Irani Trophy: ಸೌರಾಷ್ಟ್ರಕ್ಕೆ ಆಧಾರವಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು
ಇರಾನಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಸೌರಾಷ್ಟ್ರ ತಂಡಕ್ಕೆ ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರರು ಆಧಾರವಾಗಿದ್ದರೆ. ಅಲ್ಲದೆ ರೆಸ್ಟ್ ಆಫ್ ಇಂಡಿಯಾ ವಿರುದ್ಧ 92 ರನ್ ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಕಾರಣರಾಗಿದ್ದಾರೆ.
ಸೋಮವಾರ ಸೌರಾಷ್ಟ್ರ ಎರಡನೇ ಇನ್ನಿಂಗ್ಸ್ ನ್ನು 2 ವಿಕೆಟ್ ಗೆ 49 ರನ್ ಗಳಿಂದ ಆಟ ಮುಂದುವರಿಸಿ, ದಿನದಾಟದಂತ್ಯಕ್ಕೆ 8 ವಿಕೆಟ್ ಗೆ 368 ರನ್ ಕಲೆ ಹಾಕಿದೆ. ಪ್ರೇರಕ್ ಮಂಕದ್ ಹಾಗೂ ನಾಯಕ ಜಯದೇವ್ ಮಂಗಳವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಎರಡನೇ ಇನ್ನಿಂಗ್ಸ್ ನಲ್ಲಿ ಚಿರಾಗ್ ಜಾನಿ (6), ಧರ್ಮೆಂದರ್ ಸಿಂನ್ಹಾ ಜಡೇಜಾ (25), ಚೇತೇಶ್ವರ್ ಪೂಜಾರ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಆರನೇ ವಿಕೆಟ್ ಗೆ ಶೆಲ್ಡನ್ ಜಾಕ್ಸನ್ ಹಾಗೂ ಅರ್ಪಿತ್ ವಾಸವಾದ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 117 ರನ್ ಗಳ ಜೊತೆಯಾಟವಾಡಿತು. ಸುಮಾರು 35 ಓವರ್ ಗಳ ವರೆಗೆ ವಿಕೆಟ್ ಬೀಳದಂತೆ ಕಾಯ್ದುಕೊಂಡ ಬ್ಯಾಟ್ ಮಾಡಿದ ಜೋಡಿ ಅಬ್ಬರಿಸಿತು. ಶೆಲ್ಡನ್ ಜಾಕ್ಸನ್ 117 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಾಯದಿಂದ 71 ರನ್ ಸಿಡಿಸಿ ಮುಕೇಶ್ ಕುಮಾರ್ ಗೆ ವಿಕೆಟ್ ಒಪ್ಪಿಸಿದರು.
ಶೆಲ್ಡನ್ ಔಟ್ ಆಗುತ್ತಿದ್ದಂತೆ ಅರ್ಪಿತ್ ಸಹ ವಿಕೆಟ್ ಒಪ್ಪಿಸಿದರು. ಇವರು 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 55 ರನ್ ಸಿಡಿಸಿದರು.
ಎಂಟನೇ ವಿಕೆಟ್ ಗೆ ಪ್ರೇರಕ್ ಮಂಕದ್ ಹಾಗೂ ಜಯದೇವ್ ಉನಾದ್ಕಟ್ ಜೋಡಿ ಅಮೋಘ ಬ್ಯಾಟಿಂಗ್ ನಡೆಸಿತು. ಈ ಜೋಡಿ ಮುರಿಯದ 144 ರನ್ ಜೊತೆಯಾಟ ನೀಡಿ ಅಬ್ಬರಿಸಿತು. ಪ್ರೇರಕ್ ಮಂಕದ್ 72 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಹಾಗೂ ನಾಯಕ ಜಯದೇವ್ ಅಜೇಯ 78 ರನ್ ಸಿಡಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Irani Trophy, Saurashtra, Rest of India,