IPL 2022- RCB Vs GT- ಆರ್ ಸಿಬಿಯ ಅರ್ಧ ಭವಿಷ್ಯ ಇಂದು ನಿರ್ಧಾರ – ಆರ್ ಸಿಬಿ ಪ್ಲೇಯಿಂಗ್ ಇಲೆವೆನ್
![IPL 2022- RCB Vs GT- ಆರ್ ಸಿಬಿಯ ಅರ್ಧ ಭವಿಷ್ಯ ಇಂದು ನಿರ್ಧಾರ - ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ 3 RCB, IPL 2022, SPORTS KARNATAKA](http://sportskarnataka.com/wp-content/uploads/2022/05/RCB.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅರ್ಧ ಭವಿಷ್ಯ ಇಂದು ಗೊತ್ತಾಗುತ್ತದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 67ನೇ ಪಂದ್ಯದಲ್ಲಿ ಆರ್ ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಕಾದಾಟ ನಡೆಸಲಿವೆ.
ಲೀಗ್ ನ ಕೊನೆಯ ಪಂದ್ಯವನ್ನು ಆಡುತ್ತಿರುವ ಉಭಯ ತಂಡಗಳು ಗೆಲುವಿನ ಜಪದಲ್ಲಿವೆ. ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವ ಗುಜರಾತ್ ಟೈಟಾನ್ಸ್ ಗೆ ಇದೊಂದು ಹಾಗೇ ಸುಮ್ಮನೆಯ ಪಂದ್ಯವಾಗಿದೆ. ಆದ್ರೂ ಗೆಲುವಿನ ಅಭಿಯಾನವನ್ನು ಮುಂದುವರಿಸುವ ಇರಾದೆಯಲ್ಲಿದೆ.
ಆದ್ರೆ ಆರ್ ಸಿಬಿ ಪರಿಸ್ಥಿತಿ ಹಾಗಿಲ್ಲ. ಸದ್ಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶ ಪಡೆಯಲು ಸಾಕಷ್ಟು ಪ್ರಯತ್ನ ಪಡೆಯಬೇಕು. ಅದರಲ್ಲೂ ಡೆಲ್ಲಿ ಮತ್ತು ಮುಂಬೈ ಇಂಡಿಯನ್ಸ್ ತಂಡದ ಫಲಿತಾಂಶವನ್ನು ಕಾಯಬೇಕಿದೆ.
ರನ್ ರೇಟ್ ನಲ್ಲಿ ಹಿಂದಿರುವ ಆರ್ ಸಿಬಿ ಗುಜರಾತ್ ವಿರುದ್ಧ ಬೃಹತ್ ಮೊತ್ತದ ರನ್ ದಾಖಲಿಸಬೇಕು. ಯಾಕಂದ್ರೆ ಆರ್ ಸಿಬಿ ಗುಜರಾತ್ ವಿರುದ್ಧ ಗೆದ್ರೂ, ಇನ್ನೊಂದು ಪಂದ್ಯದಲ್ಲಿ ಡೆಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಬೇಕು. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಗೆದ್ರೆ, ಆರ್ ಸಿಬ ಗುಜರಾತ್ ವಿರುದ್ಧ ಗೆದ್ರೂ ಪ್ರಯೋಜನವೇನೂ ಆಗಲ್ಲ.
ಹೀಗಾಗಿ ಆರ್ ಸಿಬಿಗೆ ಗುಜರಾತ್ ವಿರುದ್ಧ ಪಂದ್ಯ ಹೆಚ್ಚು ಮಹತ್ವದ್ದಾಗಿದೆ.
ಹಾಗೇ ನೋಡಿದ್ರೆ, ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ಮೊದಲ ಪಂದ್ಯವನ್ನು ಸೋತ್ರೂ ನಂತರ ಗೆಲುವು ಸಾಧಿಸಿಕೊಂಡು ಸಾಕಷ್ಟು ಭರವಸೆಯನ್ನು ಮೂಡಿಸಿತ್ತು. ಆದ್ರೆ ಹ್ಯಾಟ್ರಿಕ್ ಸೋಲಿನ ಜೊತೆಗೆ ಪಂಜಾಬ್ ವಿರುದ್ಧ ಸೋತ ನಂತರ ಆರ್ ಸಿಬಿ ಇಕ್ಕಟ್ಟಿಗೆ ಸಿಲುಕಿತ್ತು.
![IPL 2022- RCB Vs GT- ಆರ್ ಸಿಬಿಯ ಅರ್ಧ ಭವಿಷ್ಯ ಇಂದು ನಿರ್ಧಾರ - ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ 4 RCB 1 2](http://sportskarnataka.com/wp-content/uploads/2022/04/RCB-1-2.jpg)
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೋಲಿನ ಮೇಲೆ ಆರ್ ಸಿಬಿ ಭವಿಷ್ಯ ನಿಂತಿದೆ. ಅದೇ ರೀತಿ ಗುಜರಾತ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೂ ಸಿಲುಕಿದೆ.
ಸದ್ಯ 13 ಪಂದ್ಯಗಳನ್ನು ಆಡಿರುವ ಆರ್ ಸಿಬಿ ಏಳು ಪಂದ್ಯಗಳಲ್ಲಿ ಜಯ ಸಾಧಿಸಿದೆ.ಆರು ಪಂದ್ಯಗಳನ್ನು ಸೋತಿದೆ. ರನ್ ರೇಟ್ ನಲ್ಲಿ ಮೈನಸ್ ನಲ್ಲಿದೆ. ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. IPL 2022- RCB Vs GT- Match 67 – RCB Probable XIs
ಅಂದ ಹಾಗೇ ಆರ್ ಸಿಬಿಗೆ ಭಾರಿ ಪೆಟ್ಟು ಕೊಟ್ಟಿದ್ದು ವಿರಾಟ್ ಕೊಹ್ಲಿಯವರ ಕಳಪೆ ಫಾರ್ಮ್. ಸತತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ವಿರಾಟ್ ಕೊಹ್ಲಿ ರನ್ ಬರವನ್ನೇ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ನಾಯಕ ಫಾಫ್ ಡು ಪ್ಲೇಸಸ್ ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ.
ಇನ್ನು ಮೂರನೇ ಕ್ರಮಾಂಕದಲ್ಲಿ ರಜತ್ ಪಟಿದಾರ್ ಅವರು ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಆದ್ರೆ ಮಹಿಪಾಲ್ ಲೊಮ್ರೋರ್ ಅವರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ.
![IPL 2022- RCB Vs GT- ಆರ್ ಸಿಬಿಯ ಅರ್ಧ ಭವಿಷ್ಯ ಇಂದು ನಿರ್ಧಾರ - ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ 5 RCB 6](http://sportskarnataka.com/wp-content/uploads/2022/04/RCB-6.jpg)
ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಪರವಾಗಿಲ್ಲ ಅನ್ನೋ ರೀತಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಆದ್ರೆ ದೊಡ್ಡ ಮೊತ್ತದ ಸ್ಕೋರ್ ಅವರ ಬ್ಯಾಟ್ ನಿಂದ ಬಂದಿಲ್ಲ.
ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್ ಅವರ ಆರಂಭದ ಅಬ್ಬರ ಕಮ್ಮಿಯಾಗಿದೆ. ಶಹಬಾಝ್ ಅಹಮ್ಮದ್ ಕೂಡ ಆಲ್ ರೌಂಡ್ ಆಟವನ್ನಾಡಬೇಕಿದೆ.
ಇನ್ನು ಬೌಲಿಂಗ್ ನಲ್ಲಿ ವನಿಂದು ಹಸರಂಗ ಅದ್ಭುತವಾದ ಪ್ರದರ್ಶನವನ್ನು ನೀಡುತ್ತಿದ್ದಾರೆ. ಹರ್ಷೆಲ್ ಪಟೇಲ್ ಮತ್ತು ಹ್ಯಾಝೆಲ್ ವುಡ್ ಮತ್ತೆ ಬೌಲಿಂಗ್ ಲಯವನ್ನು ಕಂಡುಕೊಳ್ಳಬೇಕಿದೆ. ಇನ್ನೊಂದೆಡೆ ಮಹಮ್ಮದ್ ಸಿರಾಜ್ ದುಬಾರಿಯಾಗುತ್ತಿದ್ದಾರೆ.
ಹೀಗೆ ಸಮಸ್ಯೆಗಳ ಸುಳಿಯಲ್ಲಿರುವ ಆರ್ ಸಿಬಿ ತಂಡ ಮತ್ತೆ ಎಚ್ಚೆತ್ತುಕೊಳ್ಳಬೇಕಿದೆ. ಏನೇ ಆಗ್ಲಿ ಆರ್ ಸಿಬಿ ತಂಡಕ್ಕೆ ಅದೃಷ್ಟದ ಬೆಂಬಲ ಬೇಕು. ಹಾಗೇ ಆರ್ ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ.
ಆರ್ ಸಿಬಿ ಪ್ಲೇಯಿಂಗ್ ಇಲೆವೆನ್
ಫಾಫ್ ಡು ಪ್ಲೇಸಸ್ (ನಾಯಕ)
ವಿರಾಟ್ ಕೊಹ್ಲಿ
ರಜತ್ ಪಟಿದಾರ್
ಮಹಿಪಾಲ್ ಲೊಮ್ರೋರ್
ಗ್ಲೇನ್ ಮ್ಯಾಕ್ಸ್ ವೆಲ್
ದಿನೇಶ್ ಕಾರ್ತಿಕ್
ಶಹಬಾಝ್ ಅಹಮ್ಮದ್
ಹರ್ಷೆಲ್ ಪಟೇಲ್
ವನಿಂದು ಹಸರಂಗ
ಜೋಶ್ ಹ್ಯಾಝೆಲ್ ವುಡ್
ಮಹಮ್ಮದ್ ಸೀರಾಜ್