ಕಳೆದ ಕೆಲವು ತಿಂಗಳುಗಳಲ್ಲಿ ಭಾರತೀಯ ಕ್ರಿಕೆಟ್ ಬಹಳಷ್ಟು ಏರಿಳಿತ ಕಂಡಿದೆ. ಟಿ-20 ವಿಶ್ವಕಪ್‌ಗೆ ಮುನ್ನ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯುವ ಘೋಷಣೆಯೊಂದಿಗೆ ಇದು ಪ್ರಾರಂಭವಾಯಿತು.
ಬಿಸಿಸಿಐ ಇಚ್ಛೆಗೆ ವಿರುದ್ಧವಾಗಿ ಕೊಹ್ಲಿ ಈ ನಿರ್ಧಾರವನ್ನು ತೆಗೆದುಕೊಂಡರು, ನಂತರ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲಾಯಿತು. ಕೊನೆಯದಾಗಿ ಅವರು ಟೆಸ್ಟ್ ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದರು. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ ಜೋಡಿಯು ಹೊಸ ಯುಗಕ್ಕೆ ನಾಂದಿ ಹಾಡಲಿದೆ.
ವಿರಾಟ್ ಮೂರು ಫಾರ್ಮ್ಯಾಟ್‌ಗಳಲ್ಲಿ ಬ್ಯಾಟ್ಸ್‌ಮನ್ ಆಗಿ ಮಾತ್ರ ತಂಡದಲ್ಲಿ ಆಡಲಿದ್ದಾರೆ. ಏಕದಿನ ಮತ್ತು ಟಿ-20 ನಾಯಕತ್ವ ರೋಹಿತ್ ಕೈಯಲ್ಲಿದ್ದು, ಟೆಸ್ಟ್ ನಾಯಕನ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳ ಬೇಕಿದೆ. ಕೋಚ್ ದ್ರಾವಿಡ್ ಮತ್ತು ನಾಯಕ ರೋಹಿತ್ ಅವರಿಗೆ ಬಿಸಿಸಿಐನಿಂದ ಸಂಪೂರ್ಣ ಬೆಂಬಲವಿದೆ ಎಂದು ಭಾರತದ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ಬೋರಿಯಾ ಮಜುಂದಾರ್ ಅವರೊಂದಿಗೆ ಮಾತನಾಡಿದ ಮಾಸ್ಟರ್ ಬ್ಲಾಸ್ಟರ್, ರೋಹಿತ್ ಮತ್ತು ರಾಹುಲ್ ಇಬ್ಬರೂ ಅದ್ಭುತವಾಗಿದ್ದಾರೆ ಮತ್ತು ತಂಡವು ಇವರ ಮುಂದಾಳತ್ವದಲ್ಲಿ ಯಶಸ್ಸು ಕಾಣಸಲಿದೆ ಎಂದಿದ್ದಾರೆ.
ರೋಹಿತ್ ಮತ್ತು ರಾಹುಲ್ ಜೋಡಿ ಅದ್ಭುತವಾಗಿದೆ ಎಂದು ಸಚಿನ್ ಹೇಳಿದ್ದಾರೆ. ಅವರಿಬ್ಬರೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ. ನಿಮ್ಮ ಬೆಂಬಲಕ್ಕೆ ಸಾಕಷ್ಟು ಜನರು ನಿಂತಿದ್ದಾರೆ” ಎಂದು ಸಚಿನ್ ತಿಳಿಸಿದ್ದಾರೆ.
ಎಲ್ಲರೂ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ, ರಾಹುಲ್ ಅವರು ಸಾಕಷ್ಟು ಕ್ರಿಕೆಟ್ ಆಡಿದ್ದಾರೆ ಮತ್ತು ಕ್ರೀಡೆಯ ಪ್ರಯಾಣದಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದಾರೆ ಎಂಬ ಅಂಶವನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಸಾಧಿಸುವ ಮೂಲಕ ಭರವಸೆಯನ್ನು ಕಳೆದುಕೊಳ್ಳಬೇಡಿ. ನಾವು ಸತತ ಪ್ರಯತ್ನಿಸುತ್ತಲೇ ಇರಬೇಕು ಮತ್ತು ನಾವು ಹೀಗೆಯೇ ಮುಂದುವರಿಯುತ್ತೇವೆ” ಎಂದು ದಿಗ್ಗಜ ಕ್ರಿಕೆಟಿಗ ಹೇಳಿದ್ದಾರೆ.