ತಮ್ಮ ವಿಭಿನ್ನ ಶೈಲಿಯ ಬೌಲಿಂಗ್ ನಿಂದ ಎದುರಾಳಿ ಬ್ಯಾಟರ್ ಗಳಿಗೆ ನಡುಕ ಹುಟ್ಟಿಸಿರುವ ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೆಂಗಳೂರಿನ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ವಿಶಿಷ್ಠ ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಜಸ್ಪ್ರೀತ್ ಬುಮ್ರಾ ಎರಡನೇ ಪಂದ್ಯದಲ್ಲಿ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 300 ವಿಕೆಟ್ ಪೂರೈಸಿದಂತಾಗುತ್ತದೆ. ಅವರು ಇದುವರೆಗೆ 155 ಪಂದ್ಯಗಳಲ್ಲಿ 285 ವಿಕೆಟ್ ಪಡೆದಿದ್ದಾರೆ. ಜಸ್ಪ್ರೀತ್ ಅವರು ಎಲ್ಲಾ ಮೂರು ಮಾದರಿಗಳಲ್ಲಿ 300 ವಿಕೆಟ್ ಪಡೆದ ಭಾರತದ 12 ನೇ ಆಟಗಾರರಾಗಿದ್ದಾರೆ.
ಬುಮ್ರಾ 28 ಟೆಸ್ಟ್ ಪಂದ್ಯಗಳಲ್ಲಿ 115 ವಿಕೆಟ್ ಕಬಳಿಸಿದ್ದು, 70 ಏಕದಿನ ಪಂದ್ಯಗಳಲ್ಲಿ 113 ವಿಕೆಟ್ ಪಡೆದಿದ್ದಾರೆ. ಇನ್ನು 57 ಟಿ-20 ಪಂದ್ಯಗಳಲ್ಲಿ 67 ವಿಕೆಟ್ ಪಡೆದು ಮಿಂಚಿದ್ದಾರೆ.
ಇವರಿಗಿಂತ ಮೊದಲು ಅನಿಲ್ ಕುಂಬ್ಳೆ (956), ಹರ್ಭಜನ್ ಸಿಂಗ್ (707), ಕಪಿಲ್ ದೇವ್ (687), ಆರ್ ಅಶ್ವಿನ್ (648), ಜಹೀರ್ ಖಾನ್ (597), ಜಾವಗಲ್ ಶ್ರೀನಾಥ್ (551), ರವೀಂದ್ರ ಜಡೇಜಾ (477), ಇಶಾಂತ್ ಶರ್ಮಾ (434) ಮೊಹಮ್ಮದ್ ಶಮಿ (378), ಅಜಿತ್ ಅಗರ್ಕರ್ (349) ಮತ್ತು ಇರ್ಫಾನ್ ಪಠಾಣ್ 301 ಅಂತರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ 400ನೇ ಅಂತಾರಾಷ್ಟ್ರೀಯ ಪಂದ್ಯ ಇದಾಗಿದೆ. ಟೀಂ ಇಂಡಿಯಾ ಪರ ಎಲ್ಲಾ ಮೂರು ಮಾದರಿಗಳಲ್ಲಿ 400 ಪಂದ್ಯಗಳನ್ನು ಆಡಿದ 8ನೇ ಆಟಗಾರ ರೋಹಿತ್. ಇದುವರೆಗೆ ರೋಹಿತ್ ಶರ್ಮಾ 230 ODI, 125 T-20 ಮತ್ತು 44 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಹಿಸಚಿನ್ ತೆಂಡೂಲ್ಕರ್ (664), ಮಹೇಂದ್ರ ಸಿಂಗ್ ಧೋನಿ (535), ರಾಹುಲ್ ದ್ರಾವಿಡ್ (505), ವಿರಾಟ್ ಕೊಹ್ಲಿ (457), ಮೊಹಮ್ಮದ್ ಅಜರುದ್ದೀನ್ (433), ಸೌರವ್ ಗಂಗೂಲಿ (421) ಮತ್ತು ಅನಿಲ್ ಕುಂಬ್ಳೆ (401) 400 ಕ್ಕೂ ಹೆಚ್ಚು ಅಂತಾರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.