Japan Open Super 750 tournament – ಸೈನಾ, ಲಕ್ಷ್ಯ ಸೇನ್ ಗೆ ಸೋಲು
ಜಪಾನ್ ಓಪನ್ ಸೂಪರ್ 750 ಟೂರ್ನಿಯಲ್ಲಿ ಭಾರತದ ಬ್ಯಾಡ್ಮಿಂಟನ್ ಸ್ಪರ್ಧಿಗಳು ನಿರಾಸೆ ಅನುಭವಿಸಿದ್ದಾರೆ.
ಭಾರತದ ಸೈನಾ ನೆಹ್ವಾಲ್ ಅವರು ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ್ದಾರೆ. ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ ನೆಹ್ವಾಲ್ ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ. ಜಪಾನ್ ಓಪನ್ ನಲ್ಲಿ ಸೈನಾ ನೆಹ್ವಾಲ್ 9-21, 17-21ರಿಂದ ಆಕಾನೆ ಎಮಗುಚಿ ಅವರಿಗೆ ನಕೇವಲ 30 ನಿಮಿಷಗಳ ಹೋರಾಟದಲ್ಲಿ ತಲೆಬಾಗಿದ್ದಾರೆ.
ಇನ್ನು ಬರ್ಮಿಂಗ್ ಹ್ಯಾಮ್ ನಲ್ಲಿ ಪದಕ ಗೆದ್ದಿದ್ದ ಲಕ್ಷ್ಯ ಸೇನ್ ಅವರು 18-22, 14-23ರಿಂದ 37ನಿಮಿಷಗಳ ಹೋರಾಟದಲ್ಲಿ ಜಪಾನ್ ನ ಕೆಂಟಾ ನಿಶಿಮೊಟಾ ವಿರುದ್ಧ ಸೋಲು ಅನುಭವಿಸಿದ್ದಾರೆ.
ಇನ್ನು ಪುರುಷರ ಡಬಲ್ಸ್ ನಲ್ಲಿ ಧ್ರುವ ಕಪಿಲಾ , ಗಾಯತ್ರಿ ಗೋಪಿಚಂದ್ ಮತ್ತು ತ್ರಿಶಾ ಜೋಲಿ ಕೂಡ ನಿರಾಸೆ ಅನುಭವಿಸಿದ್ದಾರೆ. ಅಲ್ಲದೆ ಮಿಕ್ಸೆಡ್ ಡಬಲ್ಸ್ ನಲ್ಲಿ ಜೂಹಿ ದೇವಂಗನ್ ಮತ್ತು ವೆಂಕಟ್ ಗೌರವ್ ಕೂಡ ಮೊದಲ ಸುತ್ತಿನಲ್ಲೇ ಪರಾಭವಗೊಂಡಿದ್ದಾರೆ.