ಐಪಿಎಲ್ 15ನೇ ಸೀಸನ್ನ ಪವರ್ ಹಿಟ್ಟರ್ಗಳ ಲಿಸ್ಟ್ನಲ್ಲಿ ಕಾಣಿಸಿಕೊಂಡಿರೋ ವೃದ್ಧಿಮಾನ್ ಸಾಹ, ಮತ್ತೊಂದು ಪವರ್ ಫುಲ್ ಪ್ರದರ್ಶನ ನೀಡೋಕ್ಕೆ ರೆಡಿಯಾಗಿದ್ದಾರೆ.
ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಐಪಿಎಲ್ನಲ್ಲಿ ಖದರ್ ತೋರಿಸಿರೋ ವೃದ್ದಿಮಾನ್ ಸಾಹ, 2022ರ ಐಪಿಎಲ್ನಲ್ಲೂ ಅಬ್ಬರಿಸುತ್ತಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಶಕ್ತಿಯಾಗಿರೋ ಸಾಹ, ಪವರ್-ಪ್ಲೇನಲ್ಲಿ ಅದ್ಭುತ ಆಟವಾಡುತ್ತಿದ್ದಾರೆ. ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್ಮನ್ಗಳನ್ನೇ ಹಿಂದಿಕ್ಕಿರುವ ವೃದ್ಧಿಮಾನ್ ಸಾಹ, ಪ್ರಸಕ್ತ ಸೀಸನ್ನ ಪವರ್-ಪ್ಲೇ ಹಂತದಲ್ಲಿ ಗರಿಷ್ಠ ಸರಾಸರಿ ಹೊಂದಿರುವ ಆಟಗಾರರ ಲಿಸ್ಟ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವೃದ್ಧಿಮಾನ್ ಸಾಹ ಅವರ ಈ ಪ್ರದರ್ಶನ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟಿಂಗ್ ಬಲ ಹೆಚ್ಚಿಸಿದೆ.

ಇನ್ನಿಂಗ್ಸ್ ಆರಂಭದಲ್ಲೇ ಅಬ್ಬರಿಸುತ್ತಾ ಬಂದಿರುವ ವೃದ್ಧಿಮಾನ್ ಸಾಹ, 149ರ ಸರಾಸರಿಯಲ್ಲಿ 149 ರನ್ಗಳಿಸಿದ್ದಾರೆ. ಇವರ ನಂತರದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್(76 ಸರಾಸರಿ), ರಾಜಸ್ಥಾನ್ ರಾಯಲ್ಸ್ ತಂಡದ ಜಾಸ್ ಬಟ್ಲರ್(73 ಸರಾಸರಿ) ಗುರುತಿಸಿಕೊಂಡಿದ್ದಾರೆ. ಈ ಸೀಸನ್ನಲ್ಲಿ ಕೇವಲ 6 ಮ್ಯಾಚ್ಗಳನ್ನಷ್ಟೇ ಆಡಿರುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ವೃದ್ಧಿಮಾನ್ ಸಾಹ, 34.8ರ ಸರಾಸರಿಯಲ್ಲಿ 209 ರನ್ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಒಳಗೊಂಡಿದೆ.
ಅತ್ಯಧಿಕ ಸರಾಸರಿ – ಪವರ್-ಪ್ಲೇನಲ್ಲಿ(IPL 2022)
ಇನ್ನಿಂಗ್ಸ್ ರನ್ಗಳು ಸರಾಸರಿ
ವೃದ್ಧಿಮಾನ್ ಸಾಹ – 6 149 149
ಶ್ರೇಯಸ್ ಅಯ್ಯರ್ – 10 152 76
ಜಾಸ್ ಬಟ್ಲರ್ – 11 292 73
ಡೇವಿಡ್ ವಾರ್ನರ್ – 9 209 69.7
ಇಶಾನ್ ಕಿಶನ್ – 10 152 50.7