IPl 2022- Virat kohli – ಆರ್ ಸಿಬಿ ಮೇಲಿನ ನಿಷ್ಠೆ ಯಾವತ್ತೂ ಬದಲಾಗಲ್ಲ – ವಿರಾಟ್ ಕೊಹ್ಲಿ..

ವಿರಾಟ್ ಕೊಹ್ಲಿ.. ಐಪಿಎಲ್ ನಲ್ಲಿ ಒಂದೇ ಫ್ರಾಂಚೈಸಿಯ ಪರ 15 ವರ್ಷಗಳಿಂದ ಆಡುತ್ತಿದ್ದಾರೆ. 217 ಪಂದ್ಯ, ಐದು ಶತಕ, 6469 ರನ್. ಅಬ್ಬಾ, ವಿರಾಟ್ ಕೊಹ್ಲಿ ಒಬ್ಬ ಆಟಗಾರನಾಗಿ ಐಪಿಎಲ್ ನಲ್ಲಿ ಆರ್ ಸಿಬಿ ಪರ ಅದ್ಭುತವಾದ ಸಾಧನೆಯನ್ನು ಮಾಡಿದ್ದಾರೆ.
ಆದ್ರೆ ನಾಯಕನಾಗಿ ಕಪ್ ಗೆದ್ದಿಲ್ಲ. 140 ಪಂದ್ಯಗಳಲ್ಲಿ 66 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. 70 ಪಂದ್ಯಗಳನ್ನು ಸೋತಿದ್ದಾರೆ. ಅಂಕಿ ಅಂಶಗಳ ಪ್ರಕಾರ ವಿರಾಟ್ ಕೊಹ್ಲಿ ಹಿನ್ನಡೆ ಅನುಭವಿಸಿದ್ದಾರೆ. ಆದ್ರೆ ಆರ್ ಸಿಬಿ ತಂಡಕ್ಕೆ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿದ್ದಾರೆ. ಅದ್ಭುತವಾದ ಆಟದ ಮೂಲಕ ಅಭಿಮಾನಿಗಳ ಬಳಗವನ್ನು ಹೊಂದಲು ವಿರಾಟ್ ಕೊಹ್ಲಿ ಕೂಡ ಕಾರಣ.
ಹೌದು, ಆರ್ ಸಿಬಿ ಮೇಲೆ ವಿರಾಟ್ ಕೊಹ್ಲಿ ಇಟ್ಟಂತಹ ನಿಷ್ಠೆಯನ್ನು ಯಾರು ಕೂಡ ಪ್ರಶ್ನೆ ಮಾಡುವಂಗಿಲ್ಲ. ಕಾರಣ ಆರ್ ಸಿಬಿ ವಿರಾಟ್ ಮೇಲಿಟ್ಟಿರುವ ನಂಬಿಕೆ. ಅದು 2008ರ ಐಪಿಎಲ್ ನಲ್ಲಿ ಎರಡು ಮೂರು ಫ್ರಾಂಚೈಸಿಗಳು ವಿರಾಟ್ ಅವರನ್ನು ಖರೀದಿ ಮಾಡಲು ಮುಂದಾಗಿದ್ದವು. ಆದ್ರೆ ಆ ಫ್ರಾಂಚೈಸಿಗಳಿಗೆ ವಿರಾಟ್ ಕೊಹ್ಲಿ ಮೇಲೆ ನಂಬಿಕೆ ಇರಲಿಲ್ಲ. ವಿರಾಟ್ ಸಾಮಥ್ರ್ಯದ ಬಗ್ಗೆ ವಿಶ್ವಾಸವಿರಲಿಲ್ಲ. ಆದ್ರೂ ಆರ್ ಸಿಬಿ ವಿರಾಟ್ ಕೊಹ್ಲಿಯವರನ್ನು ಖರೀದಿ ಮಾಡಿತ್ತು. ಈ ಕಾರಣಕ್ಕಾಗಿಯೇ ವಿರಾಟ್ ಕೊಹ್ಲಿ ಆರ್ ಸಿಬಿ ತಂಡದಲ್ಲೇ ಉಳಿದುಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ವಿರಾಟ್ ಕೊಹ್ಲಿಯೇ ಹೇಳಿಕೊಂಡಿದ್ದಾರೆ.
ಇದು ನಿಜ. ಇದು ಮುಚ್ಚಿಡುವ ಸಂಗತಿಯಲ್ಲ. ಈ ವಿಚಾರ ಹೇಳಿಕೊಳ್ಳುವುದರಲ್ಲಿ ನನಗೇನು ನಾಚಿಕೆ ಆಗಲ್ಲ. ಹಲವು ಬಾರಿ ಕೆಲವು ಫ್ರಾಂಚೈಸಿಗಳು ನನ್ನನ್ನು ಆಪ್ರೋಚ್ ಮಾಡಿದ್ದವು. ಹರಾಜಿಗೆ ಬನ್ನಿ.. ನಾವು ಖರೀದಿ ಮಾಡುತ್ತೇವೆ ಎಂದು. ಆದ್ರೆ ಅದು ನನಗೆ ಬೇಕಾಗಿರಲಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟುಕೊಂಡ ಫ್ರಾಂಚೈಸಿಯಿಂದ ಹೊರಬರುವ ಆಲೋಚನೆಯನ್ನು

ನಾನು ಮಾಡಲಿಲ್ಲ. ನನ್ನ ಮೇಲೆ ನಂಬಿಕೆಯನ್ನಿಟ್ಟುಕೊಂಡ ತಂಡದ ಮೇಲೆ ನಿಷ್ಢೆಯನ್ನಿಟ್ಟುಕೊಳ್ಳುವುದು ನನ್ನ ಕರ್ತವ್ಯ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ನೀವು ಟ್ರೋಫಿ ಗೆಲ್ಲಬಹುದು.. ಅಥವಾ ವಿಶ್ವ ಚಾಂಪಿಯನ್ ಆಗಬಹುದು.. ಅದು ಕ್ಷಣಿಕ ಅಷ್ಟೇ. ಆ ಒಂದು ಕ್ಷಣದಲ್ಲಿ ನಮ್ಮ ಬಗ್ಗೆ ಮಾತನಾಡಬಹುದು. ಆದ್ರೆ ನಮ್ಮ ನಿಷ್ಢೆ ಮತ್ತು ಒಳ್ಳೆಯತನ ಎಂದೆಂದಿಗೂ ಜೊತೆಗಿರುತ್ತದೆ ಅಂತಾರೆ ವಿರಾಟ್ ಕೊಹ್ಲಿ. ಇಲ್ಲಿ ವಿರಾಟ್ ಕೊಹ್ಲಿ ಅವರಿಗೆ ದುಡ್ಡು, ಪ್ರಶಸ್ತಿಗಿಂತ ನಿಷ್ಠೆ ಮುಖ್ಯ ಎಂಬುದನ್ನು ವಿರಾಟ್ ಕೊಹ್ಲಿ ಬದುಕಿನಲ್ಲಿ ಮೈಗೂಡಿಸಿಕೊಂಡಿದ್ದಾರೆ. Many IPL teams had opportunity to buy me but they didn’t believe in me’: Kohli

ಕ್ರಿಕೆಟ್ ಬದುಕಿನಲ್ಲಿ ನಾನು ಹಲವು ಏಳು ಬೀಳುಗಳನ್ನು ಕಂಡಿದ್ದೇನೆ. 2014ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ನಾನು ಉತ್ತಮವಾಗಿ ಆಡಿರಲಿಲ್ಲ. ಇನ್ನುಳಿದಂತೆ ನಾಲ್ಕು ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದೆ. ಆದ್ರೂ ಇಂಗ್ಲೆಂಡ್ ಪ್ರವಾಸದ ಕೆಟ್ಟ ಸರಣಿಯೇ ಜನರಿಗೆ ನೆನಪು ಜಾಸ್ತಿ ಇರುತ್ತೆ. 2018ರ ನಂತರ ಅದರ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ. ಹೀಗಾಗಿ ನಾನು ಬೇರೆಯವರು ಏನು ಮಾತನಾಡುತ್ತಾರೆ ಎಂಬುದರ ಬಗ್ಗೆ ಯೋಚನೆ ಮಾಡಲ್ಲ. ಅದು ನನಗೆ ಬೇಕಾಗಿಲ್ಲ. ಅಂತಿಮವಾಗಿ ನಾನು ಏನು ಮಾಡುತ್ತಿದ್ದೇನೆ. ನಾನು ಏನು ಮಾಡಿದ್ದೇನೆ ಅನ್ನೋದೇ ಮುಖ್ಯವಾಗಿರುತ್ತದೆ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.