IPL Auction- ಚೆನ್ನೈ ನಲ್ಲಿ ಸಿಎಸ್ ಕೆ ಸೂಪರ್ ಸ್ಟಾರ್ ಎಮ್.ಎಸ್. ಧೋನಿ ಪ್ರತ್ಯಕ್ಷ..!
ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈಗೆ ಬಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 27ರಿಂದ ಆರಂಭವಾಗುವ ಸಾಧ್ಯತೆ ಇದೆ. ಇದಕ್ಕು ಮುನ್ನ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ.
ಹೀಗಾಗಿ ಮಹೇಂದ್ರ ಸಿಂಗ್ ಧೋನಿ ಅವರು ಸಿಎಸ್ ಕೆ ತಂಡದ ಹೆಡ್ ಕ್ವಾರ್ಟರ್ ಚೆನ್ನೈಗೆ ಬಂದಿದ್ದಾರೆ. ಐಪಿಎಲ್ ಮೆಗಾ ಹರಾಜಿಗೆ ಮುನ್ನ ಸಿಎಸ್ ಕೆ ನಾಯಕ ಸಿಎಸ್ ಕೆ ತಂಡದ ಟೀಮ್ ಮ್ಯಾನೇಜ್ ಮೆಂಟ್ ಜೊತೆಗೂ ಚರ್ಚೆ ನಡೆಸಲಿದ್ದಾರೆ.
ಅಂದ ಹಾಗೇ ಮಹೇಂದ್ರ ಸಿಂಗ್ ಧೋನಿ ಅವರು ಸಿಎಸ್ ಕೆ ತಂಡದ ಆಟಗಾರ, ನಾಯಕ ಮಾತ್ರವಲ್ಲ. ಇಡೀ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಸಿಎಸ್ ಕೆ ತಂಡದ ಆಟಗಾರರ ಆಯ್ಕೆಯ ಹಿಂದೆ ಧೋನಿಯ ಮಾಸ್ಟರ್ ಮೈಂಡ್ ಕೂಡ ಇದೆ ಎಂಬುದು ಗೊತ್ತಿಲ್ಲದ ವಿಚಾರವೇನೂ ಅಲ್ಲ.
IPL Auction: Mahendra singh Dhoni Lands In Chennai
ಈ ಬಾರಿಯ ಐಪಿಎಲ್ ಟೂರ್ನಿಗೆ ಚೆನ್ನೈ ತಂಡ ನಾಲ್ಕು ಮಂದಿ ಆಟಗಾರರನ್ನು ಉಳಿಸಿಕೊಂಡಿದೆ. ಧೋನಿ, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್ ಮತ್ತು ಮೋಯಿನ್ ಆಲಿ ಅವರು ತಂಡದಲ್ಲಿದ್ದಾರೆ.
ರವೀಂದ್ರ ಜಡೇಜಾ 16 ಕೋಟಿ, ಧೋನಿ 12 ಕೋಟಿ, ಋತುರಾಜ್ ಗಾಯಕ್ವಾಡ್ 6 ಕೋಟಿ ಹಾಗೂ ಮೋಯಿನ್ ಆಲಿ 8 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿದೆ.
ಹಾಲಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ನ ಪರ್ಸ್ ನಲ್ಲಿ 58 ಕೋಟಿ ರೂಪಾಯಿ. ಐಪಿಎಲ್ ಬಿಡ್ಡಿಂಗ್ ನಲ್ಲಿ ಯಾವೆಲ್ಲಾ ಆಟಗಾರರನ್ನು ಖರೀದಿ ಮಾಡುತ್ತೆ ಅನ್ನೋದನ್ನು ಕಾದು ನೋಡಬೇಕು.