ಐಪಿಎಲ್ 2022ರ ಕ್ವಾಲಿಫೈಯರ್-2 ಫೈಟ್ ಕೋಟ್ಯಾಂತರ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಇಂದು ನಡೆಯುವ ಹೈ-ವೋಲ್ಟೇಜ್ ಪಂದ್ಯದಲ್ಲಿ ವಿಶ್ವ ಕ್ರಿಕೆಟ್‌ನ ಮೂವರು ಶ್ರೇಷ್ಠ ಸ್ಪಿನ್ನರ್‌ಗಳು ತಮ್ಮ ಸ್ಪಿನ್ ಜಾದು ಮಾಡೋಕ್ಕೆ ರೆಡಿಯಾಗಿದ್ದಾರೆ.
15ನೇ ಆವೃತ್ತಿಯ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ನಡೆಸಲಿವೆ. ಇಂದಿನ ಈ ರೋಚಕ ಕಾಳಗದಲ್ಲಿ ಎರಡು ತಂಡಗಳ ಬೌಲಿಂಗ್ ಅಸ್ತ್ರವಾಗಿರುವ ಸ್ಪಿನ್ನರ್‌ಗಳು ತಮ್ಮ ಸ್ಪಿನ್ ಕೈಚಳಕ ತೋರಲು ರಣತಂತ್ರ ರೂಪಿಸಿದ್ದಾರೆ. ರಾಜಸ್ಥಾನ್ ತಂಡದಲ್ಲಿ “ಚದುರಂಗಿ ಚಹಲ್” ಖ್ಯಾತಿಯ ಯುಚುವೇಂದ್ರ ಚಹಲ್, “ಕೇರಂ ಸ್ಪೆಷಲಿಸ್ಟ್” ರವಿಚಂದ್ರನ್ ಅಶ್ವಿನ್ ಇದ್ದರೆ. ಇವರಿಬ್ಬರಿಗೆ ತಿರುಗೇಟು ನೀಡಲು ಬೆಂಗಳೂರು ತಂಡದ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ವನಿಂದು ಹಸರಂಗ ತಮ್ಮದೇ ತಂತ್ರ ರೂಪಿಸಿಕೊಂಡಿದ್ದಾರೆ.

ಚಹಲ್ ಸ್ಪಿನ್ ಕಮಾಲ್:
ಈ ಬಾರಿಯ ಐಪಿಎಲ್ ಆರಂಭದಿಂದಲೇ ಯುಜುವೇಂದ್ರ ಚಹಲ್ ತಮ್ಮ ಸ್ಪಿನ್ ಮಾಡಿದ್ದಾರೆ. ಚಾಣಾಕ್ಷ ಬೌಲಿಂಗ್‌ನಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಮಣ್ಣು ಮುಕ್ಕಿಸಿರುವ ಚಹಲ್, ಅತ್ಯಧಿಕ ವಿಕೆಟ್ ಪಡೆದು ʼಪರ್ಪಲ್ ಕ್ಯಾಪ್ʼ ಮುಡಿಗೇರಿಸಿಕೊಂಡಿದ್ದಾರೆ. ಹಲವು ಪಂದ್ಯಗಳಲ್ಲಿ ರಾಜಸ್ಥಾನ್‌ಕ್ಕೆ ಗೆಲುವಿನ ಹೀರೋ ಆಗಿರುವ ಲೆಗ್ ಸ್ಪಿನ್ನರ್, ಇಂದು ತಮ್ಮ ಮಾಜಿ ತಂಡದ ವಿರುದ್ಧ ಕಮಾಲ್ ಮಾಡೋಕ್ಕೆ ರೆಡಿಯಾಗಿದ್ದಾರೆ.
IPL 2022ಯಲ್ಲಿ ಚಹಲ್ ಪ್ರದರ್ಶನ:
ಪಂದ್ಯಗಳು: 15
ವಿಕೆಟ್ಸ್: 26
ಸರಾಸರಿ: 17.77
ಎಕಾನಮಿ: 7.7
ಬೆಸ್ಟ್ : 5/40

ಅಶ್ವಿನ್ ಆಲ್ರೌಂಡ್ ಆಟ:
ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ವಿಭಾಗಕ್ಕೆ ಅನುಭವದ ಬಲ ಹೆಚ್ಚಿಸುವಲ್ಲಿ ಆರ್. ಅಶ್ವಿನ್ ಪ್ರಮುಖ ಪಾತ್ರವಹಿಸಿದ್ದಾರೆ. ಬೌಲಿಂಗ್‌ನಲ್ಲಿ ಹೆಚ್ಚಿನ ಸದ್ದು ಮಾಡದಿದ್ದರೂ, ಅಗತ್ಯ ಸಂದರ್ಭಗಳಲ್ಲಿ ತಂಡದ ಕೈಹಿಡಿಯುತ್ತಾ ಬಂದಿದ್ದಾರೆ. ಈವರೆಗೂ ಬೌಲಿಂಗ್‌ನಿಂದ ಮಿಂಚುತ್ತಿದ್ದ ಅಶ್ವಿನ್, ಈ ಬಾರಿ ತಮ್ಮ ಬ್ಯಾಟಿಂಗ್ ಮೂಲಕವೂ ಅಬ್ಬರಿಸುತ್ತಿದ್ದಾರೆ. ಹಲವು ಪಂದ್ಯಗಳಲ್ಲಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾಗಿರುವ ಆರ್. ಅಶ್ವಿನ್, ಆಲ್ರೌಂಡ್ ಪ್ರದರ್ಶನದ ರಾಯಲ್ಸ್ ಪಡೆಗೆ ಹೊಸ ಭರವಸೆ ಮೂಡಿಸಿರುವುದು ಸುಳ್ಳಲ್ಲ.
IPL 2022ಯಲ್ಲಿ ಅಶ್ವಿನ್ ಪ್ರದರ್ಶನ:
ಪಂದ್ಯಗಳು: 15
ವಿಕೆಟ್ಸ್: 11
ಸರಾಸರಿ: 40.0
ಎಕಾನಮಿ: 7.2
ಬೆಸ್ಟ್: 3/17

ಹಸರಂಗ ಸ್ಪಿನ್ ಜಾದೂ:
ಆರ್‌ಸಿಬಿ ತಂಡದಿಂದ ಯುಜುವೇಂದ್ರ ಚಹಲ್ ಹೊರ ಹೋದ ಬಳಿಕ ತಂಡದ ಸ್ಪಿನ್ ಶಕ್ತಿಯಾಗಿರೋದು ವನಿಂದು ಹಸರಂಗ. ಚಾಣಾಕ್ಷ ಗೂಗ್ಲಿ ಬಾಲ್‌ಗಳಿಂದ ಬ್ಯಾಟ್ಸ್‌ಮನ್‌ಗಳ ಹೆಡೆಮುರಿ ಕಟ್ಟಿರುವ ಹಸರಂಗ, ʼಪರ್ಪಲ್ ಕ್ಯಾಪ್ʼ ರೇಸ್‌ನಲ್ಲಿದ್ದಾರೆ. ಬೌಲಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಿರುವ ವನಿಂದು ಹಸರಂಗ, ಇಂದಿನ ʼರಾಯಲ್ಸ್ ಬ್ಯಾಟಲ್ʼನಲ್ಲಿ ರಾಯಲ್ ಪ್ರದರ್ಶನ ನೀಡೋಕ್ಕೆ ತಯಾರಾಗಿದ್ದಾರೆ.
IPL 2022ಯಲ್ಲಿ ಹಸರಂಗ ಪ್ರದರ್ಶನ:
ಪಂದ್ಯಗಳು: 15
ವಿಕೆಟ್ಸ್: 25
ಸರಾಸರಿ: 16.16
ಎಕಾನಮಿ: 7.62
ಬೆಸ್ಟ್: 5/18