ಟೂರ್ನಿಯಲ್ಲಿ ತಾರಾ ಆಟಗಾರರಾದ ಲಿಯೊನೆಲ್ ಮೆಸ್ಸಿ ಹಾಗೂ ಫ್ರಾನ್ಸ್ನ ಎಂಬಾಪೆ ಗೋಲ್ಡನ್ ಬೂಟ್ (ಹೆಚ್ಚು ಗೋಲು ಹೊಡೆಯುವ ಆಟಗಾರನಿಗೆ ಸಿಗುವ ಬಹುಮಾನ) ಟ್ರೋಫಿಗೆ ಪೈಪೋಟಿ ನಡೆಸಲಿದ್ದಾರೆ.
ಮೆಸ್ಸಿ ಹಾಗೂ ಎಂಬಾಪೆ ಟೂರ್ನಿಯಲ್ಲಿ ತಲಾ 5 ಗೋಲುಗಳನ್ನು ಹೊಡೆದಿದ್ದಾರೆ.
23 ವರ್ಷದ ಎಂಬಾಪೆ 2 ವಿಶ್ವಕಪ್ ಗೆದ್ದ ಆಟಗಾರ ಎನಿಸಿಕೊಳ್ಳಲು ಆಡಲಿದ್ದಾರೆ.
35 ವರ್ಷದ ಲಿಯೊನೆಲ್ ಮೆಸ್ಸಿ 2014ರಲ್ಲಿ ಕೈತಪ್ಪಿದ್ದ ವಿಶ್ವಕಪ್ ಅನ್ನು ಈ ಬಾರಿ ವಿಶ್ವಕಪ್ ತಂದುಕೊಡಲು ಹೋರಾಡಲಿದ್ದಾರೆ.