ಸನ್ ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ತಮ್ಮನ್ನು ತಂಡದಿಂದ ಕೈಬಿಟ್ಟ ವಿಚಾರವಾಗಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಸನ್ ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ನಾಯಕ ಕೇನ್ ವಿಲಿಯಮ್ಸನ್,ವಿಂಡೀಸ್ ನಾಯಕ ನಿಕೊಲೊಸ್ ಪೂರಾನ್ ಸೇರಿದಂತೆ 12 ಆಟಗಾರರನ್ನು ಕೈಬಿಟ್ಟಿದೆ.
ಈ ಕುರಿತು ವಿಲಿಯಮ್ಸನ್, ಫ್ರಾಂಚೈಸಿ, ನನ್ನ ತಂಡಕ್ಕೆ, ಸಿಬ್ಬಂದಿಗಳಿಗೆ ಆರೇಂಜ್ ಆರ್ಮಿ ಚೆನ್ನಾಗಿತ್ತು. 8 ವರ್ಷ ತುಂಬ ಚೆನ್ನಾಗಿ ಆನಂದಿಸಿದ್ದೇನೆ. ಈ ತಂಡ ಮತ್ತು ಹೈದ್ರಾಬಾದ್ ನಗರ ನನಗೆ ಯಾವಗಲೂ ವಿಶೇಷ ಎಂದು ಭಾವನಾತ್ಮಕವಾಗಿ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸನ್ ರೈಸರ್ಸ್ ತಂಡಕ್ಕ 8 ವರ್ಷಗಳ ಕಾಲ ನಾಯಕರಾಗಿದ್ದರು.ಐಪಿಎಲ್ನಲ್ಲಿ 2,101 ರನ್, 36.22 ಎವರೇಜ್ ಹೊಂದಿದ್ದು 126.03 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
2015ರಲ್ಲಿ ಸನ್ ರೈಸರ್ಸ್ಗ ಬಂದ ಕೇನ್ ವಿಲಿಯಮ್ಸನ್ 2018ರಲ್ಲಿ ತಂಡದ ನಾಯಕನಾದರು. 2018ರಲ್ಲಿ ತಂಡವನ್ನು ಫೈನಲ್ಗೆ ಕೊಂಡೊಯ್ದರು.