ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ತವರು ಟಿ-20 ಸರಣಿ ಜೂನ್ 9 ರಿಂದ ಆರಂಭವಾಗಲಿದೆ. ದಿನೇಶ್ ಕಾರ್ತಿಕ್ ಈ ಸರಣಿಯಲ್ಲಿ ಭಾರತಕ್ಕಾಗಿ ಮೊದಲ ಅಂತಾರಾಷ್ಟ್ರೀಯ ಟಿ 20 ಪಂದ್ಯವನ್ನು ಮತ್ತು 160 ನೇ ಅಂತಾರಾಷ್ಟ್ರೀಯ ಟಿ 20 ಪಂದ್ಯದ ತಂಡದ ಭಾಗವಾಗಿದ್ದಾರೆ.
ಭಾರತ ತನ್ನ ಮೊದಲ T-20 ಅಂತಾರಾಷ್ಟ್ರೀಯ ಪಂದ್ಯವನ್ನು 1 ಡಿಸೆಂಬರ್ 2006 ರಂದು ಆಡಿತು. ಈ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ವೀರೇಂದ್ರ ಸೆಹ್ವಾಗ್, ಅಜಿತ್ ಅಗರ್ಕರ್, ಇರ್ಫಾನ್ ಪಠಾಣ್ ಮತ್ತು ಎಂಎಸ್ ಧೋನಿ ಅವರಂತಹ ಆಟಗಾರರು ಇದ್ದರು. ದಿನೇಶ್ ಕಾರ್ತಿಕ್ ಕೂಡ ತಂಡದಲ್ಲಿದ್ದರು. ಅದೇ ಸಮಯದಲ್ಲಿ, ಗ್ರೇಮ್ ಸ್ಮಿತ್, ಹರ್ಷಲ್ ಗಿಬ್ಸ್, ಎಬಿ ಡಿವಿಲಿಯರ್ಸ್ ಮತ್ತು ಅಲ್ಬಿ ಮೊರ್ಕೆಲ್ ದಕ್ಷಿಣ ಆಫ್ರಿಕಾದ ತಂಡದ ಭಾಗವಾಗಿದ್ದರು.
ಆ ಪಂದ್ಯದಲ್ಲಿ ಮೊದಲು ಆಡಿದ ದಕ್ಷಿಣ ಆಫ್ರಿಕಾ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತ್ತು. ಈ ಗುರಿಯನ್ನು ಭಾರತ ಒಂದು ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ನಷ್ಟಕ್ಕೆ ಸಾಧಿಸಿತು. ಯಶಸ್ವಿ ರನ್ ಚೇಸ್ ನಲ್ಲಿ 28 ಎಸೆತಗಳಲ್ಲಿ 31 ರನ್ ಗಳಿಸಿದ ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಭಾರತ ತನ್ನ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದಾಗ. ಆ ಪಂದ್ಯದಲ್ಲಿ ಆಡಿದ ಎಲ್ಲ ಆಟಗಾರರು ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ಯುವ ತಂಡದೊಂದಿಗೆ ಮತ್ತೊಮ್ಮೆ ಕಾಣಿಸಿಕೊಳ್ಳಲಿರುವ ಏಕೈಕ ಆಟಗಾರ ದಿನೇಶ್ ಕಾರ್ತಿಕ್. ಕಾರ್ತಿಕ್ ಭಾರತಕ್ಕಾಗಿ ಇದುವರೆಗೆ 32 ಅಂತಾರಾಷ್ಟ್ರೀಯ T20I ಗಳನ್ನು ಆಡಿದ್ದಾರೆ. 26 ಇನ್ನಿಂಗ್ಸ್‌ಗಳಲ್ಲಿ 33.25 ಸರಾಸರಿಯಲ್ಲಿ 399 ರನ್ ಗಳಿಸಿದ್ದಾರೆ.
ಭಾರತ 2006 ರಿಂದ ಒಟ್ಟು 159 ಟಿ-20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಈ ಪೈಕಿ 104 ಪಂದ್ಯಗಳನ್ನು ಗೆದ್ದಿದ್ದರೆ, 51 ಪಂದ್ಯಗಳಲ್ಲಿ ಸೋಲನುಭವಿಸಬೇಕಾಗಿದೆ. ತಮಾಷೆಯೆಂದರೆ 2007ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಾಗ ಅದಕ್ಕೂ ಮುನ್ನ ತಂಡ ಒಂದೇ ಒಂದು ಟಿ20 ಪಂದ್ಯವನ್ನಾಡಿತ್ತು.