ಫಾಫ್ ಡುಪ್ಲೇಸಿಸ್ ಅವರನ್ನು ಸೇರಿಸಿಕೊಳ್ಳಲು ಆರ್ ಸಿಬಿ ಹಾಗೂ ಸಿಎಸ್ ಕೆ ತಂಡಗಳು ಕಸರತ್ತು ನಡೆಸಿದವು. ಈ ವೇಳೆ ಇವರ ಬೆಲೆ 3.60 ಕೋಟಿ ಆಗಿದ್ದಾಗ ದೆಹಲಿ ಬಿಡ್ ಗೆ ಎಂಟ್ರಿ ನೀಡಿತು. ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲೇ ಬೇಕು ಎಂಬ ದೃಢ ನಿರ್ಧಾರ ಮಾಡಿದ್ದ ಆರ್ ಸಿಬಿ ಇವರಿಗೆ ಹಣವನ್ನು ಹರಿಸುತ್ತಾ ಸಾಗಿತು. ಅಂತಿವಮಾಗಿ ಏಳು ಕೋಟಿ ರೂ.ಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡರು.
ಇನ್ನು ಮೊಹಮ್ಮದ್ ಶಮಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬೆಂಗಳೂರು ತಂಡ ಕಸರತ್ತು ನಡೆಸಿತು. ಆದರೆ ಅವರು ಗುಜರಾತ್ ಟೈಟಾನ್ಸ್ ತಂಡವನ್ನು 6.25 ಕೋಟಿ ರೂಗಳಿಗೆ ಸೇರಿಕೊಂಡರು.