ಫಿಫಾ ವಿಶ್ವಕಪ್‍ನಲ್ಲಿ ಜಪಾನ್ ತಂಡ ಎರಡನೆ ಅಚ್ಚರಿ ಫಲಿತಾಂಶ ಕೊಟ್ಟಿದೆ. 2010ರ ಚಾಂಪಿಯನ್ ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ನಾಕೌಟ್ ಹಂತಕ್ಕೆ ಲಗ್ಗೆ ಹಾಕಿತು.
ಟೂರ್ನಿಯ ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ ಜಪಾನ್ 2-1 ಗೋಲುಗಳಿಂದ ಗೆದ್ದು ಆಘಾತ ನೀಡಿದ್ದ ಜಪಾನ್ ಬಲಿಷ್ಠ ಸ್ಪೇನ್ ತಂಡಕ್ಕೂ ಸೋಲಿನ ರುಚಿ ತೋರಿಸಿತು.
ಪಂದ್ಯದ 11ನೇ ನಿಮಿಷದಲ್ಲಿ ಸ್ಪೇನ್ ತಂಡದ ಅಲ್ವರೊ ಮೊರಾಟಾ ಗೋಲು ಹೊಡೆದು ತಂಡಕ್ಕೆ ಮುನ್ನಡೆ ನೀಡಿದರು. ಅಲ್ವರೊ ಮೊರಾಟಾ ತಲೆ ಸಹಾಯದಿಂದ ಆಕರ್ಷಕವಾಗಿ ಗೋಲು ಹೊಡೆದರು. ಮೊದಲಾರ್ಧದಲ್ಲಿ ಸ್ಪೇನ್ ಚೆಂಡಿನ ಮೇಲೆ ನಿಯಂತ್ರಣ ಸಾಸಿತ್ತು.
ಎರಡನೆ ಅವಯಲ್ಲಿ ಜಪಾನ್ ಆಟಗಾರರನ್ನು ಬದಲಿಸಿ ದಾಳಿಗಿಳಿಯಿತು.48ನೇ ನಿಮಿಷದಲ್ಲಿ ಬದಲಿ ಆಟಗಾರ ರಿತ್ಸು ಡೋನ್ ಆಕರ್ಷಕವಾಗಿ ಗೋಲು ಹೊಡೆದರು. ಸ್ಪೇನ್ ಗೋಲ್ ಕೀಪರ್ ಉನಾಯಿ ಸಿಮನ್ ಅಪಾಯವನ್ನು ಅರಿಯುವಲ್ಲಿ ವಿಫಲರಾದರು.
ಈ ಆಘಾತದಿಂದ ಸ್ಪೇನ್ ಚೇತರಿಸಿಕೊಳ್ಳುತ್ತಿರುವಾಗಲೇ ಆಹೊ ತಾನಾಕಾ ಗೋಲು ಹೊಡೆದು ಸ್ಪೇನ್‍ಗೆ ಮತ್ತೆ ಆಘಾತ ನೀಡಿದರು.
ಈ ಪಂದ್ಯದಲ್ಲಿ ಸ್ಪೇನ್ ಸೋತರೂ ನಾಕೌಟ್ ಪ್ರವೇಶಿಸಿದೆ. ಸ್ಪೇನ್ ತಂಡ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆಯಿತು. ನಾಕೌಟ್‍ನಲ್ಲಿ ಮೊರೊಕ್ಕೊ ತಂಡವನ್ನು ಎದುರಿಸಲಿದೆ. ಜಪಾನ್ ನಾಕೌಟ್‍ನಲ್ಲಿ ಕ್ರೋವೇಷಿಯಾ ತಂಡವನ್ನು ಎದುರಿಸಲಿದೆ.

ವಿವಾದದಲ್ಲಿ ಸಿಲುಕಿದ ಎರಡನೆ ಗೋಲು
ಜಪಾನ್ ತಂಡ ಹೊಡೆದ ಎರಡನೆ ಗೋಲು ವಿವಾದದಲ್ಲಿ ಸಿಲುಕಿದೆ. ಸ್ಪೇನ್ ಗೋಲ್ ಪೋಸ್ಟ್ ಬಳಿ ಕಾರು ಮಿಟೊಮಾ ಚೆಂಡನ್ನು ಆಹೊ ತನಾಕಾಗೆ ಪಾಸ್ ಮಾಡುವಾಗ ಚೆಂಡು ಗೆರೆ ದಾಟಿತ್ತು.
ವಿಆರ್‍ಆರ್(ವಿಡಿಯೋ ಅಸಿಸ್ಟೆಂಟ್ ರೆಫರಿ) ಮೂಲಕ ಕೆಲ ನಿಮಿಷಗಳ ಕಾಲ ಹುಡುಕಾಟ ನಡೆಸಿದಾಗ ತೀರ್ಪು ಜಪಾನ್ ಪರವಾಗಿ ಬಂತು. ಗೋಲ್ ಲೈನ್ ಕ್ಯಾಮರಗಳಿಂದ ನೋಡಿದಾಗ ಚೆಂಡು ಗೆರೆ ದಾಟಿರುವುದು ಸ್ಪಷ್ಟವಾಗಿತ್ತು. ಈ ಒಂದು ಯಡವಟ್ಟು ಜರ್ಮನಿ ಟೂರ್ನಿಯಿಂದ ಹೊರ ನಡೆಯುವಂತಾಯತು. ಈ ಬಗ್ಗೆ ಜರ್ಮನಿ ಫಿಫಾ ಮಂಡಳಿ ದೂರು ನೀಡಿದೆ.