ಲಿಟನ್ ದಾಸ್(73) ಹಾಗೂ ಶ್ಯಾಂಟೋ(47*) ಭರ್ಜರಿ ಬ್ಯಾಟಿಂಗ್ ಮತ್ತು ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 3ನೇ T20Iನಲ್ಲಿ ಬಾಂಗ್ಲಾದೇಶ 16 ರನ್‌ಗಳ ಗೆಲುವು ಸಾಧಿಸುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾದೇಶ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 158 ರನ್‌ಗಳಿಸಿತು. ಈ ಸವಾಲು ಬೆನ್ನತ್ತಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 142 ರನ್‌ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾ ಪರ ಲಿಟನ್ ದಾಸ್(73) ಹಾಗೂ ಶ್ಯಾಂಟೋ(47*) ರನ್‌ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾಕ್ಕೆ ಲಿಟನ್ ದಾಸ್(73) ಹಾಗೂ ರೋನಿ ತಲ್ದೂಕ್ದಾರ್(24) ಮೊದಲ ವಿಕೆಟ್‌ಗೆ 55 ರನ್‌ಗಳಿಸಿ ಉತ್ತಮ ಆರಂಭ ನೀಡಿದರು. ಬಳಿಕ ಕಣಕ್ಕಿಳಿದ ಶ್ಯಾಂಟೋ(47*) ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದರು. 2ನೇ ವಿಕೆಟ್‌ಗೆ 84 ರನ್ ಕಲೆಹಾಕಿದ ಈ ಜೋಡಿ ತಂಡದ ಮೊತ್ತವನ್ನ 150ರ ಗಡಿದಾಟಿಸಿದರು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಲಿಟನ್ ದಾಸ್(73) ಅರ್ಧಶತಕ ಸಿಡಿಸಿದರೆ. ಸರಣಿಯಲ್ಲಿ ಉತ್ತಮ ಫಾರ್ಮ್ ಹೊಂದಿರುವ ಶ್ಯಾಂಟೋ(47*) ರನ್‌ಗಳಿಸಿ ಮಿಂಚಿದರು. ಇಂಗ್ಲೆಂಡ್ ಪರ ಜೋರ್ಡನ್ ಹಾಗೂ ರಶೀದ್ ತಲಾ 1 ವಿಕೆಟ್ ಪಡೆದರು.
ಬಾಂಗ್ಲಾದೇಶ ನೀಡಿದ 159 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಪ್ರವಾಸಿ ಇಂಗ್ಲೆಂಡ್ ಆರಂಭಿಕ ಆಘಾತ ಕಂಡಿತು. ಆರಂಭಿಕನಾಗಿ ಕಣಕ್ಕಿಳಿದ ಫಿಲಿಪ್ ಸ್ಲಟ್(0) ಖಾತೆ ತೆರೆಯುವ ಮೊದಲೇ ನಿರ್ಗಮಿಸಿದರೆ.
ಅಂತಿಮ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ನಿಂದ ಮಿಂಚಿದ ಲಿಟನ್ ದಾಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ. ಮೂರು ಪಂದ್ಯಗಳ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಹೊಸೈನ್ ಶ್ಯಾಂಟೋ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
Ban v Eng, England, Bangladesh, T20I Series, Clean Sweep