ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2024ರ ಆವೃತ್ತಿ ಹಿನ್ನೆಲೆಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನೂತನ ಹೆಡ್ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್ ಅವರನ್ನ ನೇಮಕ ಮಾಡಲಾಗಿದೆ.
ಐಪಿಎಲ್ನಲ್ಲಿ ಕಳೆದೆರಡು ಆವೃತ್ತಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಲಕ್ನೋ ತಂಡದ ಹಾಲಿ ಕೋಚ್ ಆಗಿದ್ದ ಆಂಡಿ ಫ್ಲವರ್ ಅವರ ಎರಡು ವರ್ಷಗಳ ಒಪ್ಪಂದ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ತಂಡದ ನೂತನ ಕೋಚ್ ಆಗಿ ಜಸ್ಟಿನ್ ಲ್ಯಾಂಗರ್ ಅವರನ್ನ ಹೆಡ್ ಕೋಚ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ. ಮಾಜಿ ಕ್ರಿಕೆಟಿಗ ಆಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಐಪಿಎಲ್ನ ಎರಡು ಋತುಗಳಲ್ಲಿ(2022 ಮತ್ತು 2023) ಉತ್ತಮ ಪ್ರದರ್ಶನ ನೀಡಿದ್ದ ಲಕ್ನೋ ತಂಡ, ಎರಡು ಸೀಸನ್ಗಳಲ್ಲಿ ಪ್ಲೇ-ಆಫ್ ತಲುಪುವಲ್ಲಿ ಯಶಸ್ವಿಯಾಗಿತ್ತು.
JUST IN: LANGER! 💙🙏 pic.twitter.com/UYu6XSfgIX
— Lucknow Super Giants (@LucknowIPL) July 14, 2023
ಲಕ್ನೋ ತಂಡದ ಮಾಜಿ ಕೋಚ್ ಆಂಡಿ ಫ್ಲವರ್ ಸದ್ಯ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಸಲಹಗಾರನಾಗಿ ಜವಾಬ್ದಾರಿ ನಿರ್ವಹಿಸುದ್ದಾರೆ. ಈ ನಡುವೆ ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್ 2022 ರಲ್ಲಿ ಆಸ್ಟ್ರೇಲಿಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಸದ್ಯ ನಡೆಯುತ್ತಿರುವ ಆಶಸ್ 2023 ರಲ್ಲಿ ಬ್ರಾಡ್ಕ್ಯಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಜಸ್ಟಿನ್ ಲ್ಯಾಂಗರ್ ಅವರನ್ನ ತಂಡದ ಕೋಚ್ ಆಗಿ ನೇಮಕ ಮಾಡಿರುವ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
IPL Cricket, Justin Langer, Lucknow Super Giants, Sports Karnataka