ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಹಂತ-3ರಲ್ಲಿ ಭಾರತದ ಮಿಶ್ರ ತಂಡ ಚಿನ್ನದ ಪದಕ ಗೆದ್ದಿದೆ. ಭಾರತದ ಜ್ಯೋತಿ ಸುರೇಖಾ ಮತ್ತು ಅಭಿಷೇಕ್ ವರ್ಮಾ ಅವರು ಫ್ರೆಂಚ್ ಜೋಡಿ ರಾಬಿನ್ ಜತ್ಮಾ ಮತ್ತು ಲಿಸೆಲ್ ಜತ್ಮಾ ಅವರನ್ನು 152-149 ಅಂತರದಿಂದ ಸೋಲಿಸಿತು. ಮತ್ತೊಂದೆಡೆ ಸಿಂಗಲ್ಸ್‌ನಲ್ಲಿ ಸುರೇಖಾ ಬೆಳ್ಳಿ ಪದಕ ಗೆದ್ದಿದ್ದಾರೆ.
ಮಿಶ್ರ ಸೆಮಿಫೈನಲ್‌ನಲ್ಲಿ ಭಾರತದ ಜೋಡಿ 156-151 ರಲ್ಲಿ ಎಸ್ಟೋನಿಯಾವನ್ನು ಸೋಲಿಸಿತು. ಇದಕ್ಕೂ ಮುನ್ನ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಅಭಿಷೇಕ್ ಮತ್ತು ಜ್ಯೋತಿ ಅವರು ಎಲ್ ಸಾಲ್ವಡಾರ್‌ನ ರಾಬರ್ಟೊ ಹೆರ್ನಾಂಡೆಸ್ ಮತ್ತು ಸೋಫಿಯಾ ಪೇಜ್ ಅವರಿಂದ ಕಠಿಣ ಸವಾಲು ಎದುರಿಸಿದರು. ಎರಡೂ ತಂಡಗಳು 3-3ರಲ್ಲಿ ಸಮಬಲ ಸಾಧಿಸಿದವು. ಇದಾದ ಬಳಿಕ ಭಾರತ ಶೂಟೌಟ್‌ನಲ್ಲಿ ಜಯ ಸಾಧಿಸಿತು.
ಇದಕ್ಕೂ ಮುನ್ನ ಕೊರಿಯಾದಲ್ಲಿ ನಡೆದ ವಿಶ್ವಕಪ್ ಸ್ಟೇಜ್-2ರಲ್ಲಿ ಅಭಿಷೇಕ್ ವರ್ಮಾ ಮತ್ತು ಅವನೀತ್ ಕೌರ್ ಜೋಡಿ ಮಿಶ್ರ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿತ್ತು.

ಮಹಿಳೆಯರ ಕಾಂಪೌಂಡ್ ಸಿಂಗಲ್ಸ್ ನಲ್ಲಿ ಸುರೇಖಾ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್‌ನ ಎಲ್ಲ ಗಿಬ್ಸನ್ ಅವರನ್ನು ಸೋಲಿಸಿದರು. ಉಭಯ ಆಟಗಾರ್ತಿಯ ಸಮ ಅಂಕಗಳನ್ನು ಗಳಿಸಿದ್ದರಿಂದ, ಶೂಟೌಟ್‌ನಲ್ಲಿ ಭಾರತೀಯ ಆಟಗಾರ್ತಿ ನಿರಾಸೆ ಅನುಭವಿಸಿದರು.
ಭಾರತ ಮಹಿಳಾ ರಿಕರ್ವ್ ತಂಡ ಈಗಾಗಲೇ ಫೈನಲ್ ತಲುಪಿದೆ. ಭಾರತದ ದೀಪಿಕಾ ಕುಮಾರಿ, ಅಂಕಿತಾ ಭಗತ್ ಮತ್ತು ಸಿಮ್ರಂಜಿತ್ ಕೌರ್ ಸೆಮಿಫೈನಲ್‌ನಲ್ಲಿ ಟರ್ಕಿಯ ಗುಲ್ನಾಜ್ ಕೊಸ್ಕುನ್, ಎಜಗಿ ಬಸರನ್ ಮತ್ತು ಯಾಸ್ಮಿನ್ ಅಂಗೋಜ್ ಅವರನ್ನು 5-3 ರಿಂದ ಸೋಲಿಸಿದರು. ಭಾನುವಾರ ನಡೆಯಲಿರುವ ಚಿನ್ನದ ಪದಕದ ಪಂದ್ಯದಲ್ಲಿ ಭಾರತ ತೈವಾನ್ ತಂಡವನ್ನು ಎದುರಿಸಲಿದೆ.