಬೇಕು. ಅದು ಕೂಡ ಕೋವಿಡ್ ಸೋಂಕು ಕಮ್ಮಿಯಾದ್ರೆ ಮಾತ್ರ ಧೋನಿಯ ಆಸೆ ಈಡೇರಬಹುದು. ಆದ್ರೆ ಒಂದು ನೆನಪಿಡಿ.. ಧೋನಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಅವರ ಮನಸಲ್ಲಿ ಏನಿದೆ ಎಂಬುದು ಅವರಿಗೆ ಮಾತ್ರ ಗೊತ್ತಿದೆ. ಯಾಕಂದ್ರೆ ಧೋನಿ ನಿಗೂಢ ವ್ಯಕ್ತಿತ್ವದ ಕ್ರಿಕೆಟಿಗ.