IPL 2022- ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ ಸೇರಿಕೊಂಡ ಶೇನ್ ವಾಟ್ಸನ್..!
ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಶೇನ್ ವಾಟ್ಸನ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಸಿಸ್ಟೆಂಟ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಈ ಮೂಲಕ ಶೇನ್ ವಾಟ್ಸನ್ ಅವರು ಮತ್ತೊಮ್ಮೆ ಐಪಿಎಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಕಿ ಪಾಂಟಿಂಗ್ ಹೆಡ್ ಕೋಚ್ ಆಗಿದ್ದಾರೆ. ಪ್ರವೀಣ್ ಆಮ್ರೆ ಅಸಿಸ್ಟೆಂಟ್ ಕೋಚ್, ಶೇನ್ ವಾಟ್ಸನ್ ಅಸಿಸ್ಟೆಂಟ್ ಕೋಚ್, ಅಜಿತ್ ಅಗರ್ಕರ್ ಅಸಿಸ್ಟೆಂಟ್ ಕೋಚ್ ಹಾಗೂ ಜೇಮ್ಸ್ ಹೋಪ್ಸ್ ಬೌಲಿಂಗ್ ಕೋಚ್ ಆಗಿದ್ದರು. ಇದಕ್ಕಿಗ ಶೇನ್ ವಾಟ್ಸನ್ ಕೂಡ ಸೇರಿಕೊಂಡಿದ್ದಾರೆ.
ಟಿ-20 ಕ್ರಿಕೆಟ್ ನ ಗ್ರೇಟ್ ಆಲ್ ರೌಂಡರ್ ಹಾಗೂ ಐಪಿಎಲ್ ನ ದಂತಕಥೆ ಶೇನ್ ವಾಟ್ಸನ್ ಗೆ ಸ್ವಾಗತ ಎಂದು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದೆ.
ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಲಿಷ್ಠ ತಂಡ ಕಟ್ಟಲು ಹಿರಿಯ ಆಟಗಾರರ ಅನುಭವಗಳನ್ನು ಬಳಸಿಕೊಳ್ಳುತ್ತಿದೆ. IPL 2022: Shane Watson as new assistant coach Delhi Capitals
ವಿಶ್ವದಲ್ಲೇ ಐಪಿಎಲ್ ಶ್ರೇಷ್ಠ ಟೂರ್ನಿ. ಒಬ್ಬ ಐಪಿಎಲ್ ಆಟಗಾರನಾಗಿ ನನಗೆ ಹಲವು ಅವಿಸ್ಮರಣೀಯ ನೆನಪುಗಳು ಇವೆ. 2008ರಲ್ಲಿ ಚಾಂಪಿಯನ್ ರಾಜಸ್ತಾನ ರಾಯಲ್ಸ್ ತಂಡದ ಆಟಗಾರನಾಗಿ, ಆ ನಂತರ ಆರ್ ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನಾಗಿ ಐಪಿಎಲ್ ನಲ್ಲಿ ಆಡಿದ್ದೇನೆ . ಇದೀಗ ತಂಡಕ್ಕೆ ತರಬೇತುದಾರನಾಗಿದ್ದೇನೆ. ಅದರಲ್ಲೂ ಹೆಡ್ ಕೋಚ್ ರಿಕಿ ಪಾಂಟಿಂಗ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ರಿಕಿ ಪಾಂಟಿಂಗ್ ನಾಯಕತ್ವದಲ್ಲೂ ನಾನು ಆಡಿದ್ದೇನೆ. ರಿಕಿ ಪಾಂಟಿಂಗ್ ವಿಶ್ವದ ಶ್ರೇಷ್ಠ ತರಬೇತುದಾರರು ಎಂದು ಶೇನ್ ವಾಟ್ಸನ್ ಹೇಳಿದ್ದಾರೆ.
ಐಪಿಎಲ್ ನಲ್ಲಿ ಶೇನ್ ವಾಟ್ಸನ್ ಅವರು 3875 ರನ್ ದಾಖಲಿಸಿದ್ದಾರೆ. ಹಾಗೇ 92 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.