
ಯೂಸೂಫ್ ಜೊತೆ ಕಿತ್ತಾಟ ಸಂಬಂಧ ಇಂಡಿಯಾ ಕ್ಯಾಪಿಟಲ್ಸ್ ವೇಗಿ ಮಿಚೆಲ್ ಜಾನ್ಸನ್ ಎಚ್ಚರಿಕೆ ಜೊತೆಗೆ ಶೇ.50ರಷ್ಟು ದಂಡವನ್ನು ವಿಧಿಸಲಾಗಿದೆ.
ಸೋಮವಾರ ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಭಿಲ್ವಾರಾ ಕಿಂಗ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ನಡುವೆ ಕ್ವಾಲಿಫೈಯರ್ ಪಂದ್ಯ ನಡೆದಿತ್ತು. ಪಂದ್ಯದ ವೇಳೆ ಭಿಲ್ವಾರಾ ಕಿಂಗ್ಸ್ ತಂಡದ ಯೂಸೂಫ್ ಪಠಾಣ್ ಜೊತೆ ಇಂಡಿಯಾ ಕ್ಯಾಪಿಟಲ್ಸ್ ವೇಗಿ ಮಿಚೆಲ್ ಜಾನ್ಸನ್ ನೂಕಾಟ ತಳ್ಳಾಟದವರೆಗೂ ಹೋಗಿತ್ತು.
ಜಾನ್ಸನ್ ಎಸೆತದಲ್ಲಿ ಯೂಸುಫ್ 2 ಸಿಕ್ಸರ್ 1 ಬೌಂಡರಿ ಹೊಡೆದಿದ್ದರು.ಇದರಿಂದ ಕೆರೆಳಿದ ಜಾನ್ಸನ್ ವಿಕೆಟ್ ಪಡೆಯುತ್ತಿದ್ದಂತೆ ಆಕ್ರೋಶ ಹೊರ ಹಾಕಿದರು. ಯೂಸುಫ್ ಕೋಪದಿಂದ ಜಾನ್ಸನ್ ಬಳಿ ಬಂದರು.ಯೂಸುಫ್ ಅವರನ್ನು ಜಾನ್ಸನ್ ತಳ್ಳಿದರು. ಜಗಳ ವಿಕೋಪಕ್ಕೆ ತಿರುಗಿತು. ಮಧ್ಯಪ್ರವೇಶಿಸಿದ ಅಂಪೈಯರ್ಗಳು ತಿಳಿಗೊಳಿಸಿದರು.

ಪ್ರಕರಣದ ತನಿಖೆ ನಡೆಸಿದ ಶಿಸ್ತು ಸಮಿತಿಯ ಮುಖ್ಯಸ್ಥ ರವಿ ಶಾಸ್ತ್ರಿ ಜಾನ್ಸನ್ಗೆ ಶಿಕ್ಷೆ ನೀಡಲು ಸೂಚಿಸಿದರು ಜೊತೆಗೆ ಎಚ್ಚರಿಕೆಯನ್ನು ನೀಡಿದರು.
ಎಲಿಮಿನೇಟರ್ ನಲ್ಲಿ ಭಿಲ್ವಾರಾ ಕಿಂಗ್ಸ್ ಮತ್ತು ಗುಜರತ್ ಜೈಂಟ್ಸ್ ತಂಡಗಳು ಫೈನಲ್ ಪ್ರವೇಶಕ್ಕಾಗಿ ಕಾದಾಟ ನಡೆಸಲಿವೆ. ಎಲಿಮಿನೇಟರ್ ಪಂದ್ಯ ಜೋಧಪುರದ ಬರ್ಕತ್ ಹುಲ್ಲಾ ಮೈದಾನದಲ್ಲಿ ನಡೆಯಲಿದೆ. ಇಂಡಿಯಾ ಕ್ಯಾಪಿಟಲ್ಸ್ ತಂಡ ಈಗಾಗಲೇ ಫೈನಲ್ ತಲುಪಿದೆ.