ಗ್ಲೆನ್ ಫಿಲಿಪ್ಸ್(Glen Phillips) (69*) ಜವಾಬ್ದಾರಿಯುತ ಅರ್ಧಶತಕ ಹಾಗೂ ಲೂಕ್ಕಿ ಫೆರ್ಗುಸನ್(Lockie Ferguson)(4/14) ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಐರ್ಲೆಂಡ್(Ireland) ವಿರುದ್ಧದ ಮೊದಲ ಟಿ20(1st T20) ಪಂದ್ಯದಲ್ಲಿ ನ್ಯೂಜಿ಼ಲೆಂಡ್(New Zealand) 31 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಬೆಲ್ಫಾಸ್ಟ್ ನಲ್ಲಿರುವ ಸಿವಿಲ್ ಸರ್ವೀಸ್ ಕ್ರಿಕೆಟ್ ಕ್ಲಬ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿ಼ಲೆಂಡ್, ಪ್ರಮುಖರ ವೈಫಲ್ಯದ ನಡುವೆಯೂ 20 ಓವರ್ಗಳಲ್ಲಿ 173/8 ರನ್ ಗಳ ಸವಾಲಿನ ಮೊತ್ತ ಕಲೆಹಾಕಿತು. ಈ ಟಾರ್ಗೆಟ್ ಚೇಸ್ ಮಾಡಿದ ಐರ್ಲೆಂಡ್, 18.2 ಓವರ್ ಗಳಲ್ಲಿ 142 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ನ್ಯೂಜಿ಼ಲೆಂಡ್ 1-0 ಮುನ್ನಡೆ ಪಡೆಯಿತು.
ಫಿಲಿಪ್ಸ್ ಅರ್ಧಶತದ ಆಸರೆ
ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕಿವೀಸ್, ವೈಫಲ್ಯಕ್ಕೆ ಸಿಲುಕಿತು. ಅಗ್ರ ಕ್ರಮಾಂಕದಲ್ಲಿ ಬಂದ ಗಪ್ಟಿಲ್(24) ರನ್ ಗಳ ಉಪಯುಕ್ತ ಕಾಣಿಕೆ ನೀಡಿದರೆ, ಫಿನ್ ಅಲೆನ್(1) ಮತ್ತು ಕ್ಲೆವೆರ್(5) ನಿರೀಕ್ಷಿತ ಆಟವಾಡಲಿಲ್ಲ. ಇವರ ಬೆನ್ನಲ್ಲೇ ಡೆರಿಲ್ ಮಿಚೆಲ್(5) ಸಹ ಪೆವಿಲಿಯನ್ ಸೇರಿದರು. ಈ ವೇಳೆ ಜೊತೆಯಾದ ಗ್ಲೆನ್ ಫಿಲಿಪ್ಸ್ 69 ರನ್(52 ಬಾಲ್, 7 ಬೌಂಡರಿ, 1 ಸಿಕ್ಸ್) ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಸಾಥ್ ನೀಡಿದ ನೀಶಮ್(29) ಹಾಗೂ ಬ್ರೇಸ್ವೆಲ್(21) ಉಪಯುಕ್ತ ರನ್ ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಉಳಿದಂತೆ ಸ್ಯಾಂಟ್ನರ್(2) ಮತ್ತು ಸೋಧಿ(1) ಹೆಚ್ಚು ಹೊತ್ತು ಕಣದಲ್ಲಿರಲಿಲ್ಲ. ಐರ್ಲೆಂಡ್ ಪರ ಜೊಶುವಾ ಲಿಟಿಲ್(4/35), ಅಡೈರ್ 2, ಡಾಕ್ರೆಲ್ ಮತ್ತು ಕ್ಯಾಂಪರ್ ತಲಾ 1 ವಿಕೆಟ್ ಪಡೆದರು.
ಐರ್ಲೆಂಡ್ ಬ್ಯಾಟಿಂಗ್ ವೈಫಲ್ಯ
ನ್ಯೂಜಿ಼ಲೆಂಡ್ ನೀಡಿದ 179 ರನ್ ಟಾರ್ಗೆಟ್ ಚೇಸ್ ಮಾಡಿದ ಐರ್ಲೆಂಡ್ ಸಹ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಲೂಕ್ಕಿ ಫೆರ್ಗುಸನ್(4/14) ದಾಳಿಗೆ ತತ್ತರಿಸಿದ ಐರ್ಲೆಂಡ್ ಪರ ಕರ್ಟಿಸ್ ಕ್ಯಾಂಪರ್(29) ಹಾಗೂ ಮಾರ್ಕ್ ಅಡೈರ್(25) ಹೊರತುಪಡಿಸಿ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಪರಿಣಾಮ 142 ರನ್ ಗಳಿಗೆ ಸರ್ವಪತನ ಕಂಡಿತು. ಕಿವೀಸ್ ಪರ ಫೆರ್ಗುಸನ್ 4 ವಿಕೆಟ್ ಪಡೆದರೆ, ನೀಶಾಮ್ ಮತ್ತು ಸ್ಯಾಂಟ್ನರ್ ತಲಾ 2 ವಿಕೆಟ್ ಪಡೆದರು. ನ್ಯೂಜಿ಼ಲೆಂಡ್ ಗೆಲುವಿಗೆ ಕಾರಣವಾದ ಗ್ಲೆನ್ ಫಿಲಿಪ್ಸ್ ಪಂದ್ಯ ಶ್ರೇಷ್ಠ ಪ್ರದರ್ನ ನೀಡಿದರು. ಉಭಯ ತಂಡಗಳ ನಡುವಿನ ಎರಡನೇ ಟಿ20 ಜುಲೈ 20 ರಂದು ನಡೆಯಲಿದೆ.
IRE v NZ 1st T20I : ಫಿಲಿಪ್ಸ್ ಅರ್ಧಶತಕ, ಫೆರ್ಗುಸನ್ ಮಾರಕ ದಾಳಿ