ICC 2021ರ ಪುರುಷರ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಐಸಿಸಿಯ ಟೆಸ್ಟ್ ತಂಡದಲ್ಲಿ ಭಾರತದ ಮೂವರು ಆಟಗಾರರಿಗೆ ಸ್ಥಾನ ನೀಡಲಾಗಿದೆ. ಆದರೆ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ 2021ರ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ನಾಯಕನಾಗಿ ಆಯ್ಕೆ ಆಗಿದ್ದಾರೆ. ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡವನ್ನು ಮೊತ್ತ ಮೊದಲ ಟೆಸ್ಟ್ ಚಾಂಪಿಯನ್ ತಂಡವಾಗಿ ಮಾಡಿದ್ದರು. ಐಸಿಸಿ 2021ರ ಟೆಸ್ಟ್ ತಂಡದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡದ ತಲಾ ಮೂವರು ಆಟಗಾರರು ಸ್ಥಾನ ಪಡೆದಿದ್ದರೆ, ನ್ಯೂಜಿಲೆಂಡ್ನ ಇಬ್ಬರು ಹಾಗೂ ಶ್ರೀಲಂಕಾ, ಇಂಗ್ಲೆಂಡ್, ಆಸ್ಟ್ರೇಲಿಯಾದ ತಲಾ ಒಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.
ಐಸಿಸಿ 2021ರ ಟೆಸ್ಟ್ ತಂಡ
ದಿಮುತ್ ಕರುಣಾರತ್ನೆ, ರೋಹಿತ್ ಶರ್ಮಾ, ಮಾರ್ನಸ್ ಲಬುಶೇನ್, ಜೋ ರೂಟ್, ಕೇನ್ ವಿಲಿಯಮ್ಸನ್, ಫವಾದ್ ಆಲಂ, ರಿಷಬ್ ಪಂತ್, ಆರ್. ಅಶ್ವಿನ್, ಕೈಲ್ ಜೇಮಿಸನ್, ಹಸನ್ ಅಲಿ, ಶಾಹಿನ್ ಅಫ್ರಿದಿ