ಬಾ ಗೆಳೆಯ ಮಾತನಾಡೋಣ… ಧೋನಿ – ಗಂಭೀರ್ ನಡುವಿನ ಈ ಸಂಭಾಷಣೆ..!

ಗೌತಮ್ ಗಂಭೀರ್ ಮತ್ತು ಮಹೇಂದ್ರ ಸಿಂಗ್ ಧೋನಿ ನಡುವೆ ಬಿರುಕು..!
ಗೌತಮ್ ಗಂಭೀರ್ ಕ್ರಿಕೆಟ್ ಬದುಕನ್ನು ಮುಗಿಸಿದ್ದೇ ಮಹೇಂದ್ರ ಸಿಂಗ್ ಧೋನಿ..!
ಧೋನಿ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುತ್ತಿದ್ದ ಗೌತಮ್ ಗಂಭೀರ್..!
ಹೌದು, ಗೌತಮ್ ಗಂಭೀರ್ ಮತ್ತು ಮಹೇಂದ್ರ ಸಿಂಗ್ ಧೋನಿ ನಡುವೆ ಉತ್ತಮ ಸಂಬಂಧವಿಲ್ಲ. ಸದಾ ಹಾವು ಮುಂಗೂಸಿಯಂತಿರುತ್ತಾರೆ. ಅದರಲ್ಲೂ ಗೌತಮ್ ಗಂಭೀರ್ ಸದಾ ಧೋನಿಯ ವಿರುದ್ಧ ಟೀಕೆ ಮಾಡುತ್ತಲೇ ಇರುತ್ತಿದ್ದರು. ಇದು ಕಳೆದ ಏಳೆಂಟು ವರ್ಷಗಳಿಂದ ಕೇಳಿ ಬರುತ್ತಿರುವ ಮಾತುಗಳು.
ಆದ್ರೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ಗೌತಮ್ ಗಂಭೀರ್ ಮತ್ತು ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ರು.
ಸಿಎಸ್ ಕೆ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ರೋಚಕ ಜಯ ಸಾಧಿಸಿತ್ತು. ಪಂದ್ಯದ ನಂತರ ಪೆವಿಲಿಯನ್ ನಲ್ಲಿ ಉಭಯ ತಂಡಗಳ ಆಟಗಾರರು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರು ಮಹೇಂದ್ರ ಸಿಂಗ್ ಧೋನಿಗೂ ಅಭಿನಂದನೆ ಸಲ್ಲಿಸಿದ್ರು. ನಂತರ ಧೋನಿ ಮತ್ತು ಗೌತಮ್ ಗಂಭೀರ ಅವರು ಗಂಭೀರವಾದ ಚರ್ಚೆಯಲ್ಲಿ ನಿರತರಾಗಿದ್ದರು. ಹಳೆಯ ದ್ವೇಷವನ್ನು ಮರೆತು ಮಾತನಾಡುತ್ತಿದ್ದ ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.
ಅಂದ ಹಾಗೇ ಧೋನಿ ಮತ್ತು ಗೌತಮ್ ಗಂಭೀರ್ ಏನು ಮಾತನಾಡಿರಬಹುದು ಎಂಬುದು ಗೊತ್ತಿಲ್ಲ. ಆದ್ರೆ ಇಬ್ಬರ ನಡುವಿನ ದ್ವೇಷವನ್ನು ಕ್ರಿಕೆಟ್ ಮರೆ ಮಾಚುವಂತೆ ಮಾಡಿತ್ತು ಎಂಬುದು ಸುಳ್ಳಲ್ಲ.

ಇನ್ನೊಂದೆಡೆ ಇವರಿಬ್ಬರ ಈ ಮಾತುಕತೆಯಿಂದ ಅಭಿಮಾನಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಗೌತಮ್ ಗಂಭೀರ್ ಧೋನಿ ಬಗ್ಗೆ ಟೀಕೆ ಮಾಡಿದ್ದಾಗ ಧೋನಿ ಅಭಿಮಾನಿಗಳು ಕುಪಿತಗೊಂಡು ನಾನಾ ರೀತಿಯ ಕಮೆಂಟ್ ಗಳನ್ನು ಮಾಡುತ್ತಿದ್ದರು. ಆದ್ರೆ ಧೋನಿ ಮತ್ತು ಗಂಭೀರ್ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಅಂದ ಹಾಗೇ, ಗಂಭೀರ್ ಅವರಿಗೆ ಅಸಮಾಧಾನವಿರುವುದು ಸಹಜ. 2011ರ ವಿಶ್ವಕಪ್ ಫೈನಲ್ ನಲ್ಲಿ ಗಂಭೀರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ ಧೋನಿ ಗೆಲುವಿನ ರನ್ ಗಾಗಿ ಬಾರಿಸಿದ್ದ ಆ ಸಿಕ್ಸರ್ ಗಂಭೀರ್ ಅವರ ಮನಮೋಹಕ ಆಟವನ್ನು ಮರೆಮಾಚಿತ್ತು. ಮತ್ತೊಂದೆಡೆ, ಗಂಭೀರ್ ಸೂಕ್ತ ಅವಕಾಶಗಳನ್ನು ನೀಡಿಲ್ಲ. ಕನಿಷ್ಠ ವಿದಾಯದ ಪಂದ್ಯವನ್ನು ಆಡಲು ಕೂಡ ಧೋನಿ ಬಿಡಲಿಲ್ಲ ಎಂಬ ನೋವು ಇದೆ. ಈ ನೋವು, ಬೇಸರಗಳನ್ನು ಗೌತಮ್ ಗಂಭೀರ್ ಸಿಕ್ಕ ಅವಕಾಶದಲ್ಲಿ ಸರಿಯಾಗಿಯೇ ಬಳಸಿಕೊಂಡು ಧೋನಿಗೆ ಟಾಂಗ್ ನೀಡುತ್ತಿದ್ದರು. ಆದ್ರೆ ಧೋನಿ ಯಾವುದಕ್ಕೂ ಉತ್ತರ ನೀಡುತ್ತಿರಲಿಲ್ಲ. IPL 2022: Video of Gautam Gambhir greeting MS Dhoni
ಒಟ್ಟಿನಲ್ಲಿ ಕ್ರೀಡೆ ಬಾಂಧವ್ಯವನ್ನು ಬೆಳೆಸುತ್ತದೆ. ಧ್ವೇಷದ ಬದಲು ಶಾಂತಿಯನ್ನು ಪಸರಿಸುತ್ತದೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನವಷ್ಟೇ.
Gautam Gambhir & MS Dhoni 😭❤️
That's the tweet#MSDhoni𓃵 #CSKvsLSG pic.twitter.com/KcyNHoS8Pd
— Arth Vaishnav EF (@ArthVaishnav) March 31, 2022