IPl 2022- ಹೊಸ ಕ್ಯಾಪ್ಟನ್.. ಹೊಸ ಜೆರ್ಸಿ.. ಹೊಸ ಲುಕ್… ವಾರೆ ವ್ಹಾ ಆರ್ ಸಿಬಿ..!

15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಆರ್ ಸಿಬಿ ದೊಡ್ಡ ಪ್ಲಾನ್ ಮಾಡಿಕೊಂಡಿದೆ. 2022ರ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಡಿಫರೆಂಟ್ ಆಗಿ ಕಾಣಿಸಿಕೊಳ್ಳಲಿದೆ. ನಾವೇ ಬೇರೆ ನಮ್ಮ ಸ್ಟೈಲೇ ಬೇರೆ ಅನ್ನೋ ರೀತಿಯಲ್ಲಿರುವ ಆರ್ ಸಿಬಿ ಹೊಸ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ.
ಹೌದು, ಹೊಸ ನಾಯಕ, ಹೊಸ ಜೆರ್ಸಿ, ಹೊಸ ಲುಕ್ ನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಆಡಲಿದೆ.
ಮಾಜಿ ನಾಯಕ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ ವೆಲ್, ಮಹಮ್ಮದ್ ಸೀರಾಜ್ ಅವರನ್ನು ಆರ್ ಸಿಬಿ ರಿಟೇನ್ ಮಾಡಿಕೊಂಡಿತ್ತು. ಇನ್ನುಳಿದ ಆಟಗಾರರನ್ನು ಐಪಿಎಲ್ ಹರಾಜಿನಲ್ಲಿ ಖರೀದಿಸಿತ್ತು. ಆದ್ರೆ ಆರ್ ಸಿಬಿ ಪ್ರಮುಖ ಕನ್ನಡಿಗ ಆಟಗಾರರನ್ನು ಕಡೆಗಣಿಸಿದೆ. ತಂಡದಲ್ಲಿ ಇಬ್ಬರು ಮಾತ್ರ ಕನ್ನಡಿಗರಿದ್ದಾರೆ. ಅದು ಕೂಡ 19 ವಯೋಮಿತಿಯ ಆಟಗಾರರು. IPL 2022- Royal Challengers Bangalore Captaincy announcement, new jersey

ಅದೇನೇ ಇರಲಿ, ಆರ್ ಸಿಬಿ ಹೈಕಮಾಂಡ್ ಪ್ಲಾನ್ ಏನು ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಹಾಗಾಗಿಯೇ ಆರ್ ಸಿಬಿ ಅಭಿಮಾನಿಗಳು ಬಹಳ ಕಾತರದಿಂದ ತಂಡದ ನಾಯಕ ಯಾರಾಗಬಹುದು ಅಂತ ಕಾಯುತ್ತಿದ್ದಾರೆ.
ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸುವಂತೆ ಮಾಡಿರುವ ಆರ್ ಸಿಬಿ ಮ್ಯಾನೇಜ್ ಮೆಂಟ್ ಮಾರ್ಚ್ 12ರಂದು ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಹಮ್ಮಿಕೊಂಡಿದೆ.
ಮಾಚ 12, ಸಂಜೆ 4 ಗಂಟೆಗೆ ಆರ್ ಸಿಬಿಯ ನೂತನ ನಾಯಕನನ್ನು ಘೋಷಣೆ ಮಾಡಲಿದೆ. ಅಲ್ಲದೆ ತಂಡದ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಿದೆ.
ಈಗಾಗಲೇ ಆರ್ ಸಿಬಿ ನಾಯಕತ್ವದ ರೇಸ್ ನಲ್ಲಿ ದಿನೇಶ್ ಕಾರ್ತಿಕ್, ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ಫಾಫ್ ಡುಪ್ಲೇಸಸ್ ಅವರು ಮುಂಚೂಣಿಯಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಮತ್ತು ಫಾಫ್ ಡುಪ್ಲೇಸಸ್ ಹಿರಿಯ ಆಟಗಾರ. ಇನ್ನು ಮ್ಯಾಕ್ಸ್ ವೆಲ್ ಆರಂಭದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಯಾರಿಗೆ ಆರ್ ಸಿಬಿ ಹೈಕಮಾಂಡ್ ಮಣೆ ಹಾಕುತ್ತೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.