Japan Open 2022 – ಪ್ರಶಸ್ತಿ ಗೆದ್ದ ನಿಶಿಮೊಟೊ, ಆಕಾನೆ ಯಮಗುಚಿ
ಜಪಾನ್ ನ ಕೆಂಟಾ ನಿಶಿಮೊಟೊ ಮತ್ತು ಆಕಾನೆ ಯಮಗುಚಿ ಅವರು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ಪುರುಷರ ಫೈನಲ್ ನಲ್ಲಿ ಜಪಾನ್ ನ ಕೆಂಟಾ ನಿಶಿಮೊಟೊ ಅವರು 21-19, 21-23, 21-17ರಿಂದ ಥೈವಾನ್ ನ ಚೌ ಟಿಯನ್ ಚೆನ್ ಅವರನ್ನು ಪರಾಭವಗೊಳಿಸಿದ್ರು. ವಿಶ್ವದ 21ನೇ ಶ್ರೇಯಾಂಕಿತ ಕೆಂಟಾ ನಿಶಿಮೊಟೊ ಅವರು ಇದೇ ಮೊದಲ ಬಾರಿ ಚೊಚ್ಚಲ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ಹಿಂದೆ ಆರು ಬಾರಿ ಫೈನಲ್ ಪ್ರವೇಶಿಸಿದ್ರೂ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದರು. Japan Open 2022 – Kenta Nishimoto , sports karantaka, japan open 2022, Akane Yamaguchi, Dechapol Puavaranukroh and Sapsiree Taerattanachai, Liang Weikeng and Wang Chan, Jeong Na-eun and Kim Hye-jeong
ಇನ್ನು ಮಹಿಳೆಯರ ಸಿಂಗಲ್ಸ್ ನಲ್ಲಿ ಜಪಾನ್ ನ ಆಕಾನೆ ಯಮಗುಚಿ ಅವರು 21-9, 21-15ರಿಂದ ದಕ್ಷಿಣ ಕೊರಿಯಾದ ಆನ್ ಸೆ ಯಂಗ್ ಅವರನ್ನು ಸುಲಭವಾಗಿ ಮಣಿಸಿದ್ರು. ಈ ಮೂಲಕ ಹಾಲಿ ಚಾಂಪಿಯ್ ಆಗಿದ್ದ ಯಮಗುಚಿ ಅವರು ಜಪಾನ್ ಓಪನ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ್ರು.
ಮಹಿಳೆಯರ ಡಬಲ್ಸ್ ನಲ್ಲಿ ದಕ್ಷಿಣ ಕೊರಿಯಾದ ಜಿಯಾಂಗ್ ನಾ ಯುನ್ ಮತ್ತು ಕಿಮ್ ಹೇಯ್ ಜೆಂಗ್ ಹಾಗೂ ಪುರುಷರಡ ಡಬಲ್ಸ್ ನಲ್ಲಿ ಚೀನಾದ ಲಿಯಾಂಗ್ ವೆಲ್ಕೆಂಗ್ ಮತ್ತು ವಾಂಗ್ ಚಾನ್ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮಿಕ್ಸೆಡ್ ಡಬಲ್ಸ್ ನಲ್ಲಿ ಥಾಯ್ಲೆಂಡ್ ನ ಡೆಚಾಪೊಲ್ ಮತ್ತು ಸಪ್ಸಿರ್ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
,