ಐಪಿಎಲ್ ಸಿಗುವ ಹಣದ ಮೊತ್ತವನ್ನು ಕೇಳಿಯೇ ಹಲವು ದೇಶದ ಕ್ರಿಕೆಟಿಗರು ಹೌಹಾರುತಾರೆ. ಕೆಲ ದೇಶಗಳ ಆಟಗಾರು ಓಮದೆರಡು ಸೀಸನ್ ಐಪಿಎಲ್ ಆಡಿದರೆ ಸಾಕು ಲೈಫ್ ಸೆಟ್ಲ್ ಅಂದುಕೊಳ್ಳುತ್ತಾರೆ. ಇನ್ನು ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತ ವಿಶ್ವಕಪ್‌ಗಿಂತಲೂ ಹೆಚ್ಚು. ಆದರೆ ಯುಎಸ್ ಓಪನ್‌ನಲ್ಲಿ (US Open) ಸಿಂಗಲ್ಸ್ ಗೆಲ್ಲುವ ಪುರುಷ ಆಟಗಾರ ಐಪಿಎಲ್ (IPL) ತಂಡ ಗೆಲ್ಲುವ ಹಣಕ್ಕಿಂತ ಹೆಚ್ಚು ದುಡ್ಡು ಸಂಪಾದಿಸುತ್ತಾನೆ.
ಯಸ್ ಈ ಬಾರಿಯ ಐಪಿಎಲ್ ಚಾಂಪಿಯನ್ (IPL Champion) ಗುಜರಾತ್ ಟೈಟಾನ್ಸ್ (Gujrat Titan) 20 ಕೋಟಿ ರೂಪಾಯಿ ಬಹುಮಾನ ಪಡೆದಿತ್ತು. ಇದು ಐಪಿಎಲ್‌ನಲ್ಲಿ ಇಲ್ಲಿ ತನಕದ ಗರಿಷ್ಠ. ಪಂದ್ಯ ಸಂಭಾವನೆ, ಅದು-ಇದು ಅಂತ ಎಲ್ಲಾ ಸೇರಿದರೂ ಒಂದು ಸೀಸನ್‌ನಲ್ಲಿ ಒಬ್ಬ ಆಟಗಾರ 20 ರಿಂದ 22 ಕೋಟಿ ಸಂಪಾದನೆ ಮಾಡಬಹುದು. ಆದರೆ ಟೆನಿಸ್‌ನಲ್ಲಿ ಹಾಗಲ್ಲ. ಯು.ಎಸ್. ಓಪನ್, ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಹಾಗೂ ಫ್ರೆಂಚ್ ಓಪನ್ ಅನ್ನು ಒಂದೊಂದು ಬಾರಿ ಗೆದ್ರೂ ನೂರಾರು ಕೋಟಿ ಒಡೆಯರಾಗುತ್ತಾರೆ.
ಈ ಬಾರಿಯ ಯುಎಸ್ ಓಪನ್‌ಗೆ ಲೆಕ್ಕಚಾರ ಶುರುವಾಗಿದೆ. ಬಹುಮಾನ ಮೊತ್ತವನ್ನು (Prize Money) ಕೂಡ ಯುಎಸ್ ಟೆನಿಸ್ ಫೆಡರೇಷನ್ ಘೋಷಿಸಿದೆ. ಸಿಂಗಲ್ಸ್ ಗೆಲ್ಲುವ ಆಟಗಾರ ಈ ಬಾರಿ 26 ಮಿಲಿಯನ್ ಡಾಲರ್ ಅಂದರೆ 70.73 ಕೋಟಿ ರೂಪಾಯಿ ಪಡೆಯಯುತ್ತಾರೆ. ಪ್ರಧಾನಿ ಸುತ್ತಿಗೆ ಪ್ರವೇಶಿಸಿದ ಆಟಗಾರ ಪ್ರತಿ ಪಂದ್ಯಕ್ಕೆ 80,000 ಡಾಲರ್ ಪಡೆಯಲಿದ್ದಾರೆ. 2ನೇ ಸುತ್ತು ತಲುಪಿದ ಆಟಗಾರನಿಗೆ 1.21 ಮಿಲಿಯನ್ ಡಾಲರ್ ದುಡ್ಡು ಸಿಗಲಿದೆ. ಕ್ವಾರ್ಟರ್ ಫೈನಲ್ ಆಡಿದರೆ 445,000 ಡಾಲರ್, ಸೆಮಿಫೈನಲ್ ಆಡುವವರು 705,000 ಡಾಲರ್ ಪಡೆಯುತ್ತಾರೆ. ರನ್ನರ್ ಅಪ್ಗೆ 1.3 ಮಿಲಿಯನ್ ಡಾಲರ್ ಸಿಗಲಿದೆ.
ಈ ಬಾರಿಯ ಯುಎಸ್ ಓಪನ್ ಆಗಸ್ಟ್ 29ರಿಂದ ಆರಂಭವಾಗಲಿದೆ. ಈಗ ಹೇಳಿ ಕ್ರಿಕೆಟ್ ಆಟಗಾರರ ಸಂಪಾದನೆ ದೊಡ್ಡದೋ, ಅಥವಾ ಟೆನಿಸ್ ಆಟಗಾರರ ಸಂಪಾದನೆ ದೊಡ್ಡದು. ಆಯ್ಕೆ ನಿಮಗೆ ಬಿಟ್ಟಿದ್ದು.