ಸಚಿನ್ ದಾಖಲೆಯನ್ನ ಚಿಂದಿ ಉಡಾಯಿಸಿದ ಜೋ ರೂಟ್ sachin sports karnataka
ದಾಖಲೆಗಳಿರೋದೇ ಮುರಿಯೋದಕ್ಕೆ ಅನ್ನೋ ಮಾತಿದೆ. ಕ್ರೀಡಾ ಜಗತ್ತಿನಲ್ಲಿ ಪ್ರತಿದಿನ ಒಂದಲ್ಲಾ ಒಂದು ದಾಖಲೆ ಸೃಷ್ಠಿಯಾಗುತ್ತಲೇ ಇರುತ್ತದೆ. ಅದೇ ರೀತಿ ಒಂದಲ್ಲಾ ಒಂದು ದಾಖಲೆ ಮುರಿಯುತ್ತಲೇ ಇರುತ್ತದೆ. ಒಂದೇ ಮಾತಿನಲ್ಲಿ ಹೇಳೋದಾದ್ರೆ ಕ್ರೀಡಾ ಜಗತ್ತಿನಲ್ಲಿ ಯಾವ ದಾಖಲೆಯೂ ಶಾಶತ್ವವಲ್ಲ. ಅದಕ್ಕೆ ಕ್ರಿಕೆಟ್ ಕೂಡ ಹೊರತಾಗಿಲ್ಲ. ಕ್ರಿಕೆಟ್ ಆರಂಭವಾದಾಗಿನಿಂದಲೂ ಸಾಕಷ್ಟು ದಾಖಲೆಗಳು ಇತಿಹಾಸದ ಪುಟ ಸೇರಿವೆ. ಹಾಗೇ ಇತಿಹಾಸ ಪುಟ ಸೇರಿರುವ ಅದೆಷ್ಟೋ ದಾಖಲೆಗಳನ್ನ ಈಗಿನ ಆಧುನಿಕ ಕ್ರಿಕೆಟ್ ಆಟಗಾರರು ಬ್ರೇಕ್ ಮಾಡಿದ್ದಾರೆ. ಅದರಂತೆ ಇದೀಗ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ದಾಖಲೆಗಳನ್ನ ಮುರಿದಿದ್ದಾರೆ.
ಹೌದು..! ಸದ್ಯ ಆಶಸ್ ಸರಣಿಯಲ್ಲಿ ನಿರತರಾಗಿರುವ ಜೋ ರೂಟ್, ಆಸೀಸ್ ಬೌಲರ್ ಗಳ ಬೆಂಡೆತ್ತುತ್ತಿದ್ದಾರೆ. ಎಂದಿನಂತೆ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮುಂದುವರೆಸಿರುವ ರೂಟ್, ಇದೀಗ ಸಚಿನ್ ದಾಖಲೆ ಮುರಿದು ಮುಂದೆ ನಡೆದಿದ್ದಾರೆ. ರೂಟ್ ಒಂದು ಕ್ಯಾಲೆಂಡರ್ ಇಯರ್ ನಲ್ಲಿ ಟೆಸ್ಟ್ ನಲ್ಲಿ ಅತ್ಯಧಿಕ ರನ್ ಗಳಿಸಿದ ಕ್ರಿಕೆಟರ್ ಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದ್ದಾರೆ.
ಆ ಮೂಲಕ ಕ್ರಿಕೆಟ್ ಗಾಡ್, ಮಾಸ್ಟರ್ ಬ್ಲಾಸರ್ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಜೋ ರೂಟ್ ಮುರಿದಿದ್ದಾರೆ. ಆಶಸ್ ಸರಣಿಯ ಭಾಗವಾಗಿ ಆಸ್ಟ್ರೇಲಿಯಾ ವಿರುದ್ಧ ಬ್ಯಾಟ್ ಬೀಸುತ್ತಿರುವ ರೂಟ್, ಒಂದೇ ವರ್ಷದಲ್ಲಿ 1563 ರನ್ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ್ದಾರೆ.
ಇನ್ನು ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊಹ್ಮದ್ ಯುಸೆಫ್ 1788 ರನ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ವಿವಿಎಸ್ ರಿಚರ್ಡ್ 1710 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ 1656 ರನ್ ಗಳಿಸಿ ಗ್ರೇಮ್ ಸ್ಮಿತ್ ಇದ್ದರೇ, ಮೈಖಲ್ ಕ್ಲಾರ್ಕ್ 1595 ರನ್ ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ರೂಟ್, ಆರನೇ ಸ್ಥಾನದಲ್ಲಿ 1562 ರನ್ ಗಳೊಂದಿಗೆ ಸಚಿನ್ ತೆಂಡುಲ್ಕರ್ ಇದ್ದಾರೆ.
ಸದ್ಯ ಜೋ ರೂಟ್ ಅಜೇಯವಾಗಿ 1563 ರನ್ ಗಳಿಸಿದ್ದು, ಈ ವರ್ಷದ ಅಂತ್ಯದೊಳಗೆ ಮೈಖಲ್ ಕ್ಲಾರ್ಕ್, ಗ್ರೆಮ್ ಸ್ಮಿತ್ ದಾಖಲೆಗಳನ್ನ ಮುರಿಯುವ ಸಾಧ್ಯತೆಗಳಿವೆ.