ಶನಿವಾರ ನಡೆದ ಐಪಿಎಲ್ ನ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿದ ಗ್ಲೆನ್ ಮ್ಯಾಕ್ಸ್ವೆಲ್ ಅದ್ಭುತ ರನ್ ಔಟ್ ಮಾಡಿ ಗಮನ ಸೆಳೆದರು. ಮುಂಬೈನ ಇನಿಂಗ್ಸ್ನ ಹತ್ತನೇ ಓವರ್ನಲ್ಲಿ ಆಕಾಶದೀಪ್ ಬೌಲಿಂಗ್ ಮಾಡುತ್ತಿದ್ದಾಗ, ತಿಲಕ್ ವರ್ಮಾ ಅವರು ಶಾರ್ಟ್ ಕವರ್ನಲ್ಲಿ ಆಡುವ ಮೂಲಕ ರನ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಗ್ಲೆನ್ ಮ್ಯಾಕ್ಸ್ವೆಲ್ ಚೆಂಡನ್ನು ಹಿಡಿದು ಸ್ಟಂಪ್ಗೆ ಗುರಿಯಿಟ್ಟು ಎಸೆದರು. ಚೆಂಡು ನೇರವಾಗಿ ಸ್ಟಂಪ್ಗೆ ಬಡೆದು ತಿಲಕ್ ವರ್ಮಾ ಔಟಾದರು. ಮ್ಯಾಕ್ಸ್ ವೆಲ್ ಕೇವಲ 2.38 ಸೆಕೆಂಡ್ ಗಳಲ್ಲಿ ಈ ಥ್ರೋ ಮಾಡಿ ತಿಲಕ್ ಅವರನ್ನು ಔಟ್ ಮಾಡಿದರು.
ಜಾಂಟಿ ರೋಡ್ಸ್ ನೆನಪಾದರು
ಮ್ಯಾಕ್ಸ್ವೆಲ್ ಥ್ರೋವನ್ನು ನೋಡಿದಾಗ ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್ ಆಟಗಾರ ಜಾಂಟಿ ರೋಡ್ಸ್ ನೆನಪಾದರು. ಮ್ಯಾಕ್ಸ್ವೆಲ್ ರನ್ ಔಟ್ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜನರು ಮ್ಯಾಕ್ಸಿಯನ್ನು ಜಾಂಟಿ ರೋಡ್ಸ್ಗೆ ಹೋಲಿಸುತ್ತಿದ್ದಾರೆ. ಮ್ಯಾಕ್ಸ್ವೆಲ್ ಅವರನ್ನು RCB 14.25 ಕೋಟಿಗೆ ಉಳಿಸಿಕೊಂಡಿದೆ.
1993 ರಲ್ಲಿ, ಜಾಂಟಿ ರೋಡ್ಸ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅದು ಇಲ್ಲಿಯವರೆಗೆ ಮುರಿಯದೆ ಉಳಿದಿದೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಫೀಲ್ಡರ್ ಆಗಿ ರೋಡ್ಸ್ 5 ಕ್ಯಾಚ್ಗಳನ್ನು ಪಡೆದರು ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆ ಪಂದ್ಯದಲ್ಲಿ ರೋಡ್ಸ್ ಕೂಡ ಆಡಿರಲಿಲ್ಲ.
ಅಷ್ಟೇ ಅಲ್ಲ, ಜಾಂಟಿ ರೋಡ್ಸ್ ಸಾರ್ವಕಾಲಿಕ ಬೆಸ್ಟ್ ರನ್ ಔಟ್ ಮಾಡಿದ ಹಿರಿಮೆಗೂ ಪಾತ್ರರಾಗಿದ್ದಾರೆ. 1992 ರ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಇಂಜಮಾಮ್-ಉಲ್- ಹಕ್ ಅವರನ್ನು ಔಟ್ ಮಾಡುವ ಮೂಲಕ ಜಾಂಟಿ ಈ ರನ್ ಔಟ್ ಅನ್ನು ಮಾಡಿದರು. ಆ ವಿಶ್ವಕಪ್ ಪಂದ್ಯದಲ್ಲಿ, ರೋಡ್ಸ್ ವೇಗವಾಗಿ ಓಡಿ ನಂತರ ಗಾಳಿಯಲ್ಲಿ ವಿಕೆಟ್ ಕಡೆಗೆ ಜಿಗಿಯುವ ಮೂಲಕ ಇಂಜಮಾಮ್-ಉಲ್-ಹಕ್ ಅವರನ್ನು ರನ್ ಔಟ್ ಮಾಡಿದರು.