ಬನುಕಾ ರಾಜಪಕ್ಸ(50) ಹಾಗೂ ನಾಯಕ ಶಿಖರ್ ಧವನ್(40) ಭರ್ಜರಿ ಬ್ಯಾಟಿಂಗ್ ಮತ್ತು ಅರ್ಶದೀಪ್ ಸಿಂಗ್(3/19) ಉತ್ತಮ ಬೌಲಿಂಗ್ನಿಂದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಡಿಎಲ್ಎಸ್ ನಿಯಮದನ್ವಯ 7 ರನ್ಗಳ ಗೆಲುವು ಸಾಧಿಸಿತು.
ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 191/5 ರನ್ಗಳಿಸಿತು. ಈ ಟಾರ್ಗೆಟ್ ಚೇಸ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ 16 ಓವರ್ನಲ್ಲಿ 7 ವಿಕೆಟ್ಗೆ 146 ರನ್ಗಳಿಸಿದ್ದ ವೇಳೆ ಸುರಿದ ಮಳೆಯಿಂದಾಗಿ ಪಂದ್ಯವನ್ನ ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಈ ವೇಳೆ ಡಿಎಲ್ಎಸ್ ನಿಯಮದ ಅನ್ವಯ ಪಂಜಾಬ್ ತಂಡಕ್ಕೆ 7 ರನ್ಗಳ ಗೆಲುವು ನೀಡಲಾಯಿತು.
ರಾಜಪಕ್ಸ-ಧವನ್ ಆಸರೆ:
ಮೊದಲು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡಕ್ಕೆ ಪ್ರಭ್ಸಿಮ್ರನ್(23) ಬಿರುಸಿನ ಆರಂಭ ನೀಡಿದರು. ಬಳಿಕ ಜೊತೆಯಾದ ರಾಜಪಕ್ಸ ಕೇವಲ 32 ಬಾಲ್ಗಳಲ್ಲಿ 5 ಬೌಂಡರಿ, 2 ಸಿಕ್ಸ್ ಮೂಲಕ 50 ರನ್ಗಳಿಸಿ ಔಟಾದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ಶಿಖರ್ ಧವನ್(40) ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಉಳಿದಂತೆ ಜಿತೇಶ್ ಶರ್ಮ(21), ರಾಜಾ಼(16), ಕರನ್(26*) ಹಾಗೂ ಶಾರೂಕ್ ಖಾನ್(11*) ರನ್ಗಳಿಸಿದರು. ಕೆಕೆಆರ್ ಪರ ಸೌಥಿ 2, ಉಮೇಶ್ ಯಾದವ್, ನರೈನ್ ಹಾಗೂ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.
ಕೆಕೆಆರ್ ವ್ಯರ್ಥ ಹೋರಾಟ:
ಪಂಜಾಬ್ ನೀಡಿದ 192 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನತ್ತಿದ ಕೆಕೆಆರ್ ಆರಂಭಿಕ ಆಘಾತ ಅನುಭವಿಸಿತು. ಅಗ್ರ ಕ್ರಮಾಂಕದಲ್ಲಿ ಬಂದ ಮನ್ದೀಪ್ ಸಿಂಗ್(2), ಅನ್ಕೂಲ್ ರಾಯ್(4) ಬ್ಯಾಟಿಂಗ್ ವೈಫಲ್ಯ ಕಂಡರು. ಉಳಿದಂತೆ ರಹಮಾನುಲ್ಲಾ ಗುರ್ಬಾಜ಼್(22), ವೆಂಕಟೇಶ್ ಅಯ್ಯರ್(34), ನಾಯಕ ನಿತೀಶ್ ರಾಣಾ(24) ಹಾಗೂ ಆಂಡ್ರೆ ರಸೆಲ್(35) ರನ್ಗಳಿಸಿದರು. ಈ ವೇಳೆ ಸುರಿದ ಮಳೆಯಿಂದ ಪಂದ್ಯವನ್ನ ಅರ್ಧಕ್ಕೆ ನಿಲ್ಲಿಸಲಾಯಿತು. ಅಲ್ಲದೇ ಡಿಎಲ್ಎಸ್ ನಿಯಮದನ್ವಯ ಪಂಜಾಬ್ ತಂಡಕ್ಕೆ 7 ರನ್ಗಳ ಗೆಲುವು ನೀಡಲಾಯಿತು. ಪಂಜಾಬ್ ಅರ್ಶದೀಪ್ 3 ವಿಕೆಟ್ ಪಡೆದು ಮಿಂಚಿದರೆ, ಸ್ಯಾಮ್ ಕರನ್, ನೇಥನ್ ಎಲ್ಲಿಸ್ ಹಾಗೂ ಸಿಕಂದರ್ ರಾಜಾ ಹಾಗೂ ರಾಹುಲ್ ಚಹರ್ ತಲಾ 1 ವಿಕೆಟ್ ಪಡೆದರು.
IPL 2023, Punjab Kings, Kolkata Knight Riders, Sports Karnataka