ಇಂದಿನಿಂದ ಫಿಫಾ ವಿಶ್ವಕಪ್ ಫುಟ್ಬಾಲ್‍ನಲ್ಲಿ ನಾಕೌಟ್ ಹಂತ ಆರಂಭವಾಗಲಿದೆ. ಇಲ್ಲಿ ಗೆಲ್ಲುವ ತಂಡಗಳು ಕಾರ್ಟರ್ ಫೈನಲ್ಗೆ ಅರ್ಹತೆ ಪಡೆಯಲಿವೆ.
ಗುಂಪಿನ ಅಗ್ರ ಎರಡು ತಂಡಗಳು ನಾಕೌಟ್‍ಗೆ ಅರ್ಹತೆ ಪಡೆದಿರುತ್ತವೆ. ಈ ಹಂತದ ಪಂದ್ಯಗಳು ಎಲ್ಲಾ ತಂಡಗಳಿಗೂ ಡು ಆರ್ ಡೈ ಪಂದ್ಯವಾಗಿರುತ್ತದೆ.
ಈ ಹಂತದಲ್ಲಿ ನಿಗದಿತ ಸಮಯದಲ್ಲಿ ಪಂದ್ಯ ಟೈ ಆದರೆ ಹೆಚ್ಚುವರಿ 15 ನಿಮಿಷ ನೀಡಲಾಗುತ್ತದೆ. ಮತ್ತೆ ಕೂಡ ಟೈ ಆದಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ ಪಂದ್ಯವನ್ನು ನಿರ್ಧರಿಸಲಾಗುತ್ತದೆ.
ಯುಎಸ್‍ಗೆ ನೆದರ್‍ಲೆಂಡ್ ಕಾದಾಟ
ಮೊದಲ ನಾಕೌಟ್ ಪಂದ್ಯದಲ್ಲಿ ಯುಎಸ್ ಹಾಗೂ ನೆದರ್‍ಲೆಂಡ್ ತಂಡಗಳು ಸೆಣಸಲಿವೆ. ಕತಾರ್ ವಿರುದ್ಧ ಗೆದ್ದು ಪ್ರಿ ಕ್ವಾರ್ಟರ್‍ಗೆ ಅರ್ಹತೆ ಪಡೆದಿರುವ ನೆದರ್‍ಲೆಂಡ್ 2014ರ ನಂತರ ಇದೇ ಮೊದಲ ಬಾರಿಗೆ ಕ್ವಾರ್ಟರ್ ಕನಸು ಕಾಣುತ್ತಿದೆ. ಇರಾನ್ ವಿರುದ್ಧ ಗೆದ್ದು ಪ್ರಿಕ್ವಾರ್ಟರ್‍ಗೆ ಅರ್ಹತೆ ಪಡೆದಿರುವ ಯುಎಸ್ ಕ್ವಾರ್ಟರ್‍ಗೆ ಅರ್ಹತೆ ಪಡೆಯಲು ಹೋರಾಡಲಿದೆ. 2002ರಲ್ಲಿ ಕೊನೆಯ ಬಾರಿಗೆ ಕ್ವಾರ್ಟರ್‍ಗೆ ಅರ್ಹತೆ ಪಡೆದಿತ್ತು.
ಅರ್ಜೆಂಟಿನಾಗೆ ಆಸ್ಟ್ರೇಲಿಯಾ ಎದುರಾಳಿ
ಎರಡನೆ ನಾಕೌಟ್ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟಿನಾ ತಂಡ ಪೋಲೆಂಡ್ ತಂಡವನ್ನು ಸೋಲಿಸಿತು. 2014ರಲ್ಲಿ ಕೊನೆಯ ಬಾರಿಗೆ ಅರ್ಜೆಂಟಿನಾ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.ಟ್ಯುನೀಶಿಯಾ, ಡೆನ್‍ಮಾರ್ಕ್ ವಿರುದ್ಧ ಗೆದ್ದು ಬಂದಿರುವ ಆಸ್ಟ್ರೇಲಿಯಾ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಕನಸು ಕಾಣುತ್ತಿದೆ. ಅರ್ಜೆಂಟಿನಾ ವಿರುದ್ಧ ಕಠಿಣ ಸವಾಲು ಎದುರಿಸಲಿದೆ.