ಪ್ರತಿಷ್ಠಿತ ಇಂಡಿಯನ್ ಸೂಪರ್ ಲೀಗ್ನಲ್ಲಿ ಎಟಿಕೆ ಮೋಹನ್ ಬಗನ್ ತಂಡ ಫೈನಲ್ ತಲುಪಿದೆ. ಮಾ.18ರಂದು ನಡೆಯುವ ಫೈನಲ್ ಕದನದಲ್ಲಿ ಬೆಂಗಳೂರು ಎಫ್ಸಿ ತಂಡವನ್ನು ಎದುರಿಸಲಿದೆ.
ಹಾಲಿ ಚಾಂಪಿಯನ್ ಹೈದ್ರಾಬಾದ್ ಎಫ್ಸಿ ವಿರುದ್ಧದ ಸೆಮಿಫೈನಲ್ 2ನೇ ಚರಣದ ಪಂದ್ಯದಲ್ಲಿ ಎಟಿಕೆ ಪೆನಾಲ್ಟಿ ಶೂಟೌಟ್ನಲ್ಲಿ 4-3 ಗೋಲುಗಳಲ್ಲಿ ಗೆಲುವು ದಾಖಲಿಸಿತು.
ಮೊದಲ ಸೆಮಿಫೈನಲ್ ಚರಣದಲ್ಲಿ ಮೋಹನ್ ಬಗನ್ ಮತ್ತು ಹೈದ್ರಾಬಾದ್ ತಂಡಗಳು ಡ್ರಾ ಮಾಡಿಕೊಂಡಿದ್ದವು. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಹೋಗುತ್ತದೆ ಎಂದು ನಿರ್ಧರಿಸಲಾಗಿತ್ತು. ಎರಡನೆ ಚರಣದ ಪಂದ್ಯದಲ್ಲಿ 120 ನಿಮಿಷದಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ. ಶೂಟೌಟ್ ಮೊರೆ ಹೋದಾಗ ಮೋಹನ್ ಬಗನ್ ತಂಡ 4, ಹೈದ್ರಾಬಾದ್ 3 ಗೋಲುಗಳನ್ನು ಗಳಿಸಿದವು.