Jasprit Bumrah – ಮಹತ್ವದ ಪಂದ್ಯದಿಂದ ಬೂಮ್ರಾ ಕೈ ಬಿಡಲು ಕಾರಣ..?

ಜಸ್ಪ್ರಿತ್ ಬೂಮ್ರಾ… ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್. ಆದ್ರೆ ಇಂಗ್ಲೆಂಡ್ ವಿರುದ್ದದ ಮೂರನೇ ಏಕದಿನ ಪಂದ್ಯದಿಂದ ಜಸ್ಪ್ರಿತ್ ಬೂಮ್ರಾ ಹೊರಗುಳಿದಿದ್ದಾರೆ.
ಅದರಲ್ಲೂ ಮಹತ್ವದಿಂದ ಪಂದ್ಯದಿಂದ ಜಸ್ಪ್ರಿತ್ ಬೂಮ್ರಾ ಅವರನ್ನು ಕೈಬಿಡಲು ಕಾರಣ ಏನು ? ಮತ್ತೆ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್‍ಮೆಂಟ್ ಪ್ರಯೋಗಕ್ಕೆ ಮುಂದಾಯ್ತಾ ಅನ್ನೋ ಪ್ರಶ್ನೆಗಳು ಎದುರಾಗಬಹುದು.
ಆದ್ರೆ ಕಾರಣ ಬೇರೆ ಇದೆ. ಜಸ್ಪ್ರಿತ್ ಬೂಮ್ರಾ ಅವರು ಬೆನ್ನು ಸೆಳೆತದಿಂದ ಬಳಲುತ್ತಿದ್ದಾರೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಆಡುತ್ತಿಲ್ಲ. ಜಸ್ಪ್ರಿತ್ ಬೂಮ್ರಾ ವಿಚಾರದಲ್ಲಿ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿಲ್ಲ.

ಹೀಗಾಗಿ ಜಸ್ಪ್ರಿತ್ ಬೂಮ್ರಾ ಅಂತಿಮ ಪಂದ್ಯದಿಂದ ಹೊರಗುಳಿದಿದ್ದಾರೆ.
ಇನ್ನು ಜಸ್ಪ್ರಿತ್ ಬೂಮ್ರಾ ಬದಲು ವೇಗಿ ಮಹಮ್ಮದ್ ಸಿರಾಜ್ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸೀರಾಜ್ ಅವರು ಜಾನಿ ಬೇರ್ ಸ್ಟೋವ್ ಮತ್ತು ಜಾಯ್ ರೂಟ್ ಅವರನ್ನು ಶೂನ್ಯ ಸುತ್ತುವಂತೆ ಮಾಡಿದ್ದಾರೆ. ಅಲ್ಲದೆ ತನ್ನ ಆಯ್ಕೆಯನ್ನು ಕೂಡ ಸಮರ್ಥನೆ ಮಾಡಿಕೊಂಡಿದ್ದಾರೆ.
ಇನ್ನೊಂದೆಡೆ ಯುವ ವೇಗಿ ಆರ್ಶಾದೀಪ್ ಸಿಂಗ್ ಕೂಡ ಫುಲ್ ಫಿಟ್ ಆಗಿಲ್ಲ. ಒಂದು ವೇಳೆ ಆರ್ಶಾದೀಪ್ ಸಿಂಗ್ ಫಿಟ್ ಆಗಿರುತ್ತದ್ರೆ, ಸಿರಾಜ್ ಗೆ ಅವಕಾಶ ಸಿಗುತ್ತಿರಲಿಲ್ಲ.
ಇನ್ನು ಇಂಗ್ಲೆಂಡ್ ಪ್ರವಾಸದಲ್ಲಿ ಜಸ್ಪ್ರಿತ್ ಬೂಮ್ರಾ ಅದ್ಭುತ ಪ್ರದರ್ಶನವನ್ನು ನೀಡಿದ್ದರು. ಟೆಸ್ಟ್, ಟಿ-20 ಹಾಗೂ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ ಮೊದಲ ಏಕದಿನ ಪಂದ್ಯದಲ್ಲಿ ಬೂಮ್ರಾ ಅವರು 19ಕ್ಕೆ 4 ವಿಕೆಟ್ ಉರುಳಿಸಿದ್ದರು.
ಇನ್ನೊಂದೆಡೆ ಜಸ್ಪ್ರಿತ್ ಬೂಮ್ರಾ ಅವರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿದೆ.