Kane Williamson – ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಿಂದ ಕೇನ್ ವಿಲಿಯಮ್ಸನ್ ಔಟ್..!
ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಿಂದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಹೊರಗುಳಿದಿದ್ದಾರೆ. ಮೊಣ ಕೈ ನೋವಿನಿಂದ ಇನ್ನೂ ಕೂಡ ಕೇನ್ ವಿಲಿಯಮ್ಸನ್ ಚೇತರಿಸಿಕೊಂಡಿಲ್ಲ. ಹೀಗಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಕೇನ್ ವಿಲಿಯಮ್ಸನ್ ಅವರು ಏಕದಿನ ಸರಣಿಯಲ್ಲಿ ಆಡುವ ಸಾಧ್ಯತೆಗಳಿವೆ.
31ರ ಹರೆಯದ ಕೇನ್ ವಿಲಿಯಮ್ಸನ್ ಅವರು ಈ ಹಿಂದೆ ಬಾಂಗ್ಲಾ ದೇಶ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಆಡಿರಲಿಲ್ಲ.
ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 17 ರಿಂದ ಕ್ರೈಸ್ಟ್ ಚರ್ಚ್ ನಡೆಯಲಿದೆ. ನ್ಯೂಜಿಲೆಂಡ್ ತಂಡವನ್ನು ಟಾಮ್ ಲಥಮ್ ಅವರು ಮುನ್ನಡೆಸಲಿದ್ದಾರೆ. ಆಲ್ ರೌಂಡರ್ ಕಾಲಿನ್ ಡಿ ಗ್ರ್ಯಾಂಡ್ ಹೊಮ್ ಮತ್ತು ಆರಂಭಿಕ ಹಮೀಶ್ ರುಥರ್ ಫೋರ್ಡ್ ಅವರು ತಂಡವನ್ನು ಸೇರಿಕೊಂಡಿದ್ದಾರೆ. ಇನ್ನು ವಿಕೆಟ್ ಕೀಪರ್ ಕಾಮ್ ಫ್ಲೇಚರ್ ಮತ್ತು ವೇಗಿ ಬ್ಲೆರ್ ಟಿಕ್ನೆರ್ ಅವರು ಟೆಸ್ಟ್ ತಂಡದ ಹೊಸ ಮುಖಗಳಾಗಿದ್ದಾರೆ. Kane Williamson ruled out of South Africa series
ಇನ್ನು ವೈಯಕ್ತಿಕ ಕಾರಣಗಳಿಂದ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಮತ್ತು ಅಜಾಝ್ ಪಟೇಲ್ ಕೂಡ ಮೊದಲ ಟೆಸ್ಟ್ ನಿಂದ ವಂಚಿತರಾಗಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ವೇಳೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ.
ನ್ಯೂಜಿಲೆಂಡ್ ಟೆಸ್ಟ್ ತಂಡ
ಟಾಮ್ ಲಥಮ್ (ನಾಯಕ), ಟಾಮ್ ಬ್ಲುಂಡೆಲ್ , ಡೆವೊನ್ ಕಾನ್ವೆ, ಕಾಲಿನ್ ಡೆ ಗ್ರ್ಯಾಂಡ್ ಹೊಮ್, ಕ್ಯಾಮ್ ಫ್ಲೆಚರ್, ಮ್ಯಾಟ್ ಹೆನ್ರಿ, ಕೈಲ್ ಜಾಮಿನ್ಸನ್, ಡರಿಲ್ ಮಿಟ್ಚೆಲ್, ಹೆನ್ರಿ ನಿಕೊಲಾಸ್, ರಚಿನ್ ರವೀಂದ್ರ, ಹಮೀಶ್ ರುಥರ್ ಫೋರ್ಡ್, ಟೀಮ್ ಸೌಥಿ, ಬ್ಲೇರ್ ಟಿಕ್ನೇರ್, ನೇಲ್ ವಾಗ್ನೇರ್, ವಿಲ್ ಯಂಗ್.