ಭಾನುವಾರ ನಡೆದ ಸಿಎಸ್ ಕೆ ಹಾಗೂ ಪಿಬಿಕೆಎಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜಿತೇಶ್ ಶರ್ಮಾ ಎಲ್ಲರ ಮನ ಗೆದಿದ್ದಾರೆ. ಜಿತೇಶ್ ಮೊದಲು ಮೂರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 26 ರನ್ ಗಳಿಸಿದರು, ನಂತರ ವಿಕೆಟ್ ಕೀಪಿಂಗ್ ಮಾಡುವಾಗ ಅವರು ರಾಹುಲ್ ಚಹಾರ್ ಎಸೆತದಲ್ಲಿ ಧೋನಿ ಕ್ಯಾಚ್ ಪಡೆದು ಅಬ್ಬರಿಸಿದ್ದಾರೆ.
ಅಸಲಿಗೆ ಮೈದಾನದ ಅಂಪೈರ್ ಧೋನಿ ಅವರ ವಿಕೆಟ್ ನೀಡದಾಗ ಡಿ ಆರ್ ಎಸ್ ಬಳಿಸಿಕೊಂಡು ಮಾಜಿ ಚೆನ್ನೈ ನಾಯಕನಿಗೆ ಪೆವಲಿಯನ್ ಹಾದಿ ತೊರಿಸಿದ್ದಾರೆ.
ಐಪಿಎಲ್ ಮೆಗಾ ಹರಾಜಿಗೂ ಮೊದಲು ರಣಜಿ ಟ್ರೋಫಿಯ ತಂಡದಿಂದ ಜಿತೇಶ್ ಅವರನ್ನು ವಿದರ್ಭ ತಂಡದಿಂದ ಕೈಬಿಡಲಾಯಿತು. ನಂತರ ಅವರು ಖಿನ್ನತೆಗೆ ಒಳಗಾಗಿದ್ದರು. IPL ಮೆಗಾ ಹರಾಜಿನಲ್ಲಿ, ಪಂಜಾಬ್ ಕಿಂಗ್ಸ್ ಅವರನ್ನು ತಂಡಕ್ಕೆ ಬರಮಾಡಿಕೊಂಡಿತು. ಈ ಮೂಲಕ ಅವರ ವೃತ್ತಿಜೀವನಕ್ಕೆ ಹೊಸ ಮಾರ್ಗ ಸಿಕ್ಕಿತು. ಅವಕಾಶ ಸಿಕ್ಕಾಗ ಜಿತೇಶ್ ಕೂಡ ತಮ್ಮ ಆಟದಿಂದ ಎಲ್ಲರ ಮನಗೆದ್ದರು.
ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಜಿತೇಶ್ ಅವರಿಗೆ ಅವಕಾಶ ಸಿಕ್ಕಿತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ರಣಜಿಯಿಂದ ಕೈಬಿಟ್ಟ ನಂತರ ಅವರು ಡಿಪ್ರೇಷನ್ ಗೆ ಒಳಪಟ್ಟರು. ತನ್ನ ವೃತ್ತಿಜೀವನ ಮುಗಿದೇ ಹೋಯಿತು ಎಂದು ಅವರು ಭಾವಿಸಿದ್ದರು.
2016 ರಲ್ಲಿ ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಆದರೆ 2018 ರಲ್ಲಿ ಅವರನ್ನು ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿತು. ಅವರಿಗೆ ಚೊಚ್ಚಲ ಅವಕಾಶ ಸಿಗಲಿಲ್ಲ. 2018 ರ ನಂತರ, ಅವರನ್ನು ಯಾವುದೇ ಫ್ರಾಂಚೈಸಿ ಮೂಲ ಬೆಲೆಗೆ ಖರೀದಿಸಲಿಲ್ಲ. ಆದ್ದರಿಂದ ಅವರ ವೃತ್ತಿಜೀವನವು ಮುಗಿಯಿತು ಎಂದು ಭಾವಿಸಿದರು. ಹೀಗಿರುವಾಗ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಅವರನ್ನು 20 ಲಕ್ಷ ಮೂಲ ಬೆಲೆಗೆ ಖರೀದಿಸಿ ಹೊಸ ಹಾದಿ ತೋರಿಸಿದೆ. ಪಂಜಾಬ್ ಕಿಂಗ್ಸ್‌ನಿಂದ ಅವಕಾಶ ಸಿಕ್ಕಾಗ ತನ್ನ ವೃತ್ತಿಜೀವನ ಮುಗಿದಿಲ್ಲ ಎಂದು ಸಾಬೀತುಪಡಿಸಿದರು.

ಆಸ್ಟ್ರೇಲಿಯಾದ ಕ್ರಿಕೆಟಿಗ ಮೈಕಲ್ ಕ್ಲಾರ್ಕ್ ಅವರ ವೈಯಕ್ತಿಕ ಕೋಚ್ ನೀಲ್ ಡಿ ಕೋಸ್ಟಾ ಅವರು ಜಿತೇಶ್ ಗೆ ಅವಕಾಶ ನೀಡಿದ್ದಾರೆ. ಕೋಸ್ಟಾ ನಾಗ್ಪುರದಲ್ಲಿ ವಿದರ್ಭ ಕ್ರಿಕೆಟ್ ಸಂಸ್ಥೆಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದಾಗ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಪ್ರತಿಭಾವಂತರನ್ನು ಆಯ್ಕೆ ಮಾಡುತ್ತಿದ್ದರು. ಅವರಿಗೆ ಜಿತೇಶ್ ಪ್ರತಿಭೆ ಕಣ್ಣಿಗೆ ಬಿದ್ದಿತು.
ಗೋಲ್ಡನ್ ಕಿಡ್ಸ್ ಇಂಗ್ಲಿಷ್ ಹೈಸ್ಕೂಲ್‌ನಲ್ಲಿ ಶಾಲಾ ತಂಡಕ್ಕೆ ಆಡುವಾಗ ಜಿತೇಶ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಮಾಡುತ್ತಿದ್ದರು. ಬೇಕಾದಾಗ ಕೀಪಿಂಗ್ ಕೂಡ ಮಾಡುತ್ತಿದ್ದರು. ನಂತರ ಅವರು ಕೀಪಿಂಗ್ ಮತ್ತು ಬ್ಯಾಟಿಂಗ್‌ನತ್ತ ಗಮನ ಹರಿಸಿದರು ಮತ್ತು ಶಾಲಾ ತಂಡದ ಸಾಮಾನ್ಯ ಕೀಪರ್ ಆದರು. ಈಗ ಇವರು ಐಪಿಎಲ್ ನಲ್ಲಿ ಮಿಂಚಲು ತಯಾರಿ ನಡೆಸಿರುವ ಕ್ರಿಕೆಟ್ ಆಟಗಾರ.